About Us Advertise with us Be a Reporter E-Paper

ವಿ +

ಗಾಡ್ ಫಾದರ್ ಬೇಕಾಗಿಲ್ಲ..!

ಕೆ.ಬಿ.ಪರಶಿವಪ್ಪ

ಪ್ರತಿಯೊಬ್ಬರೂ ತಮ್ಮ ಯಶಸ್ಸು ಸಾಧ್ಯವಾದದ್ದು ಇಂಥ ವರಿಂದ, ಅವರಿಲ್ಲದೇ ಹೋಗಿದ್ದರೆ ತಾನು ಈ ಎತ್ತರ ವನ್ನು ಏರುವುದು ಸಾಧ್ಯವಾಗುತ್ತಿರಲಿಲ್ಲ ಅಂತ ಹೇಳ್ತಾರೆ. ಸಿನಿಮಾ, ರಾಜಕೀಯ, ವ್ಯಾಪಾರಕ್ಷೇತ್ರ ಹೀಗೆ ಎಲ್ಲೆಲ್ಲಿಯೂ ವ್ಯಕ್ತಿಯೊಬ್ಬ ಯಶಸ್ವೀ ಎನಿಸಿಕೊಳ್ಳುವುದಕ್ಕೆ ಹಲವು ಕಾರಣಗಳಿರುತ್ತವೆ, ಹಲವರು ಕಾರಣೀಭೂತರಾಗಿರುತ್ತಾರೆ. ಅಂಥ ವರಲ್ಲಿ ಒಬ್ಬರನ್ನು ಆಯ್ದು ಆತನಿಗೆ ‘ಗಾಡ್ ಫಾದರ್’  ಕಟ್ಟು ತ್ತಾರೆ. ಒಪ್ಪೋಣ. ಅಂತಹ ಗಾಡ್ ಫಾದರ್‌ಗಳು ಎಲ್ಲರಿಗೂ ಸಿಗು ವುದಿಲ್ಲ. ಬೇಕಾಗಿಯೂ ಇಲ್ಲ. ಗಾಡ್ ಫಾದರ್ ಅಥವಾ ಮಾರ್ಗ ದರ್ಶಕರೇ ಇಲ್ಲದೇ ಶಿಖರದ ತುತ್ತ ತುದಿಯೇರಿ ನಿಂತು ಗೆಲುವಿನ ನಗೆ ಬೀರುವುದಿದೆಯಲ್ಲ, ಅದರಲ್ಲಿರುವ ಖುಷಿ ಅನನ್ಯ. ನಮ್ಮ ನಿಮ್ಮ ನಡುವೆಯೇ ಇರುವ ಅಂತಹ ಒಬ್ಬ ಯಶಸ್ವೀ ವ್ಯಕ್ತಿಯನ್ನು ಕಂಡು, ಖುದ್ದು ಮಾತನಾಡಿಸಿ, ಅವರ ಬದುಕಿನ ನೈಜ ಕಥಾನಕ ವನ್ನು ನಿಮ್ಮ ಮುಂದಿಡುತ್ತಿದ್ದೇನೆ.

ನನ್ನ ಸ್ನೇಹಿತರೂ ಆಗಿರುವ ಈ  ನಾಯಕ ಸುಮಾರು 25 ವರ್ಷಗಳ ಹಿಂದೆ ಪ್ರಿಂಟಿಂಗ್ ಪ್ರೆಸ್ ಒಂದರಲ್ಲಿ ಕೆಲಸ ಮಾಡು ತ್ತಿದ್ದರು. ಪ್ರೆಸ್‌ನಲ್ಲಿ ಕೆಲಸ ಮಾಡುತ್ತಲೇ ಓದನ್ನು ಮುಂದುವರಿ ಸಿದ್ದರು. ಹದಿನೈದರ ವಯಸ್ಸಿನಿಂದಲೇ ದುಡಿಮೆ ಆರಂಭಿಸಿ ಸುಮಾರು ಏಳೆಂಟು ವರುಷ ಕಳೆದರೂ ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸಲಿಲ್ಲ. ಕುಟುಂಬಕ್ಕೆ ಅಂದಿನ ಕಾಲದಲ್ಲೇ ಹದಿನಾರು ಲಕ್ಷ ರುಪಾಯಿ ಸಾಲದ ಹೊರೆ ಇತ್ತು. ಭವಿಷ್ಯತ್ತಿನ ಬಗ್ಗೆ ಉಜ್ವಲವಾದ ಆಶೋತ್ತರಗಳನ್ನು ಹೊತ್ತಿದ್ದ ಈ ಯುವಕ ಏನಾದರೂ ಹೊಸತೊಂದನ್ನು ಸಾಧಿಸಬೇಕೆಂಬ ಮಹತ್ವಾಕಾಂಕ್ಷೆ

