About Us Advertise with us Be a Reporter E-Paper

ಅಂಕಣಗಳು

ಮುಖ್ಯಮಂತ್ರಿ ಪದದ ಗಾಂಭೀರ್ಯವೇ ಅರಿವಾಗಲಿಲ್ಲವೇ ಕುಮಾರಸ್ವಾಮಿಯವರೇ?

ಯಾಕೋ ನನಗೆ  ಅನ್ನಿಸುತ್ತಿದೆ, ನಮ್ಮ ಮುಖ್ಯಮಂತ್ರಿ ಆ ಸ್ಥಾನಕ್ಕೆ ತಕ್ಕಂತೆ ನಡೆದು ಕೊಳ್ಳುತ್ತಿಲ್ಲ. ಮುಖ್ಯಮಂತ್ರಿಯಾಗಿ ಹಿಂದಿನ ಆ 20 ತಿಂಗಳ ಘನತೆ, ಗಾಂಭೀರ್ಯ, ಶ್ರೇಯಸ್ಸು, ಜನಾಧರಣೆ ಎಲ್ಲವೂ ಸರ್ವನಾಮ ಮಸಿ ನುಂಗಿದಂತೆ ಈ ಬಾರಿ ಕಾಣಿಸುತ್ತಿದೆ. ತನ್ನ ಪಕ್ಷದಲ್ಲೂ ಒತ್ತಡ. ಮೊನ್ನೆ ದೆಹಲಿಯ ಭೇಟಿಯಲ್ಲಿ ಅಣ್ಣ ರೇವಣ್ಣ ಅವರ ಅವಸರ, ಅಶಿಸ್ತು, ಉಡಾಫೆ, ಓವರ್‌ಟೇಕ್ ಬುದ್ಧಿ ಮುಖ್ಯಮಂತ್ರಿಗಳಿಗೆ ಸಾಕಷ್ಟು ಕಿರಿಕಿರಿ, ಮುಜುಗರ ತಂದಿದೆ. ಯಾವ ಸಚಿವರೂ ತಮ್ಮ ಸರಕಾರೀ ನಿವಾಸಗಳಿಗೆ ಕೋಟ್ಯಂತರ  ಖರ್ಚು ಮಾಡುವಂತಿಲ್ಲ. ನವೀಕರಣದ ಪ್ರಶ್ನೆಯೇ ಇಲ್ಲ ಎಂದು ಸ್ವತಃ ಕುಮಾರಸ್ವಾಮಿಯವರೇ ತಾಕೀತು ಮಾಡಿದರೂ ಅವರ ಬ್ರದರ್ರೇ ಕ್ಯಾರೇ ಮಾಡುತ್ತಿಲ್ಲ. ರೇವಣ್ಣನವರನ್ನ ಅಡರಿದ ವಾಸ್ತು ಭೂತ ಸರಕಾರೀ ಬಂಗ್ಲೆ ಏನು ಕಳೆದ ವಾರ ಹಾಸನದಲ್ಲಿ ನಿಗದಿಯಾದ ಅಧಿಕಾರಿಗಳ ಸಭೆಯನ್ನು ವಾಸ್ತು ದೋಷದ ಕಾರಣಕ್ಕೆ ಹೊಸ ಐಬಿಯನ್ನು ಕೊನೆ ಘಳಿಗೆಯಲ್ಲಿ ರದ್ದುಗೊಳಿಸಲಾಯಿತು. ಧೂಳು ತುಂಬಿದ, ಚಾಲ್ತಿಯಲ್ಲಿಲ್ಲದ ಅದೇ ಹಳೇ ಬಂಗ್ಲೆಯಲ್ಲೇ ಮೂಗು ಮುಚ್ಚಿಕೊಂಡು ಮೀಟಿಂಗ್ ಮಾಡಲಾಯಿತು. ಅಲ್ಲಿ ದೆಹಲಿಯಲ್ಲಿ ರಾಹುಲ್ ಗಾಂಧಿ  ಸರಕಾರದಲ್ಲಿ ಭ್ರಷ್ಟಾಚಾರದ ಕುರುಹುಗಳನ್ನು ದುರ್ಬೀನು ಹಾಕಿ ಹುಡುಕಲು, ಇಲ್ಲ ಸಲ್ಲದ, ತರ್ಕರಹಿತ ಭ್ರಷ್ಟಾಚಾರದ ಆರೋಪ ಮಾಡಿ ನಗೆಗೀಡಾಗುತ್ತಿದ್ದರೆ, ಇಲ್ಲಿನ ಸಮ್ಮಿಶ್ರ ಸರಕಾರದಲ್ಲಿ ರೇವಣ್ಣ ಸಾಹೇಬರು, ಪ್ರತೀ ವರ್ಗಾವಣೆಗೂ ಇಂತಿಷ್ಟು ಎಂದು ದರಪಟ್ಟಿ ಹಿಡಿದು ರಾಜಾರೋಷವಾಗಿ ಕುಳಿತಿದ್ದಾರೆ. ‘ರಕಂ ನಹೀ… ಹುಕುಂ ಭೀ ನಹೀ’ ಹಣವಿದ್ದರೆ ಬನ್ನಿ. ಇಲ್ಲವಾದರೆ ಈ ಕಡೆ ಮುಖವನ್ನೂ ಹಾಕಬೇಡಿ, ಎಂಬ ಖಡಕ್ ಸೂಚನೆ. ಸಿದ್ದರಾಮಯ್ಯನವರೊಂದಿಗೆ ಶೀತಲ ಸಮರ. ಈ ಕಡೆ ಅಪ್ಪ ಮತ್ತು ಅಣ್ಣನೊಂದಿಗೆ  ಅಧಿಕಾರಿಗಳ ಏಗಾಟ. ಮುಖ್ಯಮಂತ್ರಿ ನಾನೋ ಅಥವಾ ಅಪ್ಪನೋ, ಅಣ್ಣನೋ ಎಂಬ ಸಂದೇಹವೇ ಇನ್ನೂ ಕುಮಾರಣ್ಣಂಗೆ ನಿವಾರಣೆ ಆದಂತಿಲ್ಲ.

