About Us Advertise with us Be a Reporter E-Paper

Breaking Newsದೇಶಪ್ರಚಲಿತ

ನಿಮ್ಮಪ್ಪ ಅಮ್ಮನಿಗೆ ಜನನ ಪ್ರಮಾಣ ಇತ್ತಾ ಅಮಿತ್‌ ಶಾ?

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ದೀದಿ ಪ್ರಶ್ನೆ

ಕೋಲ್ಕತಾ: ರಾಷ್ಟ್ರೀಯ ಪೌರತ್ವ ನೋಂದಣಿ ವಿಚಾರದಲ್ಲಿ ಮತ್ತೆ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ವಿರುದ್ಧ ಮತ್ತೆ ವಾಗ್ದಾಳಿ ಮುಂದುವರಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ  ನಿಮ್ಮ ಅಪ್ಪ ಅಮ್ಮನಿಗೆ ಜನನ ಪ್ರಮಾಣ ಪತ್ರ ಇತ್ತಾ ಎಂದು ಪ್ರಶ್ನೆ ಮಾಡಿದ್ದಾರೆ.

ಯುನೈಟೆಡ್‌ ಬೆಂಗಾಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಮಿತ್‌ ಶಾ ಅವರೆ ನಿಮ್ಮ ತಂದೆ ತಾಯಿಗೆ ಜನನ ಪ್ರಮಾಣ ಪತ್ರ ಇತ್ತಾ? ನನ್ನ ಬಳಿ ಕೇಳಿದರೆ, ನನ್ನ ತಂದೆ ತಾಯಿಗೂ ಜನನ ಪ್ರಮಾಣ ಪತ್ರ  ಇಲ್ಲ ಎಂದು ಹೇಳುತ್ತೇನೆ. ಸ್ವಾಮಿ ವಿಕೇಕಾನಂದರಿಗೆ ಇತ್ತಾ? ಆಟಲ್‌ಜಿ ಅನಾರೋಗ್ಯದಿಂದಿದ್ದಾರೆ. ಅವರನ್ನು ಕೇಳಬಾರದು. ಅವರಿಗೆ ಎಲ್ಲಾ ದಾಖಲೆಗಳಿದ್ದವಾ? ಎಂದು ಪ್ರಶ್ನೆ ಮಾಡಿದ್ದಾರೆ.

ರಾಷ್ಟ್ರೀಯ ಪೌರತ್ವ ನೋಂದಣಿ ರಾಜಕೀಯ ಪ್ರೇರಿತವಾಗಿದ್ದು, ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಷಡ್ಯಂತ್ರ ರೂಪಿಸಲಾಗಿದೆ. ಕೆಲವೊಮ್ಮೆ ಅವರು ಭಾರತ-ಪಾಕಿಸ್ತಾನ, ಇನ್ನು ಕೆಲವೊಮ್ಮೆ ಭಾರತ – ಚೀನಾ ಎಂದು ಹೇಳಿ ಜನರ ಭಾವನೆಯಲ್ಲಿ ಆಟವಾಡುತ್ತಾರೆ. ಈಗ ಅದೇ ಚೀನಾದ ಬಳಿ ನಮ್ಮ ದೇಶದ ಕರೆನ್ಸಿ ಪ್ರಿಂಟ್‌ ಮಾಡಿಸುತ್ತಿದ್ದಾರಂತೆ ಎಂದು ಕಿಡಿ ಕಾರಿಕಾರಿದರು.

Tags

Related Articles

Leave a Reply

Your email address will not be published. Required fields are marked *

Language
Close