About Us Advertise with us Be a Reporter E-Paper

ಅಂಕಣಗಳು

ಅಳುಮುಂಜಿ ಸಿಎಂ ಎಂಬ ಅಪಹಾಸ್ಯ ನಿಮಗೆ ಬೇಕೇ?

ಹೋಲಿಕೆ: ವಿಕ್ರಮ್ ಜೋಷಿ

ಕುಮಾರಸ್ವಾಮಿಯವರು ಆ ದಿನ ಪಕ್ಷದ ಸಭೆಯಲ್ಲಿ ಎಲ್ಲರೆದುರು ಕಣ್ಣೀರಿಡುವುದನ್ನು ನೋಡುತ್ತಿದ್ದಾಗ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ನೆನಪಾಯಿತು. ಎಂತಹ ಬಲಿಷ್ಠ ಮುಖ್ಯಮಂತ್ರಿ ಅವರು. ಅದ್ಭುತ ನಾಯಕಿ, ಎಂತೆಂಥ ಕಷ್ಟಕೋಟಲೆಗಳು ಎದುರಾದಾಗಲೂ ಕಣ್ಣಿಂದ ಒಂದು ಹುಂಡು ನೀರು  ಬಿದ್ದಿರಲಿಲ್ಲ. ಅಷ್ಟು ಖಡಕ್ ವ್ಯಕ್ತಿತ್ವ ಅವರದ್ದು. ಜಗತ್ತು ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದೆ. ಆದರೆ ಕುಮಾರಸ್ವಾಮಿಯವರು ಸಭೆಯಲ್ಲಿ ಅಳುತ್ತಾರೆ, ಅದೇ ಜಯಲಲಿತಾ ಅವರಾಗಿದ್ದರೆ ತಮ್ಮ ವಿರೋಧಿಗಳನ್ನೇ ನಡುಗಿಸಿ ಅಳಿಸುತ್ತಿದ್ದರು. ತಮಿಳುನಾಡಿಗೆ ವಲಸೆ ಹೋಗಿರಬಹುದು, ಆದರೆ ಜಯಲಲಿತಾ ರವರು ಹುಟ್ಟಿ, ಬೆಳೆದಿದ್ದು ಇದೇ ಮಣ್ಣಿನಲ್ಲಿ. ಮಂಡ್ಯದಲ್ಲಿ ಹುಟ್ಟಿದವರು. ಐಯ್ಯಂಗಾರ್ ಬ್ರಾಹ್ಮಣರು. ಅವರ ತಂದೆ ತೀರಿಕೊಂಡಾಗ ಕೇವಲ ಎರಡು ವರ್ಷದ ಬಾಲೆ. ಜೀವನಕ್ಕೆ ಏನಾದರೂ ಮಾಡಬೇಕಲ್ಲ, ಅದಕ್ಕಾಗಿ ಎರಡು ವರ್ಷದ ಮುದ್ದು  ತನ್ನ ತಂಗಿಯ ಕೈಗೆ ಕೊಟ್ಟು ಜಯಲಲಿತಾರವರ ತಾಯಿ ಮದ್ರಾಸಿಗೆ ಹೊರಟು ಹೋದರು. ತಾಯಿ, ತಂದೆ ಇಲ್ಲದೆ ತಬ್ಬಲಿಯಾದರು ಜಯಲಲಿತಾ. ಎರಡು ವರ್ಷದ ಹಸುಳೆಗೆ ತಾಯಿ ಸಿಗುವುದು ವರ್ಷಕ್ಕೆ ಬರೀ ಎರಡು ವಾರ ಮಾತ್ರ. ಎಂಟು ವರ್ಷಗಳ ತನಕ ಮಗು ಹೀಗೆಯೇ ಅನಾಥವಾಗಿ ಬೆಳೆಯಿತು. ಚಿಕ್ಕಮ್ಮನ ಮದುವೆಯ ನಂತರ ಅಮ್ಮನೊಂದಿಗೆ ಮದ್ರಾಸ್ನಲ್ಲಿ ಬಂದು ನೆಲೆಸಿದರು. ಆಗ ಅವರಿಗೆ ಹತ್ತು ವರ್ಷ. ಅಲ್ಲಿಂದ ಅವರ ವಿದ್ಯಾಭ್ಯಾಸ, ನೃತ್ಯ,ನಾಟಕ, ಸಿನಿಮಾ ಎಲ್ಲವೂ ಶುರುವಾಗಿದ್ದು.  1964ರಲ್ಲಿ ನಟಿಸಿದ ಮೊದಲ ಕನ್ನಡ ಚಲನಚಿತ್ರವೇ ಸೂಪರ್ ಹಿಟ್. ಹೀಗಾಗಿ ಹತ್ತನೇ ತರಗತಿಯಲ್ಲಿ ಇಡೀ ರಾಜ್ಯಕ್ಕೆ ಮೊದಲನೆಯ ಸ್ಥಾನ ಪಡೆದಿದ್ದರೂ ಜಯಲಲಿತಾ ನಟನೆಯನ್ನೇ ಬದುಕಿನ ದಾರಿಯಾಗಿ ಆಯ್ಕೆ ಮಾಡಿಕೊಂಡರು. ನಂತರ ಐದಾರು ವರ್ಷ ಏನೂ ತೊಂದರೆ ಎನ್ನುವುದೇ ಇರಲಿಲ್ಲ.