ಒಂದೇ ಒಂದು ಶುಭಲಕ್ಷಣ ಏನೆಂದರೆ, ಬರಬಿದ್ದು ಆತಂಕ ಸೃಷ್ಟಿಸಿದ ಕರ್ನಾಟಕಕ್ಕೆ ಬರ್ಪೂರ ಮಳೆ ಆದದ್ದು. ಕೆರೆಕಟ್ಟೆಗಳೆಲ್ಲ ತುಂಬಿ ತುಳುಕಿದ್ದು, ಕೆಆರ್‌ಎಸ್ ದಾಖಲೆ ಪ್ರಮಾಣದಲ್ಲಿ ತುಂಬಿದ್ದು, ಪರ್ಯಾಯ ಮೆಟ್ಟೂರು ಡ್ಯಾಂ ಐದು ವರ್ಷಗಳ ನಂತರ ಫುಲ್ ಆಗಿದೆ. ಹೀಗಾಗಿ ಕ್ಷಣಕ್ಷಣಕ್ಕೂ ‘ನೀರು ಬಿಡಿ, ನೀರು ಬಿಡಿ’ ಎಂದು ಕುತ್ತಿಗೆ ಹಿಡಿಯುತ್ತಿದ್ದ ತಮಿಳುನಾಡು  ತಗ್ಗಿದೆ. ಪರಿಸರ ಮತ್ತು ಕೃಷಿ ವ್ಯವಸಾಯದ, ಕುಡಿಯುವ ನೀರಿನ ತತ್ವಾರದ ದೃಷ್ಟಿಯಿಂದ ಕರ್ನಾಟಕ ಸದ್ಯಕ್ಕೆ ಸುಭಿಕ್ಷ. ಈ ಕಾರಣದಿಂದ ಕುಮಾರಸ್ವಾಮಿ ಅವರ ಕಾಲ್ಗುಣ ಚೆನ್ನಾಗಿದೆ. ಹಾಗೇ ಅವರ ಪೂಜೆ ಪುನಸ್ಕಾರ, ಹೋಮ ಹವನ ಅವರ ‘ಕೈ’ ಹಿಡಿದಿದೆ. ಆದರೆ ಆಡಳಿತ, ಜನಪ್ರೀತಿ, ಸರಕಾರದ ಸುವ್ಯವಸ್ಥಿತ ನಡೆಯ ಹಾದಿಯಲ್ಲಿ ‘ಕೈ’ ಎಷ್ಟು ಹೊತ್ತಿಗೆ ಟಾಟಾ ಮಾಡುತ್ತದೆಯೋ, ಕೈ ಬಿಡುತ್ತದೆಯೋ, ಅಥವಾ ಹಿಡಿದ ಕೈ ತಟ್ಟನೆ ಜಗ್ಗಿ ಮುಳುಗಿಸಿ ಬಿಡುತ್ತದೋ ಕುಮಾರಣ್ಣನವರು  ದೇವರು ದಿಂಡರೇ ಹೇಳಬೇಕು.