ಆ ದಿನಗಳಲ್ಲಿ ಡೈರೆಕ್‌ಟ್ ಮಾರ್ಕೆಟಿಂಗ್ ವ್ಯವಸ್ಥೆ ಬೆಂಗಳೂರಿನಲ್ಲಿ ಆಗ ತಾನೇ ಚಿಗುರುತ್ತಿತ್ತು. ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಡೈರೆಕ್‌ಟ್ ಮಾರ್ಕೆಟಿಂಗ್ ವಹಿ ವಾಟಿನಲ್ಲಿ ಹೆಸರುವಾಸಿಯಾಗಿದ್ದ ಐ ಎಂಬ ಸಂಸ್ಥೆ ನಮ್ಮ ದೇಶದ ಎಲ್ಲಾ ನಗರ-ಪಟ್ಟಣ ಗಳಿಗೂ ಲಗ್ಗೆ ಯಿಟ್ಟಿತ್ತು. ಆ ಸಂಸ್ಥೆಯನ್ನು ನಡೆಸುತ್ತಿದ್ದ ರಾಜ್ ಮತ್ತು ಆಕಾಶ್ ಉದ್ಯಮವಲಯದಲ್ಲಿ ಹೆಸರಾಗಿ ದ್ದರು. ಮುಂದೆ ಇವರು ದೂರ ಸಂಪರ್ಕ ಜಾಲದ ವ್ಯವಹಾರಕ್ಕೆ  ಮುನ್ನುಗ್ಗಿ ಹಚ್ ಕಂಪನಿಯನ್ನು ಶುರು ಮಾಡಿದ್ದರು.

ಪರಿಶ್ರಮದಿಂದ ಗೆಲುವಿನತ್ತ

ನನ್ನ ಈ ಕಥಾನಕದ ಹೀರೋ ಸತ್ಯನಾರಾಯಣ ವ್ಯವಹಾರ ಜಗತ್ತಿನ ಎಲ್ಲ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಐ ಕಂಪನಿಯ ಮಾದರಿಯಲ್ಲಿ ಸಣ್ಣಮಟ್ಟದ ನೇರಮಾರುಕಟ್ಟೆ ವಹಿವಾಟನ್ನು ಶುರು ಮಾಡಿದರು. ಐ ಕಂಪನಿಯಲ್ಲಿ ನಂ.1 ಮರ್ಚೆಂಡೈಸರ್ ಎಂದು ಹೆಸರು ಗಳಿಸಿದ್ದ ಸುನಿಲ್ ಕುಮಾರ ಅವರ ಪರಿಚಯದಿಂದಾಗಿ 1999ರಲ್ಲಿ ಕನ್ಸೂಮರ್ ವರ್ಲ್‌ಡ್ ಎಂಬ ಸಂಸ್ಥೆಯೊಂದನ್ನು ಸ್ಥಾಪಿಸಿದ ಸತ್ಯನಾರಾಯಣ ತಮ್ಮ ಪರಿಶ್ರಮ ದಿಂದ ಗೆಲುವಿನ ತುದಿಯತ್ತ ದಾಪುಗಾಲು ಹಾಕುತ್ತ ಮುನ್ನಡೆ ದರು. ಮನೆಮನೆಗೆ ಹೋಗಿ ಗೃಹೋಪಯೋಗಿ  ಉತ್ಪಾದಕರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸುವ ಕಾಯಕದಲ್ಲಿ ಅದೆಷ್ಟೋ ಮಂದಿ ಯುವಕರು ಸತ್ಯನಾರಾಯಣರ ತಂಡವನ್ನು ಸೇರಿ ಭಾಗಿಯಾದರು. ಹೆಗಲಲ್ಲಿ ಭಾರದ ಹೊರೆ ಹೊತ್ತು ಮನೆ ಮನೆಗೆ ತಿರುಗಿ ವ್ಯಾಪಾರ ಮಾಡುವುದು ಸುಲಭದ ಮಾತೇನಲ್ಲ. ಆದರೆ ಈ ವ್ಯವಹಾರಕ್ಕೆ ಪದಾರ್ಪಣೆ ಮಾಡಿದ ಇವರಿಗೆ ಹೊಸ ಹೊಸ ವಿಚಾರಗಳು ಮನದಲ್ಲಿ ಹೊಳೆಯತೊಡಗಿದ್ದು ಅವರ ಕ್ರಿಯಾಶೀಲತೆಯ ಕಾರಣದಿಂದ.