ಬಾಲ್ಯದ ಕಹಿ ನೆನಪು ಮರೆತು ಬದುಕಿನಲ್ಲಿ ಏನೋ ಒಂದು ದಿಕ್ಕು ಸಿಕ್ಕಿದೆ ಎನ್ನುವಾಗ ದುರ್ದೆಸೆ ಅವರನ್ನು ಮತ್ತೊಮ್ಮೆ ಅಪ್ಪಳಿಸಿತು. ಈ ಬಾರಿ ವಿಧಿಯು ಜಯಲಲಿತಾ ಅವರ ಬದುಕಿನಿಂದ ಅವರ  ಕಸಿದುಕೊಂಡಿತ್ತು. ಆಗ ಜಯಲಲಿತಾ ಅವರಿಗೆ ಕೇವಲ ಇಪ್ಪತ್ತ ಮೂರು ವಯಸ್ಸು. ಹಿಂದಿಲ್ಲ ಮುಂದಿಲ್ಲ ಯಾರು ಗತಿ ಎನ್ನುವಾಗ ಆಶ್ರಯ ಕೊಟ್ಟವರು ಎಂಜಿಆರ್. ಜಗತ್ತನ್ನೇ ಕಾಣದ, ಅನಾಥಳಾಗಿರುವ, ಯೌವನ ತುಂಬಿರುವ ಹೆಣ್ಣೊಬ್ಬಳು ಈ ಸಮಾಜದಲ್ಲಿ ಬದುಕಬೇಕು. ಅದೇನು ಸುಲಭವಾ? ಆ ದಿನಗಳಲ್ಲಿ ಅವರ ಪರಿಸ್ಥಿತಿ ಹೇಗಿದ್ದಿರಬೇಕು? ಆದರೂ ಎದೆಗುಂದದೆ ಬಂದಿದ್ದನ್ನೆಲ್ಲ ಎದುರಿಸಿ ಎಂಜಿಆರ್ ಆಶ್ರಯದಲ್ಲಿ ಬದುಕಿದರು. ಸಿನಿಮಾದಲ್ಲಿ ಅವರಿಗೆ ಅದ್ಭುತ ಯಶಸ್ಸು ಸಿಕ್ಕಿತು. ಎಂಜಿಆರ್ ತಮಿಳುನಾಡಿನ ಜನಪ್ರಿಯ ನಾಯಕರಾದರು, ಮುಖ್ಯಮಂತ್ರಿಯೂ  ಇವರ ನೆರಳಲ್ಲಿ ಜಯಲಲಿತಾ ಕೂಡ ಜನಪ್ರಿಯರಾಗುತ್ತಾ ಹೋದರು. ಜಯಲಲಿತಾ ಮೂವತ್ತೊಂಬತ್ತು ವರ್ಷದವರಿದ್ದಾಗ ಎಂಜಿಆರ್ ನಿಧನರಾದರು. ಈಗ ಜಯಲಲಿತಾರವರ ಹಿಂದೆ ಜನಪ್ರಿಯತೆ ಇತ್ತು, ಮುಂದೆ ವೈರಿಗಳ ದಂಡೇ ಬೇಟೆಯಾಡಲು ಕಾಯುತ್ತಿತ್ತು. ವಿರೋಧ ಪಕ್ಷದ ಗುಂಡಾಗಳು ಬಂದು ಎಂಜಿಆರ್ ಪಾರ್ಥಿವ ಶರೀರದ ಪಕ್ಕ ಕೂತಿದ್ದ ಜಯಲಲಿತಾ ಅವರ ರಟ್ಟೆ ಹಿಡಿದು ದರದರನೆ  ಬೀದಿಯಲ್ಲಿ ಎಳೆದುಕೊಂಡು ಹೋದರು. ಒಬ್ಬ ಹೆಣ್ಣಿಗೆ ಈ ಸಮಾಜ ಕೊಡುವ ಹಿಂಸೆಯನ್ನು ಜಗತ್ತೇ ನೋಡುತ್ತಿತ್ತು. ತಮಿಳುನಾಡಿನ ವಿಧಾನಸಭೆಯಲ್ಲಿ ಜಯಲಲಿತಾರವರು  ವಿರೋಧ ಪಕ್ಷದ ನಾಯಕಿ, ಹೆಣ್ಣು ಎನ್ನುವುದನ್ನೂ ಪರಿಗಣಿಸದೆ ಅವರ ಮೇಲೆ ಅತ್ಯಂತ ಕ್ರೂರವಾಗಿ ವರ್ತಿಲಾಯಿತು. ಆಡಳಿತ ಪಕ್ಷದ ಸದಸ್ಯರು ಅವರು ತೊಟ್ಟ ಸೀರೆಯನ್ನು ಎಳೆದರು, ಸೀರೆ ಹರಿಯಿತು. ಆ ಹರಿದ ಸೀರೆಯಲ್ಲಿಯೇ ಸದನದಿಂದ ಅವರನ್ನು ಹೊರಗೆ ಹೋಗುವಂತೆ ಮಾಡಿದರು. ಇಷ್ಟೇ ಅಲ್ಲ ನಂತರದಲ್ಲಿ ಜಯಲಲಿತಾ ವಿರುದ್ಧ ಅದೆಷ್ಟೋ ಸಂಚು ಹೂಡಿದರು. ಆದರೆ ಒಮ್ಮೆಯಾದರೂ ಅವರು ಕಣ್ಣೀರು ಸುರಿಸಿದ್ದನ್ನು ನೋಡಿದ್ದೀರಾ? ಷಡ್ಯಂತ್ರ,ಆರೋಪ, ಕೋರ್ಟ್, ಜೈಲು ಎಲ್ಲವನ್ನೂ ಜೊತೆ ಯಾರು ಇಲ್ಲದಿದ್ದರೂ  ಬಂದರು. ಆದರೆ ಎಂದಿಗೂ ಜನರ ಮುಂದೆ ಬಂದು ಗೊಳೋ ಅಂತ ಒಂದೇ ಒಂದು ಬಾರಿ ಕಣ್ಣೀರು ಸುರಿಸಲಿಲ್ಲ.