ಸಂಪುಟ ವಿಸ್ತರಣೆ, ನಿಗಮ ಮಂಡಳಿಯ ಅಧ್ಯಕ್ಷರ ನೇಮಕಕ್ಕೆ ಸದ್ಯ ಆಷಾಡ ತುಸು ನಿಟ್ಟುಸಿರು ತಂದಿದೆ. ಆಷಾಡ ಕಳೆದ ತಕ್ಷಣ ಎರಡೂ ಪಕ್ಷಗಳಿಂದ ಅಕ್ಷತ ತದಿಗೆ ಆರಂಭ ಆಗೇ ಬಿಡುತ್ತದೆ. ಆಗ ಕುಮಾರಸ್ವಾಮಿ ಅಂಗೈಗೆ, ಮುಂಗೈಗೆ ಮತ್ತು ನೆತ್ತಿಯ ಮೇಲೆ ಯಾವ್ಯಾವ ಕಾಳುಗಳು ಉದುರುತ್ತವೋ ಕಾದೇ ನೋಡಬೇಕು. ಸರಕಾರೀ ಶಾಲಾ ಮಕ್ಕಳಿಗಷ್ಟೇ ಉಚಿತ ಬಸ್‌ಪಾಸ್, ಒಳ್ಳೆಯ ನಿರ್ಧಾರ. ಆದರೆ ಅದೇ ಚನ್ನಪಟ್ಟಣದಲ್ಲಿ ನಡೆದ ಮತದಾರರಿಗೆ ಕೃತಜ್ಞತಾ  ಮುಖ್ಯಮಂತ್ರಿಗಳು ‘ಜಾತಿ ವ್ಯಾಮೋಹಕ್ಕೆ ಮರುಳಾಗಿ ಮತ ಹಾಕಿದ್ದೀರಿ. ಇದೀಗ ನನ್ನ ವಿರುದ್ಧ ಪ್ರತಿಭಟನೆ ನಡೆಸುತ್ತೀರಿ. ನನಗೆ ಓಟು ಹಾಕಿಲ್ಲ ಅಂದ ಮೇಲೆ ಸಾಲ ಮನ್ನಾ ಮಾಡಿ ಎಂದು ಕೇಳುವ ನೈತಿಕ ಹಕ್ಕಿಲ್ಲ’ ಎಂದು ಕೊಪ್ಪಳದಲ್ಲಿ ಸಂಪೂರ್ಣ ಸಾಲಮನ್ನಾಕ್ಕೆ ಆಗ್ರಹಿಸಿ ಪ್ರತಿಭಟಿಸುತ್ತಿರುವ ರೈತ ಸಮುದಾಯಕ್ಕೆ ಕೋಪಾವೇಷದಲ್ಲಿ ಅಬ್ಬರಿಸಿದ್ದಾರೆ. ಚುನಾವಣೆ ಮುಗಿದು, ಅಧಿಕಾರ ಹಿಡಿಯುವ ಚಿತಾವಣೆಯ ಸಂದರ್ಭದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಈ ಬಾರಿ ಮುಸ್ಲಿಂ ಸಮುದಾಯ ನಮಗೆ ಓಟ್ ಹಾಕಿಲ್ಲ  ಮಾತನ್ನ ಆಡಿದ್ದರು. ಹಾಗಿದ್ದರೆ ‘ಜಾತಿ ವ್ಯಾಮೋಹ’ ಅನ್ನುವ ಕುಮಾರಸ್ವಾಮೀ ಅವರ ಮಾತನ್ನ ಲಿಂಗಾಯಿತರು, ವೀರಶೈವರು ಅಂತ ಅನಿವಾರ್ಯವಾಗಿ ಭಾವಿಸಲೇ ಬೇಕು ತಾನೆ. ಗೌಡರ ಮನೆತನದ ರಾಜಕೀಯ ಧೋರಣೆ ಜಾತ್ಯಾತೀತ. ಆದರೆ ಅವರ ರಾಜಕೀಯದ ವರಸೆ, ನೆಲೆ ಜಾತಿ ಆಧರಿತ. ಗೌಡಸಮುದಾಯದ ಮಮತೆ, ಅಲ್ಪಸಂಖ್ಯಾತ ಸಮುದಾಯದ ಶ್ರೀರಕ್ಷೆ. ಲಿಂಗಾಯತ, ವೀರಶೈವ ಮತ್ತು ಬ್ರಾಹ್ಮಣ ದ್ವೇಷ, ಪಕ್ಷಪಾತ. ಮುಖ್ಯಮಂತ್ರಿ ಆಗುವ ಹೊತ್ತಿನಲ್ಲಿ ಶೃಂಗೇರಿಗೆ ಹೋದ, ಅಲ್ಲಿ ಸ್ವಾಮೀಜಿಗಳ ಆಶೀರ್ವಾದ, ತಾಕೀತಿನ ಪರಿಣಾಮ  ದ್ವೇಷಿ, ಪಕ್ಷಪಾತದ ಪ್ರಮಾಣ ಶೇ.25ರಷ್ಟಕ್ಕೆ ಇಳಿಕೆ.