ಕಲಿಕೆಯೊಂದಿಗೆ ಗಳಿಕೆ

ಇಷ್ಟೆಲ್ಲ ಹೋರಾಟಗಳನ್ನು ಮಾಡಿದ ಇವರು ಡೈರೆಕ್‌ಟ್ ಮಾರ್ಕೆ ಟಿಂಗ್ ವ್ಯವಹಾರದಲ್ಲಿ ದೊಡ್ಡ ಸಾಧನೆಯನ್ನು  ವರ್ಷ ಗಳಲ್ಲಿ ಸಾಧಿಸಿದ್ದರು. ದಿನದಿಂದ ದಿನಕ್ಕೆ ವಹಿವಾಟನ್ನು ಹೆಚ್ಚಿಸಿ ಕೊಳ್ಳುತ್ತಾ ತನ್ನ ಸಂಸ್ಥೆಯಲ್ಲಿ ಸಾವಿರಾರು ಯುವಕರಿಗೆ ಅವಕಾಶ ಕೊಡುತ್ತ ಬಂದರು. ಅದರಲ್ಲೂ ಹತ್ತನೇ ತರಗತಿ ಫೇಲಾದ ಹುಡುಗರ ತಂಡವನ್ನು ಕಟ್ಟಿಕೊಂಡು ಮುನ್ನಡೆದ ಪರಿ ಮತ್ತು ಅದರಿಂದಾಗ ಪರಿಣಾಮ ಅಗಾಧ. ಜೀವನದಲ್ಲಿ ಸೋತವರು, ಹತಾಶರಾದವರು, ಅನುತ್ತೀರ್ಣರಾದವರು, ನಿರುಪಯುಕ್ತರೆಂದು ಮನೆಮಂದಿ ಪರಿಗಣಿಸಿದ ಯುವಕರು ಹೀಗೆ ಎಲ್ಲರನ್ನೂ ಕಲೆಹಾಕಿ ಅವರಿಗೆ ವ್ಯಕ್ತಿತ್ವ ವಿಕಸನದ ಪಾಠ ಭೋದಿಸಿ, ‘ಕಲಿಕೆಯೊಂದಿಗೆ ಗಳಿಕೆ’ ಎಂಬ ಸೂತ್ರವನ್ನು ಅಳವಡಿಸಿಕೊಂಡು  ಮುನ್ನಡೆದು ಅಗಾಧವಾದ ಸಾಧನೆಯನ್ನು ಮಾಡಿದ್ದಾರೆ. ಈಗ ಅವರ ವ್ಯವಹಾರ ಅದೆಷ್ಟು ದೊಡ್ಡದಾಗಿ ಬೆಳೆದಿದೆಯೆಂದರೆ, ಅವರ ಸಮೂಹ ಸಂಸ್ಥೆಯಲ್ಲಿ ಹದಿನೈದಕ್ಕೂ ಹೆಚ್ಚು ಶಾಖೆಗಳಿವೆ. ಅವರ ಸಂಸ್ಥೆಯಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ. ತಮ್ಮ ದುಡಿಮೆಯಿಂದ ಬದುಕು ಕಟ್ಟಿಕೊಂಡು ಕೌಟುಂಬಿಕವಾಗಿಯೂ ನೆಮ್ಮದಿ ಕಂಡುಕೊಂಡಿರುವ ಇವರೆಲ್ಲರೂ ತಮ್ಮ ಗುರು ಮತ್ತು ಮಾರ್ಗದರ್ಶಕ ಸತ್ಯ ನಾರಾಯಣರವರಿಂದ ಸಾಕಷ್ಟನ್ನು ಕಲಿತಿದ್ದಾರೆ. ಡೈರೆಕ್‌ಟ್ ಮಾರ್ಕೆ ಟಿಂಗ್ ಮಾತ್ರವಲ್ಲದೇ, ಆಹಾರೋದ್ಯಮದಲ್ಲಿಯೂ ಇವರು ಮುಂಚೂಣಿಯಲ್ಲಿದ್ದಾರೆ.  ಬ್ಯುಸಿನೆಸ್  ಅಕಾಡೆಮಿ (ಬಿ.ಟಿ.ಎ.) ಎಂಬ ಸಂಸ್ಥೆಯನ್ನು ಹುಟ್ಟುಹಾಕಿರುವ ಇವರು, ಉದ್ಯಮಿಗಳಿಗೆ  ಉದ್ಯಮಶೀಲತೆ ಮತ್ತು ಲಾಭದಾಯ ಕತೆ ಗಳಿಸಿ ಕೊಳ್ಳುವ ಬಗ್ಗೆ ಪರಿಣಾಮಕಾರಿ ತರಬೇತಿಯನ್ನು ಕೊಡುತ್ತಾರೆ. ಜತೆಗೆ ರೋಟರಿ ಕ್ಲಬ್, ಲಯನ್‌ಸ್ ಕ್ಲಬ್‌ನಂತಹ ಪ್ರತಿಷ್ಠಿತ ಸಂಘಟನೆ ಗಳಲ್ಲಿ ಗುರುತಿಸಿಕೊಂಡಿರುವ ಇವರು ಸಮಾಜದಲ್ಲಿ ದೊಡ್ಡ ಹೆಸರು ಮಾಡಿರುವ ಸಾಧಕರ ಸಾಮೀಪ್ಯ ಮತ್ತು ಗೆಳೆತನ ಬೆಳೆಸಿಕೊಂಡಿದ್ದಾರೆ.