ಕುಮಾರಸ್ವಾಮಿಯವರಿಗೆ ಕಣ್ಣೀರು ಸುರಿಸುವಂಥದ್ದು ಏನಾಗಿದೆ? ದೇಶದಲ್ಲಿ ನಿಪುಣ ರಾಜಕಾರಣಿಗಳ ಪಟ್ಟಿ ಮಾಡಿ ಅಂತ ಯಾರಾದರೂ ಹೇಳಿದರೆ, ಆ ಪಟ್ಟಿಯಲ್ಲಿ ಮೊದಲ ಹೆಸರು ಬರುವುದು ಯಾರದ್ದು ಗೊತ್ತಾ? ಶ್ರೀಯುತ ದೇವೇಗೌಡರು. ಇವತ್ತಿಗೂ ಅವರು ಮಗನ ಬೆನ್ನೆಲುಬಾಗಿ ಹಿಂದಿದ್ದಾರೆ. ಮೂವತ್ತೇಳು ಸೀಟು ಗೆದ್ದ ಮೇಲೂ ಸೋನಿಯಾ ಗಾಂಧಿ ಬಂದು ಕುಮಾರಸ್ವಾಮಿಯವರಿಗೆ ಮುಖ್ಯಮಂತ್ರಿ ಆಗು  ಹಿಂದೆ ದೇವೇಗೌಡರ ಹಿನ್ನೆಲೆ ಇದೆ. ಕುಮಾರಸ್ವಾಮಿ ಒಂಟಿಯಲ್ಲ. ಮಡದಿ ೆ, ಮಕ್ಕಳಿದ್ದಾರೆ, ಅಣ್ಣಂದಿರಿದ್ದಾರೆ, ಎಲ್ಲವೂ ಇದೆ. ಒಮ್ಮೆ ಜಯಲಲಿತಾ ಅವರನ್ನು ನೆನಪಿಸಿಕೊಳ್ಳಿ. ಅವರಿದ್ದ ಪರಿಸ್ಥಿತಿಯಲ್ಲಿ ಎಷ್ಟು ಅಳಬೇಕಿತ್ತು? ವೈಯಕ್ತಿಕ ಜೀವನದಲ್ಲಿ ಆಸರೆಯಿಲ್ಲ, ರಾಜಕೀಯದಲ್ಲಿ ಬಂದರೆ ಕ್ಷಣ ಕ್ಷಣವೂ ಕಚ್ಚಾಟ,ಹೆಣ್ಣಾಗಿ ಹೇಗೆಲ್ಲ ಎಲ್ಲವನ್ನೂ ಎದುರಿಸಿರಬೇಕು ಎಂದು ಕುಮಾರಸ್ವಾಮಿಯವರೇ ವಿಚಾರ ಮಾಡಿ, ತಮ್ಮ ನಡೆಯ ಬಗ್ಗೆ ಅವಲೋಕನ ಮಾಡಿಕೊಳ್ಳಬೇಕು.