ಕುಮಾರಸ್ವಾಮಿ ಅವರು ಸೂಕ್ಷ್ಮ ಸಂವೇದನಾಶೀಲ ವ್ಯಕ್ತಿತ್ವ ಹೊಂದಿದವರು. ಹಾಗಾಗಿಯೇ ಅವರು ಜನರಿಗೂ, ಮಹಿಳೆಯರಿಗೂ ಹತ್ತಿರ. ಉಳಿದ ರಾಜಕಾರಣಿಗಳಿಗಿಂತ ಹೆಚ್ಚಿನ ಜನಸಂಪರ್ಕ ಹೊಂದಿದವರು. ಬ್ರದರ್ ಬ್ರದರ್ ಅನ್ನುತ್ತಾ ಸಮಾಜದಲ್ಲಿ ಸಹೋದರತ್ವ ಬಿತ್ತಿದವರು. ಅಧಿಕಾರ ರಾಜಕಾರಣದ ಮಹಾ ನಿಸ್ಸೀಮರಾಗಿಯೂ ಕಾಂಗ್ರೆಸ್‌ನೊಂದಿಗಿನ ಕೂಡಿಕೆ ಅವರ ಅಧಿಕಾರದಾಹದ ಒಳ ಖದರ್, ಹೆಬ್ಬಾಸೆಯನ್ನು ತದಕಿಹಾಕಿದೆ. ಹೀಗಾಗಿಯೇ ಸಾರ್ವಜನಿಕವಾಗಿ ಅಳುಮುಂಜಿ ಪಾತ್ರ ಮಾಡಿ ಕೆಟ್ಟ ಹೆಸರು ತಂದುಕೊಂಡರು. ಭಾವುಕ, ಹೃದಯವಂತ,  ಏನೇ ಹೇಳಿ ಅವರ ಕಣ್ಣೀರ ಧಾರೆಯನ್ನ ಸಮರ್ಥಿಸಬಹುದಾದರೂ ಅದು ಒಬ್ಬ ನಾಯಕನ ಗುಣವೂ, ಭಾವವೂ, ತೇಜವೂ, ಧೀಮಂತಿಕೆಯೂ ಆಗಲಾರದು. ಮುಖ್ಯಮಂತ್ರಿ ಪದ ಅದು ರಾಜ್ಯದ ಮುಖ, ಮುಖವಾಣಿ. ಆ ಪದವೇ ಧೈರ್ಯ, ಸ್ಥೈರ್ಯ, ಛಾತಿ, ಇಡೀ ರಾಜ್ಯದ ಸಮೀಕೃತ. ರಾಜ್ಯದ ನಾಯಕನ ಮುಖ, ಅದೇ ಕಂದಿದರೆ, ಧೈರ್ಯಗೆಟ್ಟು ಕುಳಿತರೆ, ಅತ್ತರೆ, ಅದು ಅಸಹಾಯಕತೆ, ಅರಾಜಕತೆ, ಹೇಡಿತನದ ಲಕ್ಷಣ. ನೋಡಿ ಯುರೋಪಿನ ಅದಾವ ನಾಯಕರೂ ಅದೆಂಥಾ ಕಾಠಿಣ್ಯದ ಪರಿಸ್ಥಿಯಲ್ಲೂ ಅಳುವುದಿಲ್ಲ.  ಅವರ ಧೀಮಂತ ನಾಯಕತ್ವ. ಜತೆಗೆ ನಾಯಕತ್ವದ ಸಂವಿಧಾನ. ಕುಮಾರಸ್ವಾಮಿ ಅವರೀಗ ದೇವೇಗೌಡರ ಮಗನೋ, ಜೆಡಿಎಸ್ ನಾಯಕರೋ, ಅನಿತಾ ಕುಮಾರಸ್ವಾಮಿ ಅವರ ಪತಿಯೋ ಅಷ್ಟೇ ಅಲ್ಲ. ಅದೆಲ್ಲರದರ ಆಚೆ, ಅವೆಲ್ಲವನ್ನೂ ಮೀರಿದ ಈ ರಾಜ್ಯದ ನಾಯಕ. ಈ ರಾಜ್ಯದ ಆತ್ಮ. ಈ ರಾಜ್ಯದ ಮಾನ, ಸಮ್ಮಾನದ ಪ್ರತೀಕ.

