About Us Advertise with us Be a Reporter E-Paper

Breaking Newsದೇಶಪ್ರಚಲಿತ

ಡಾಲರ್‌‌ ಎದುರು ರುಪಾಯಿ ಮೌಲ್ಯ ಏರಿಕೆ

ಮುಂಬೈ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಮತ್ತಷ್ಟು ಏರಿಕೆ ಕಂಡಿದ್ದು, ಪ್ರತೀ ಡಾಲರ್ ಎದುರು ರೂಪಾಯಿ ಮೌಲ್ಯ 67 ಪೈಸೆಯಷ್ಟು ಏರಿಕೆಯಾಗಿದೆ.

ಮಂಗಳವಾರ ರೂಪಾಯಿ ಮೌಲ್ಯದಲ್ಲಿ 29 ಪೈಸೆಯಷ್ಟು ಏರಿಕೆ ಕಂಡುಬಂದಿತ್ತು. ಅದೇ ಟ್ರೆಂಡ್ ಬುಧುವಾರ ಕೂಡ ಮತ್ತೆ ರೂಪಾಯಿ ಮೌಲ್ಯದಲ್ಲಿ 67 ಪೈಸೆಯಷ್ಟು ಏರಿಕೆ ಕಂಡುಬಂದಿದೆ. ಪ್ರಮುಖವಾಗಿ ಇಂದಿನ ಬೆಳವಣಿಗೆ ಕಚ್ಛಾ ತೈಲ ಬೆಲೆ ಇಳಿಕೆ ಮತ್ತು ಅಮೆರಿಕ ಷೇರುಮಾರುಕಟ್ಟೆಯಲ್ಲಿ ಹೂಡಿಕೆದಾರರ ನಿರಾಸಕ್ತಿಯೇ ಕಾರಣ ಎಂದು ಹೇಳಲಾಗುತ್ತಿದೆ.

ಇನ್ನು ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಪ್ರತೀ ಬ್ಯಾರಲ್ ಕಚ್ಛಾ ತೈಲ ದರ ಒಂದು ವರ್ಷದ ಹಿಂದಿನ ಕನಿಷ್ಟ ದರಕ್ಕೆ ಕುಸಿದಿದೆ. ಇದು ರೂಪಾಯಿ ಮೌಲ್ಯ ಹೆಚ್ಚಾಗಲು ಕಾರಣ ಎಂದು ಹೇಳಲಾಗುತ್ತಿದೆ.

Tags

Related Articles

Leave a Reply

Your email address will not be published. Required fields are marked *

Language
Close