ಜಯಲಲಿತಾ ಕಣ್ಣೀರು ಸುರಿಸುವುದು ಹಾಗಿರಲಿ, ’ಅಮ್ಮಾ…’ ಎಂದು ಘಟಾನುಗಟಿಗಳು ಅವರ ಪಾದವನ್ನು  ಸಾಷ್ಟಾಂಗ ನಮಸ್ಕಾರ ಮಾಡಿ ಹೋಗುತ್ತಿದ್ದರು. ಜಯಮ್ಮ ಮನಸ್ಸು ಮಾಡಿದ್ದರೆ ಸಾಗರದಷ್ಟು ಕಣ್ಣೀರು ಹರಿಸಿ ಇನ್ನಷ್ಟು ಜನರ ಅನುಕಂಪ ಪಡೆಯಬಹುದಿತ್ತು. ಆದರೆ ಜಯಲಲಿತಾ ಕೊನೆಯುಸಿರಿನ ತನಕ ತಲೆಯೆತ್ತಿ, ಗೌರವದಿಂದ, ಸಿಂಹದಂತೆ ಬದುಕಿದರು. ಮನಸ್ಸಿನಲ್ಲಿ ಸಿಟ್ಟಿನ, ದುಃಖದ ಜ್ವಾಲಾಮುಖಿಯೇ ಕುದಿಯುತ್ತಿದ್ದರೂ ಒಮ್ಮೆಯೂ ಅದು ಜನರೆದುರು ಕಾಣಲಿಲ್ಲ. ಕಷ್ಟ, ಕಷ್ಟ ಎಂದು ನಡುಗಲಿಲ್ಲ. ‘ಅಮ್ಮ’ ಎಂದರೆ ಇಡೀ ತಮಿಳು ನಾಡೇ ನಡುಗುತ್ತಿತ್ತು.