ಸಮ್ಮಿಶ್ರ ಸರಕಾರ, ಅದರೊಳಗಿನ ಸಂಕಟ, ನರಕ, ಅದೇನಿದ್ದರೂ ಅದು ನಿಮ್ಮ, ನಿಮ್ಮ ಪಕ್ಷದ ಹಣೆಬರಹ. ನಮಗೆ ಅದರ ಗೊಡವೆಯಿಲ್ಲ. ಒಳಗೆ ನೀವೇನಾದರೂ  ಸಾಯಿರಿ, ಹೊರಗೆ, ಆಡಳಿತದಲ್ಲಿ, ವಿಧಾನಸೌಧದಲ್ಲಿ, ನಿಮ್ಮ ನಡೆ-ನಡವಳಿಕೆಯಲ್ಲಿ, ಅಭಿವ್ಯಕ್ತಿಯಲ್ಲಿ ನೀವೊಬ್ಬ ಈ ರಾಜ್ಯದ ಮುಖ್ಯಮಂತ್ರಿ. ನೀವೊಬ್ಬ ಚುನಾಯಿತ ಜನನಾಯಕ (ಸಾರ್ವತ್ರಿಕವಾಗಿ) ಅಲ್ಲದೇ ಇರಬಹುದು. ಜನಾದೇಶ ನಿಮ್ಮ ಪಾಲಿಗೆ ಇಲ್ಲದೇ ಇರಬಹುದು. ಆದರೆ ನೀವು ಸಮ್ಮಿಶ್ರ ಸರಕಾರ ಆಯ್ಕೆ ಮಾಡಿದ, ಸಂವಿಧಾನ ಬದ್ಧವಾಗಿ ಅಧಿಕಾರಕ್ಕೆ ಬಂದ ಕರ್ನಾಟಕದ ಮುಖ್ಯಮಂತ್ರಿ. ಈ ರಾಜ್ಯದ ಕಟ್ಟಕಡೆಯ ವ್ಯಕ್ತಿಗೂ ನೀವೇ ನಾಯಕ. ಹಾಗೇ ನೀವೂ ಅವನಿಗೆ ಉತ್ತರದಾಯಿ. ನಮಗೆ ನೀವು ಬಹುಮತ ನೀಡಿಲ್ಲ, ನೀವು  ನೋಡಿ ಮತ ಹಾಕಿದ್ದೀರಿ. ಆ ಕಾರಣಕ್ಕೆ ನಾನು ನೀಡಿದ ಪ್ರಣಾಳಿಕೆ, ಮಾತು ಉಳಿಸಿಕೊಳ್ಳಲಾಗಲಿಲ್ಲ, ಅನ್ನುವಂತೆಯೇ ಇಲ್ಲ ತಾವು. ಜನಾದೇಶ ಇಲ್ಲದ ಮೇಲೆ, ಏಕಪಕ್ಷ ಬಹುಮತ ಇಲ್ಲದ ಮೇಲೆ ತಾವು ಅಧಿಕಾರಕ್ಕೆ ನಂಬರ್‌ಗೇಮ್ ಮೂಲಕ ಬರಲೇಬಾರದಿತ್ತು. ಬಂದಿದ್ದೀರಿ ಅಂತ ಆದರೆ ಅದು ಪ್ರಜಾಪ್ರಭುತ್ವದ ಆಶಯ. ಫಲಶೃತಿ. ಅದೂ ಕೂಡ ಜನಾದೇಶದ ಭಾಗ. ಪ್ರತಿಯೊಬ್ಬ ಮತದಾರನಿಗೂ ಈ ನಂಬರ್‌ಗೇಮ್‌ನ ಪರಿಣಾಮ, ಫಲ, ಪ್ರಾಯಶ್ಚಿತ್ತ ಲಗಾವ್ ಆಗಲೇಬೇಕು. ನಂಬರ್‌ಗೇಮ್ ಪ್ರಜಾಪ್ರಭುತ್ವದ ಬಹುದೊಡ್ಡ ಮ್ಯಾಜಿಕ್.  ಅತಿಕಡಿಮೆ ಸಂಖ್ಯೆಯಲ್ಲಿ ಆರಿಸಿಬಂದ ಪಕ್ಷವೊಂದರ ಪ್ರತಿನಿಧಿ ಈ ರಾಜ್ಯದ ಮುಖ್ಯಮಂತ್ರಿ, ಅತಿ ಹೆಚ್ಚಿನ ಶಾಸಕರನ್ನು ಗೆಲ್ಲಿಸಿಕೊಂಡು ಬಂದ ಪಾರ್ಟಿಯ ಪ್ರತಿನಿಧಿ ವಿರೋಧಪಕ್ಷದಲ್ಲಿ ಕುಳಿತುಕೊಳ್ಳುವ ‘ಅತ್ಯದ್ಭುತ’ ಘಟಿಸಲು ಹೇಗೆ ಸಾಧ್ಯ?