ಸತ್ಯನಾರಾಯಣರವರು ಇದೀಗ ಕನ್ಸೂಮರ್ ವರ್ಲ್‌ಡ್, ಕನ್ಸೂಮಾಕ್‌ಸ್ ಪ್ರೈವೆಟ್ ಲಿಮಿಟೆಡ್ ಎಂಬ ಸಂಸ್ಥೆಯೂ ಸೇರಿದಂತೆ ಐದಾರು ಕಂಪನಿಗಳ ಪ್ರವರ್ತಕರಾಗಿ,  ಬ್ಯುಸಿನೆಸ್ ಮ್ಯಾಗ್ನೇಟ್ ಎಂದೆನಿಸಿಕೊಂಡಿದ್ದಾರೆ. ಅರೆಕ್ಷಣವೂ ವಿರಾಮ ವಿಲ್ಲದೇ ದುಡಿಯುವ ಇವರು ತರಬೇತುದಾರರಾಗಿ, ಉದ್ಯಮ ಶೀಲ ಮನೋಭಾವವಿರುವ ಹುಡುಗರನ್ನು ಹುರಿದುಂಬಿಸುವವ ರಾಗಿ ಬಿಡುವಿಲ್ಲದೇ ದುಡಿಯುತ್ತಿದ್ದಾರೆ. ಸುಮಾರು ಐವತ್ತು ಸಾವಿರ ಮಂದಿ ಇವರ ಸಂಸ್ಥೆಯಲ್ಲಿ ತರಬೇತಿ ಪಡೆದು ಬೇರೆ ಬೇರೆ ಕಡೆಗಳಲ್ಲಿ ಉದ್ಯಮಶೀಲರಾಗಿದ್ದಾರೆ.