ಕುಮಾರಸ್ವಾಮಿಯವರೇ, ನಮಗೆ ಅಂತಹ ಒಬ್ಬ ಬಲಿಷ್ಠ ನಾಯಕ ಬೇಕು. ಸರಕಾರ  ಅಷ್ಟು ಕಷ್ಟ ಅನಿಸಿದರೆ, ಜನರಾಡುವ ಮಾತುಗಳು ಕರ್ಣ ಕಠೋರ ಎನಿಸಿದರೆ, ಸಮ್ಮಿಶ್ರ ಸರಕಾರದಲ್ಲಿ ಬೆನ್ನಿಗೆ ಚೂರಿಯ ಸ್ಪರ್ಶದ ಅನುಭವ ಆಗುತ್ತಿದೆ ಎನಿಸಿದರೆ ಮೋದಿಯವರು ಈಜಿ ಬಂದ ರೀತಿಯನ್ನು ನೋಡಿ ಕಲಿಯಿರಿ. ಮೂರು ಸಂಪೂರ್ಣ ಕಾಲಾವಧಿಗೆ ಗುಜರಾತಿನ ಮುಖ್ಯಮಂತ್ರಿಯಾಗಿ  ಒಮ್ಮೆಯಾದರೂ ಧೃತಿಗೆಟ್ಟು ಅತ್ತಿದ್ದು ನೋಡಿದ್ದೀರಾ? ಗುಜರಾತಿನ ಮುಖ್ಯಮಂತ್ರಿ ಆಗಿದ್ದಾಗ ಅವರೇನು ಸುಖದ ಉಪ್ಪರಿಗೆಯಲ್ಲಿದ್ದರೇನು?

ಒಮ್ಮೆ 2002ರ ಘಟನೆ ನೆನಪಿಸಿಕೊಳ್ಳಿ. ರಾತ್ರಿ ಬೆಳಗಾಗುವು ದರೊಳಗೆ ಏನೆಲ್ಲ ನಡೆದು ಹೋಯಿತು. ಮುಖ್ಯಮಂತ್ರಿಯಾಗಿ ಒಂದು  ಆಗಿರಲಿಲ್ಲ. ಆಗಲೇ ಅವರ ಮೇಲೆ  ಆಪಾದನೆ ಗಳ ಸುರಿಮಳೆ.  ಸತತ ಹದಿನಾಲ್ಕು ವರ್ಷಗಳ ಕಾಲ ಅವರನ್ನು ಗೋದ್ರಾ ಹತ್ಯಾಕಾಂಡದ ಕಾರಣಿಕೃತ ಎಂದು ದೂಷಿಸಲಾಯಿತು. ಪತ್ರಕರ್ತರಂತೂ ಹೋದಲ್ಲಿ, ಬಂದಲ್ಲಿ ಅವರನ್ನು ಇದೇ ವಿಷಯ ಇಟ್ಟುಕೊಂಡು ಹಿಂಸಿಸಿದರು. ಸೋನಿಯಾ ಗಾಂಧಿಯವರು ‘ಮೌತ್ ಕಾ ಸೌದಾಗರ್’ ಎಂದು ಮೋದಿಯವರನ್ನು ಸಾರ್ವ ಜನಿಕವಾಗಿ ಅಸಹ್ಯ ಮಾಡಿದರು. ಇದೆಲ್ಲಾ ಕೇವಲ ಉದಾಹರಣೆಗೆ ಮಾತ್ರ, ಹೇಳುತ್ತಾ ಹೋದರೆ ಪತ್ರಿಕೆಯನ್ನೇ ತುಂಬಿಸಬಹುದು. ತನಗೆ ಪತ್ರಕರ್ತರು ಕಷ್ಟ ಕೊಡುತ್ತಿದ್ದಾರೆ, ವಿರೋಧ  ಹಿಂಸಿಸುತ್ತಿದ್ದಾರೆ ಎಂದು ಒಂದು ದಿನವಾದರೂ ಮೋದಿ ಕಣ್ಣೀರಿ ಟ್ಟಿದ್ದನ್ನು ಕಂಡಿದ್ದೀರಾ? ಅವರ ತಂದೆ ಪ್ರಧಾನಿ ಆಗಿರಲಿಲ್ಲ ಅಥವಾ ಮನೆಯಲ್ಲಿ ಯಾರೂ ರಾಜಕೀಯ ಅನುಭವ ಪಡೆದ ವ್ಯಕ್ತಿಗಳು ಇರಲಿಲ್ಲ. ಮೋದಿ ಏನಿದ್ದರೂ ಒನ್ ಮ್ಯಾನ್ ಆರ್ಮಿ!