ನೀವು ಪ್ರಜಾಪ್ರಭುತ್ವದ ಸೈದ್ಧಾಂತಿಕತೆಯ ಆತ್ಯಂತಿಕ ಅಸ್ತ್ರ ಪ್ರಯೋಗದಲ್ಲಿ ಮುಖ್ಯಮಂತ್ರಿ ಆಗಿದ್ದೀರಿ. ಹೇಗೆ ಆದಿರಿ, ಆ ಸ್ಥಾನ ಒಂದು ವ್ಯವಸ್ಥಿತ ಖಾರಸ್ಥಾನದ ಫಲವೇ, ಅಥವಾ ನಿಮಗೆ ಏಕಪಕ್ಷೀಯ ಜನಾದೇಶ ಇತ್ತೇ ಇಲ್ಲವೇ ಅವೆಲ್ಲ ಮುಖ್ಯವೇ ಅಲ್ಲ. ಜನರ ಆದೇಶವೋ, ಅಧಿಕ  ಪ್ರಜಾಪ್ರಭುತ್ವ ವ್ಯವಸ್ಥೆಯ ಕುರಿತಿರುವ ತೀವ್ರ ಅಸಡ್ಡೆಯೋ, ನಿರ್ಲಕ್ಷ್ಯವೋ ಅವೆಲ್ಲ ಚರ್ಚೆಯ ವಿಷಯವೇ ಅಲ್ಲ. ರಾಜ್ಯದಲ್ಲಿ ಮತ ಚಲಾಯಿಸಿದ, ಚಲಾಯಿಸದೇ ಉಳಿದ ಪ್ರತಿಯೊಬ್ಬ ಮತದಾರನೂ ನಿಮ್ಮ ಇಂದಿನ ಅಧಿಕಾರ, ಸ್ಥಾನಕ್ಕೆ ಜವಾಬ್ದಾರ. ಕಾರಣ ನಂಬರ್! 222 ವಿಧಾನಸಭಾ ಕ್ಷೇತ್ರ. ಅದರಲ್ಲಿ 104 ಬಿಜೆಪಿ. ಅವರಿಗೆ ಬಹುಮತಕ್ಕೆ ಕಡಿಮೆ ಬಿದ್ದದ್ದು ಒಂಬತ್ತು ಶಾಸಕರು. ಆ ಒಂಬತ್ತಿನ ಕೊರತೆಯೇ ನಿಮ್ಮಿಬ್ಬರಿಗೆ ವರಪ್ರದ ಆದದ್ದು ತಾನೆ. ಅಂದರೆ ಆ ಒಂಬತ್ತರಲ್ಲಿನ ಒಂದೇ ಒಂದು ಸ್ಥಾನವೂ  ತಾನೆ. ಹಾಗಾಗಿ ನೀವೀಗ ಅವರಿವರು ಓಟು ಹಾಕಿಲ್ಲ ಅಂತ ಅನ್ನುವಂತಿಲ್ಲ. ಲೆಕ್ಕಾಚಾರ ಸಾರ್ವತ್ರಿಕ. ವ್ಯಕ್ತಿಗತ, ಜಾತಿಗತ, ಪ್ರಾಂತಗತ, ಸೀಮೆಗತ ಅನ್ನುವಂತಿಲ್ಲ. ನಿಮ್ಮ ಸ್ಥಾನ ಪವಿತ್ರ ಮತ್ತು ಸಾಮಾಜಿಕ ನ್ಯಾಯದ ಪೀಠವದು. ಅಲ್ಲಿ ಕುಳಿತು ಜಾತಿಪೀಠದ ಸ್ವಾಮೀಜಿಗಳು ಆಡಿದಂತೆ ಆಡುವ, ಮಾಡಿದಂತೆ ಮಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಗೆದ ದ್ರೋಹ. ಹಾಗಾಗಿ ರೈತರಿಗೆ ಜಾತಿ ವ್ಯಾಮೋಹದಿಂದ ಮತ ಹಾಕಿದ್ದೀರಿ. ಪರ್ಯಾಯವಾಗಿ ನೀವು ನಮಗೆ ಮತ ಹಾಕಿಲ್ಲ. ಹಾಗಾಗಿ ನಿಮ್ಮ ಸಮಸ್ಯೆಗೂ, ನನಗೂ  ಅನ್ನುವುದೇ ಆದಲ್ಲಿ ಅದು ಸಾಮಾಜಿಕ ಪಕ್ಷಪಾತ – ವಂಚನೆ. ಜಾತ್ಯಾತೀತತೆ ಈ ದೇಶದ ಸಂವಿಧಾನದ ಉಸಿರು. ನಿಮ್ಮ ಪಕ್ಷದ ಧ್ಯೇಯ. ಆದರೆ ಕಾರ್ಯರೂಪದಲ್ಲಿ ಜಾತಿ ಮಾನದಂಡವೇನು? ನಿಮ್ಮ ಬ್ರದರ್ ವಿಧಾನಸೌಧ ಮತ್ತು ರಾಜ್ಯಾಡಳಿತದಲ್ಲಿ ಸ್ವಜಾತಿಯರನ್ನೇ ಹೆಕ್ಕಿ ಹೆಕ್ಕಿ ತುಂಬುತ್ತಿದ್ದಾರೆ, ಆ ಮಾತು ಬೇರೆ. ನೀವೂ ಇದೇ ಮನೋಭಾವದ ಮುಂದರಿಕೆ ಆದರೆ?