ಅಂತರಾಷ್ಟ್ರೀಯ ಮಟ್ಟದಲ್ಲೂ ಹೆಸರುವಾಸಿ

ಸೃಜನಶೀಲ ಮನಸ್ಸಿನ ಸತ್ಯನಾರಾಯಣರವರು ಬರಹಗಾರರೂ ಹೌದು. ತಮ್ಮ ವೃತ್ತಿ ಬದುಕಿನ ಅನುಭವಗಳನ್ನೇ ಅಕ್ಷರರೂಪಕ್ಕಿಳಿ ಸಿರುವ ಇವರು, ಇತ್ತೀಚೆಗೆ ಜನಪ್ರಿಯಗೊಂಡಿರುವ ‘ಸೆಲ್ ವೆಲ್’ ಕೃತಿ  ಮೂರು ಮೌಲಿಕ ಕೃತಿಗಳನ್ನು ಬರೆದಿದ್ದಾರೆ. ಇಷ್ಟೆಲ್ಲ ವ್ಯಾಪಾರ ಅನುಭವಗಳಿದ್ದರೂ, ಇಂದಿಗೂ ಸತ್ಯ ನಾರಾಯಣರ  ಹುರುಪು ಕಮ್ಮಿಯಾಗಿಲ್ಲ, ಇಮ್ಮಡಿಯಾಗಿದೆ. ಹೊಸತನವನ್ನು ಕಲಿಯುವ ತುಡಿತ ಅವರಲ್ಲಿ ಸದಾ ಇದೆ. ಹಾಗಾ ಗಿಯೇ ಇವರು ಅಂತಾರಾಷ್ಟ್ರೀಯ ಖ್ಯಾತಿಯ ತರಬೇತು ದಾರ ರಾದ ರಾಬಿನ್ ಶರ್ಮ, ಶಿವ ಖೇರಾ ಮತ್ತಿತರ ಅಗ್ರಗಣ್ಯರ ಸಂಪ ರ್ಕದಲ್ಲಿದ್ದು, ಅವರ ತರಬೇತಿ ಕಾರ್ಯಾಗಾರಗಳಲ್ಲಿ ಪಾಲ್ಗೊ ಳ್ಳುತ್ತಾರೆ. ಇಂತಹ ಅಂತಾರಾಷ್ಟ್ರೀಯ ತರಬೇತುದಾರರ ಶಿಬಿರದ  ಶುಲ್ಕವೇ ಸುಮಾರು ಐವತ್ತು ಸಾವಿರ ರುಪಾಯಿಗೂ

ಇವಿಷ್ಟೇ ಅಲ್ಲದೇ ಇನ್ನೂ ಅನೇಕ ಉದ್ಯಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರ ವಾರ್ಷಿಕ ವಹಿವಾಟು ನೂರು ಕೋಟಿ ರುಪಾಯಿಗಳನ್ನು ದಾಟಿರುವುದು ಕಮ್ಮಿ ಸಾಧನೆಯೇನಲ್ಲ. ಜತೆಗೆ ತಮ್ಮಂತೆ ಉದ್ಯಮಶೀಲರಾಗಲು ಅನೇಕರನ್ನು ಹುರಿ ದುಂಬಿಸಿ ಸಮಾಜಮುಖಿ ಕೆಲಸವನ್ನು ಮಾಡುತ್ತಿದ್ದಾರೆ. (ಮಹತ್ವಾಕಾಂಕ್ಷೆ, ನಿಮ್ಮ ಗೆಲುವು ನಿಮ್ಮಿಂದಲೇ ಪುಸ್ತಕದಿಂದ ಆಯ್ದ ಭಾಗ)