ಕುಮಾರಸ್ವಾಮಿಯವರೇ, ನೊಬೆಲ್ ಶಾಂತಿ ಪುರಸ್ಕಾರ ಕಿರಿ ಯಳೆಂಬ ಹೆಗ್ಗಳಿಕೆಯ ಮಲಾಲಾ ಯಸುಫ್ ಬಗ್ಗೆ ನೀವು ಕೇಳಿ ರಬಹುದು, ಹದಿನೈದು ವರ್ಷದ ಹುಡುಗಿ ಭಯೋತ್ಪಾದಕರ ಗುಂಡಿನೇಟು ತಿಂದಿದ್ದಳು. ಆದರೆ ಬೆದರಿಕೆಗೆ ಹೆದರದೆ, ಕಣ್ಣೀರಿಟ್ಟಿ ರಲಿಲ್ಲ.  ನಿಮಗೆ ಇಂದು ಹೋದಲ್ಲಿ, ಬಂದಲ್ಲಿ ಅಳಲು ಏನಾಗಿದೆ? ಹೊರಗಡೆ ರಾಜ್ಯದ ಜನರು ಏನೆನ್ನುತ್ತಿದ್ದಾರೆ ಗೊತ್ತಾ? ‘ಕರ್ನಾಟಕದಲ್ಲಿ ಅಳುವ ಸಿಎಂ ಬಂದಿದ್ದಾರೆ. ನಾವು ಎಂದೂ ಹೀಗೆ ಕಣ್ಣೀರಿಡುವ ಸಿಎಂ ನೋಡಿರಲಿಲ್ಲ, ಇದು ಮೊದಲನೇ ಬಾರಿ’ ಎಂದು ನಗುತ್ತಿದ್ದಾರೆ. ಇದೇ ಮೊದಲನೆಯ ಬಾರಿ ನಿಮ್ಮಂತಹ ನಾಯಕನನ್ನು ನೋಡಿ ಜನರು ಕಂಗಾಲಾಗಿದ್ದಾರೆ.