ರೈತ ಅನ್ನದಾತ ಅಂತೀರಿ. ನಾವೂ ರೈತಾಪಿ ಅಂತೀರಿ. ರೈತರ ನೋವಿಗೆ ಸಂಕಟಕ್ಕೆ ಜಾತಿ ಮತ ಬಣ್ಣ ಬಳಿದು  ನೋಡುವುದು ಸರಿಯೇನು? ಮತ ಹಾಕದ, ಹಾಕಿದ ಪ್ರಶ್ನೆಗಿಂತ ಮತ ಚಲಾವಣೆ, ಅದರ ಫಲಿತಾಂಶದ ಅತಂತ್ರತೆಯೇ ನಿಮಗೆ ಮುಖ್ಯಮಂತ್ರಿ ಭಾಗ್ಯ ತಂದಿದ್ದು ಅನ್ನುವುದನ್ನು ಹೇಗೆ ಮರೆಯುತ್ತೀರಿ? ಈ ರೀತಿಯ ಪಕ್ಷಪಾತ ಧೋರಣೆ, ಹೆತ್ತೊಡಲು ತಾನೇ ಹೆತ್ತ ಮಕ್ಕಳಲ್ಲಿಯೂ ವ್ಯವಹಾರ ಕುದುರಿಸಿದ ಅಪರಾಧಕ್ಕೆ ಸಮ. ಮುಖ್ಯಮಂತ್ರಿ ಅಂದರೆ ಈ ನಾಡಿನ ತಾಯಿ ಸ್ಥಾನವದು. ಅಲ್ಲಿ ಪ್ರಜೆಗಳೆಲ್ಲರೂ ಮಕ್ಕಳೇ. ಮಕ್ಕಳಲ್ಲಿ ಬೇಧ ಭಾವ ಮಾಡುವುದು ಆತ್ಮದ್ರೋಹ, ಅಮಾನುಷತೆ ಆಗದೇನು? ಅಷ್ಟಕ್ಕೂ ತಾವು ಮುಖ್ಯಮಂತ್ರಿಯಾಗಿ  ನಡೆಸಲು, ರಾಜ್ಯವನ್ನ ಮುನ್ನಡೆಸಲು ಟೊಂಕಕಟ್ಟಿದ್ದೀರೋ ಅಥವಾ ಪಕ್ಷರಾಜಕೀಯ ಮಾಡಲು, ಲೆಕ್ಕ ಹಾಕಲು ಕುಳಿತಿದ್ದೀರೋ? ಅಲ್ಲಾ ನಿಮ್ಮ ಈ ಸಮ್ಮಿಶ್ರ ಸರಕಾರದ ಹಣೆಬರಹ ಏನಿದ್ದರೂ ಮುಂಬರುವ ಲೋಕಸಭಾ ಚುನಾವಣೆಗೆ ಸೀಮಿತ ಅನ್ನುವುದು ಬಹಿರಂಗ ಸತ್ಯ. ಆ ಚುನಾವಣೆಯಲ್ಲಿ ಮೋದಿ ಅವರನ್ನ ಏನಕೇನ ಬಗ್ಗುಬಡಿಯುವ ಹುಂಬು ನಿರೀಕ್ಷೆ, ಕನಸಿನಲ್ಲಿ ಒಲ್ಲದಿದ್ದರು ತಾವೆಲ್ಲ ಒಗ್ಗೂಡಿದ್ದು ಮತಬಾಂಧವರಿಗೆ ಚೆನ್ನಾಗಿ ಮನವರಿಕೆ ಆಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್‌ನ ಆಂತರಿಕ ಸಂಬಂಧ, ಸ್ನೇಹ, ವಿಶ್ವಾಸಾರ್ಹತೆ ಎಷ್ಟು ಅನ್ನುವುದು  ನಿಮಗಿಂತ ಹೆಚ್ಚು ಅರ್ಥವಾಗಿದೆ. ಪ್ರತೀ ದಿನ, ಕ್ಷಣ ಸಾಕ್ಷಿಯೂ ಸಿಗುತ್ತಿದೆ. ಒಡಕು ಮಡಿಕೆಯಲ್ಲಿ ನೀರು ತುಂಬುವ ಸಾಹಸ ಎಷ್ಟು ದಿನ, ಎಷ್ಟು ದೂರ?