ಯುವ ಉದ್ಯಮಿಯ ಗೆಲುವಿನ ಸೂತ್ರ

  • ಗೆಲುವಿಗೆ ಅಡ್ಡದಾರಿಗಳಿಲ್ಲ, ನೇರ ಮಾರ್ಗದಲ್ಲಿ ನಡೆದರೆ ಸಿಗುವ ಯಶಸ್ಸು ಸುದೀರ್ಘ ಅವಧಿಗೆ ನಮ್ಮೊಂದಿಗೆ ಇರುತ್ತದೆ.
  • ಇಡಿದ ಕೆಲಸವನ್ನು  ತನಕ ಪಟ್ಟುಬಿಡದೇ ಅದಕ್ಕಾಗಿ ದುಡಿ ಯಬೇಕು. ರಜೆ-ವಿರಾಮ ಎಂಬ ಪದಗಳನ್ನು ನಮ್ಮ ಬದುಕಿನ ಪದಕೋಶದಿಂದ ಎತ್ತಿಟ್ಟುಬಿಡಬೇಕು. ಕಮಿಟ್‌ಮೆಂಟ್ ಇದ್ದರೆ ಮಾತ್ರ ಯಶಸ್ಸು ಒಲಿಯುತ್ತದೆ.
  • ತನ್ನನ್ನು ನಂಬಿ, ತನಗಾಗಿ ಕೆಲಸ ಮಾಡುತ್ತಿರುವ ತಂಡದ ಬಗ್ಗೆ ಕಾಳಜಿ ಇರಬೇಕು. ನಂಬಿಕೆ ಬಹುಮುಖ್ಯವಾಗಿ ಇರಬೇಕು. ಒಂದು ಕುಟುಂಬ ದಂತೆ ಕೆಲಸ ಮಾಡಬೇಕು.  ಆಗ ತಂಡ ಮಾಡುವ  ಕೆಲಸ ದೊಡ್ಡ ಮಟ್ಟದ ಫಲಿತಾಂಶವನ್ನು ಕೊಡುತ್ತದೆ.
  • ಹಿಡಿದ ಕೆಲಸದಲ್ಲಿ ಏಳಿಗೆ ಹೊಂದಲು ಹಾರ್ಡ್‌ವರ್ಕ್ ತುಂಬಾ ಮುಖ್ಯ.  ಸ್ಮಾರ್ಟ್‌ವರ್ಕ್ ಕೂಡ ಅಷ್ಟೇ ಮುಖ್ಯ.
  • ವ್ಯಾಪರ ಜಗತ್ತಿನಲ್ಲಿ ಕೇವಲ ಇಂದಿನದ್ದನ್ನಲ್ಲ, ಹತ್ತು ವರುಷಗಳ ಮುಂದಾಗಬಹುದಾದ್ದನ್ನು ಇಂದೇ ಗ್ರಹಿಸಿ ಅದಕ್ಕೆ ತಳಪಾಯವನ್ನು ಹಾಕಿಕೊಂಡು ಮುಂದಡಿಯಿಡಬೇಕು. ಆಗ ನೀವು ಯಶೋ ಮಾರ್ಗ ದಲ್ಲಿ ಮೊದಲಿಗರಾಗಿರುತ್ತೀರಿ.
  •  ಸತ್ಯನಾರಾಯಣ ಅವರ ಈ ಸತ್ಯ ನುಡಿಗಳನ್ನು ನಾವೆಲ್ಲರೂ ಅದರಲ್ಲೂ ಪ್ರಮುಖವಾಗಿ ಈಗಷ್ಟೇ ಓದು ಮುಗಿಸಿ ವ್ಯವಹಾರ ಕ್ಷೇತ್ರಕ್ಕೋ, ವೃತ್ತಿರಂಗಕ್ಕೋ ಕಾಲಿರಿಸುವ ಎಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕು. ಆಗ ಯಶಸ್ಸೆಂಬ ಕುದುರೆಯ ಮೇಲೆ ಸವಾರಿ ಮಾಡುವುದು ಸಾಧ್ಯವಾಗುತ್ತದೆ.
Tags

Related Articles

Leave a Reply

Your email address will not be published. Required fields are marked *

Language
Close