ರಾಜಕೀಯವೇನೇ ಇರಲಿ, ಪಕ್ಷಗಳ ಒಳಜಗಳ ಬದಿಗಿರಲಿ, ಮುಖ್ಯಮಂತ್ರಿ ಆಗಲು ಒಪ್ಪಿಕೊಂಡು ಅಧಿಕಾರಕ್ಕೆ ಬಂದ ಮೇಲೆ ಆ ಖುರ್ಚಿಗಾದರೂ ಕಿಮ್ಮತ್ತು ಕೊಡಬೇಕಲ್ಲವೇ?  ದೇವೇ ಗೌಡರ ಮಗ. ಅವರಿಗೆ ಇಡೀ ದೇಶದ ರಾಜಕೀಯವೇ ಗೌರವಿ ಸುತ್ತದೆ. ಕಾಂಗ್ರೆಸ್ ದಿಗ್ಗಜರ ಲೆಕ್ಕ ತಪ್ಪಿಸಿ ಪ್ರಧಾನಿಯಾದವರು ಅವರು. ಅವರ ರಾಜಕೀಯ ಚಾಣಾಕ್ಷತನಕ್ಕೆ ಎಂತವರೂ ಸಲಾಮ್ ಹೊಡೆಯುತ್ತಾರೆ. ಅವರ ಮಗನಾಗಿ ನೀವು ಅಳುವುದೇ? ಮಾರ್ಗದರ್ಶನ ಬೇಕೆಂದರೆ ಪ್ರಧಾನಿಯಿಂದ  ಹಿಡಿದು, ಅತ್ಯಂತ ನಿಪುಣರೇ ಗೌಡರನ್ನು ಭೇಟಿಯಾಗಿ ಸಲಹೆ ಪಡೆಯುತ್ತಾರೆ. ಜಿಎಸ್‌ಟಿಯನ್ನು ದೇಶಾದ್ಯಂತ ಜಾರಿ ಮಾಡುವ ಕಾರ್ಯ ಕ್ರಮ ದಲ್ಲಿ ಮೋದಿಯವರು ದೇವೇಗೌಡರನ್ನು ವೇದಿಕೆಯ ಮೇಲೆ ಕೂರಿಸಿ ಗೌರವಿಸಿದ್ದರು, ಅಂತವರ  ಸೇರಿದವರು ನೀವು. ನಿಮಗೆ ಕಣ್ಣೀರು ಶೋಭೆ ಕೊಡುತ್ತದೆಯಾ ಯೋಚನೆ ಮಾಡಿ!       ನಾಯಕರಾದವರು ಜನರಿಗೆ ಮಾದರಿ ಆಗಬೇಕು. ಅಳುಬುರುಕ ದೊರೆಯನ್ನು ಹಿಂಬಾಲಿಸುವವರನ್ನು ಎಂದಾದರೂ ಕೇಳಿದ್ದೀರಾ? ಕಾಂಗ್ರೆಸ್ ಮುಲಾಜಿರಲಿ ಅಥವಾ ಬಿಜೆಪಿಯ ಮುಲಾಜಿರಲಿ, ಮುಖ್ಯಮಂತ್ರಿ ಆದ ಮೇಲೆ ರಾಜ್ಯಕ್ಕೆ ಒಳಿತು ಮಾಡಿ. ಸಮಸ್ಯೆ ಎದುರಾದಾಗ ನಿಮಗೆ ಮಾರ್ಗದರ್ಶನಕ್ಕೆ ಸ್ವತಃ ದೇವೇಗೌಡರ ಆಶೀರ್ವಾದ ನಿಮ್ಮ ಮೇಲಿದೆ. ಏನೇ ಎದುರಾದರೂ ಅವರೊಡನೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಿ. ಅದಾವ ಮನೆಹಾಳು ತಂತ್ರಗಾರಿಕೆಯವರು ನಿಮಗೆ ಅಳುವುದನ್ನು ಹೇಳಿಕೊಟ್ಟಿದ್ದಾರೆಯೋ  ಆದರೆ ಆರುವರೆ ಕೋಟಿ ಜನರಿರುವ ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಕಂಡ ಕಂಡಲ್ಲಿ ಕಣ್ಣೀರಿಡುವುದು ತಂತ್ರಗಾರಿಕೆಯೇ ಅಲ್ಲ. ಅದು ನಿಮ್ಮ ದುರ್ಬಲತೆ ಎಂದಾಗುತ್ತದೆ. ಇದರಿಂದ ನಿಮ್ಮ ಮರ್ಯಾದೆ ಅಷ್ಟೇ ಅಲ್ಲ ಈ ರಾಜ್ಯದವರು ಎನಿಸಿಕೊಂಡ ನಮ್ಮೆಲ್ಲರ ಮರ್ಯಾದೆಗೂ ಧಕ್ಕೆ ಬರುತ್ತದೆ. ಇರುವ ಪರಿಸ್ಥಿತಿಯಲ್ಲಿಯೇ ಒಬ್ಬ ದಕ್ಷ ಆಡಳಿತಗಾರ ಎನಿಸಿಕೊಳ್ಳಿ, ರಾಜಕೀಯವನ್ನು ಒಂದು ಯುದ್ಧ ಎಂದು ಭಾವಿಸಿ ಹೋರಾಡಿ, ಅದನ್ನು ಬಿಟ್ಟು ಕಣ್ಣೀರು ಮತ ಗೆಲ್ಲುವ ಮದ್ದಲ್ಲ, ನೆನಪಿರಲಿ!

Tags

Related Articles

Leave a Reply

Your email address will not be published. Required fields are marked *

Language
Close