ಇಷ್ಟಾಗಿಯೂ ಕುಮಾರಸ್ವಾಮಿಯವರೇ, ಜನ ನಿಮ್ಮ ಘಟ್‌ಬಂಧನದ ಮೇಲೆ ವಿಶ್ವಾಸ ಇಡದೇ ಇರಬಹುದು. ಆದರೆ ನಿಮ್ಮ ಮೇಲೆ, ನಿಮ್ಮ ವ್ಯಕ್ತಿತ್ವದ ಮೇಲೆ, ನಿಮ್ಮ ಆಡಳಿತದ ಮೇಲೆ ಜನ ಖಂಡಿತ ವಿಶ್ವಾಸ ಇಟ್ಟಿದ್ದರು. ಆದರೆ ನಿಮ್ಮ ನಡವಳಿಕೆ, ಮಾತು, ಕೃತಿ ಆ ವಿಶ್ವಾಸವನ್ನ ಗಂಭೀರವಾಗಿ ಕೆಡಿಸುತ್ತಿದೆ. ನೀವು  ಸ್ಥಾನದ ಘನತೆ, ಗೌರವ, ಆದ್ಯತೆ, ಪಾವಿತ್ರ್ಯತೆಗೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ. ಬಜೆಟ್ಟಿನಲ್ಲಂತೂ ಕುರುಡನಿಗೂ ಕಾಣುವಂತಹ ಪಕ್ಷಪಾತ ಮಾಡಿದಿರಿ. ಯಾಕೆ? ರಾಜ್ಯವೆಂದರೆ ನಿಮ್ಮ, ನಿಮ್ಮ ಪಕ್ಷದ ಅಖಾಡವೇನು? ಅದು ನಿಮ್ಮ ಆಶಯ, ಆಜ್ಞೆಗೆ ತಕ್ಕಂತೆ ಕುಣಿಯಬೇಕೇನು? ನೀವು ಮುಖ್ಯಮಂತ್ರಿಯಾಗಿಯೂ ಸಹೃದಯತೆ, ಸಾಮಾಜಿಕ ನ್ಯಾಯಪರತೆ, ಸರ್ವಸಮಾನತೆ, ಸಮನ್ವಯತೆಯ ಕನಿಷ್ಠ ಪ್ರಜ್ಞೆಯೂ ಇಲ್ಲ ಅಂತ ಆದರೆ, ಛೇ ಪ್ರಜಾಪ್ರಭುತ್ವದ ದುಸ್ಥಿತಿಯೇ? ಪ್ರಜಾಪ್ರಭುತ್ವದ ಮೌಲ್ಯ, ನೆಲೆ ಇಷ್ಟು ದುರ್ಬಲ ಅಂತ ಆದರೆ ಈ ದೇಶಕ್ಕೆ ಪರ್ಯಾಯ  ಸೂತ್ರ, ಸಿದ್ಧಾಂತ ಅಗತ್ಯವಿದೆಯೇ ಹಾಗಾದರೆ?!

ನಿಜಕ್ಕೂ ಈ ದೇಶದ ಜನತಂತ್ರ ವ್ಯವಸ್ಥೆ ಸಂಕರದಲ್ಲಿದೆ. ಸಂಕ್ರಮಣದಲ್ಲಿದೆ. ಅದು ತನ್ನ ಉದಾರತೆಯ ದೌರ್ಬಲ್ಯಕ್ಕೆ ಬಲಿಯಾಗುತ್ತಿದೆ. ಪ್ರಜಾಪ್ರಭುತ್ವ ಎಂಬ ಸಾಮಾಜಿಕ ನ್ಯಾಯದ ಗುಂಗು, ಪರದೆ ಅದರ ಆಚರಣೆಯ ಅಮಾನುಷತೆ ಮತ್ತು ಅಸಂವಿಧಾನಿಕ ಪ್ರಕ್ರಿಯೆಯಿಂದ ಕಳಚಿಬಿದ್ದಿದೆ. ಜನಕಲ್ಯಾಣದ ಪ್ರಜಾಪ್ರಭುತ್ವದ ಆತ್ಮದ ವಿಹಿತ ಹುಟ್ಟಡಗಿದೆ. ಅಪಭ್ರಂಶವಾಗಿದೆ. ರಾಜಕೀಯ, ರಾಜಕಾರಣ ಮತ್ತು ರಾಜಕಾರಣಿಗಳ ಸ್ವಹಿತಾಸಕ್ತಿಯ ಆಟಂಬಾಂಬ್‌ಗೆ ಪ್ರಜಾಪ್ರಭುತ್ವ ಎಂಬ ವ್ಯವಸ್ಥೆ ಛಿದ್ರಗೊಂಡಿದೆ. ಮುಂದೇನು?…

Tags

Related Articles

Leave a Reply

Your email address will not be published. Required fields are marked *

Language
Close