About Us Advertise with us Be a Reporter E-Paper

Breaking Newsವಿದೇಶ
Trending

ಆ್ಯಂಬುಲೆನ್ಸ್ ನಲ್ಲೂ ಮಾಲೀಕರ ಹಿಂಬಾಲಿಸಿದ ಶ್ವಾನ..!

ಬೀಜಿಂಗ್: ನಾಯಿಗಳಿಗಿರುವಷ್ಟು ಬುದ್ಧಿ ಮನುಷ್ಯರಿಗಿರಲ್ಲ ನೋಡಿ… ತನ್ನ ಮಾಲೀಕರಿಗೆ ಏನಾದರೂ ಅಪಾಯವಾದ್ರೆ  ಶ್ವಾನ ರಕ್ಷಿಸಿದಂತಹ ಘಟನೆಗಳು ಅದೆಷ್ಟೊ ನಮ್ಮ ಮುಂದಿವೆ. ಇಲ್ಲೊಂದು ನಾಯಿ ತನ್ನ ಮಾಲೀಕರನ್ನು ಆಸ್ಪತ್ರೆವರೆಗೆ ಆಂಬುಲೆನ್ಸ್ ನಲ್ಲೆ ಹಿಂಬಾಲಿಸಿದ ಹೃದಯಸ್ಪರ್ಶಿ ಘಟನೆ ನಡೆದಿದೆ.

ಚೀನಾದ ಹೀಲೋಂಗ್ಜಿಯಾಂಗ್ ಪ್ರಾಂತ್ಯದಲ್ಲಿ ಮಹಿಳೆಯೊಬ್ಬಳು ಮೂರ್ಛೆ ಹೋಗಿದ್ದಳು. ಹೀಗಾಗಿ ಆಕೆಯನ್ನು ಆ್ಯಂಬುಲೆನ್ಸ್ ಮುಖಾಂತರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ ಆಕೆಯ ಮುದ್ದಿನ ಶ್ವಾನ ಕೂಡ ಆ್ಯಂಬುಲೆನ್ಸ್ ಹತ್ತಿ ಆಕೆಯ ಪಕ್ಕ ಕುಳಿತಿದೆ. ಅಯ್ಯೋ.. ತನ್ನ ಮಾಲೀಕರಿಗೆ ಅದೇನಾಗಿದೆಯೋ ಎಂಬ ಶ್ವಾನದ ಮೂಕರೋಧನೆ ಎಂಥಾ ಕಲ್ಲುಹೃದಯದವರ ಕಣ್ಣಲ್ಲೂ ಕಂಬನಿ ತರುವಂಥದ್ದು.

ಅಷ್ಟೇ ಅಲ್ಲ ಮೂರ್ಛೆ ಹೋದ ಮಹಿಳೆ ಎಚ್ಚರಗೊಂಡಾಗ ನಾಯಿಯನ್ನು ಗಟ್ಟಿಯಾಗಿ ತಬ್ಬಿಕೊಂಡಳಂತೆ. ನಾಯಿಯ ಮುಗ್ಧತೆ, ಪ್ರೀತಿ ನೋಡಿದ ದಾದಿಯರು ಚಕಿತರಾಗಿದ್ದಾರೆ. ಈ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಲಾಗಿದ್ದು, ಸಖತ್ ವೈರಲ್ ಆಗಿದೆ.

Tags

Related Articles

Leave a Reply

Your email address will not be published. Required fields are marked *

Language
Close