About Us Advertise with us Be a Reporter E-Paper

Breaking Newsದೇಶಪ್ರಚಲಿತ

ಕೇರಳ ಪುನರ್​ನಿರ್ಮಾಣಕ್ಕೆ ಒಂದು ತಿಂಗಳ ಸಂಬಳ ನೀಡಿ ಪಿಣರಾಯಿ ವಿಜಯನ್​ ಮನವಿ

ತಿರುವನಂತಪುರಂ: ಪ್ರವಾಹದಿಂದ ತತ್ತರಿಸಿರುವ ಕೇರಳದ ಪುನರ್‌ ನಿರ್ಮಾಣಕ್ಕೆ ವಿಶ್ವದಾದ್ಯಂತ ಇರುವ ಎಲ್ಲಾ ಮಲಯಾಳಿಗಳು ತಮ್ಮ ಒಂದು ತಿಂಗಳ ಸಂಬಳವನ್ನು ನೀಡಿ ಎಂದು ಕೇರಳ ರಾಜ್ಯದ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್‌‌ ಮನವಿ ಮಾಡಿಕೊಂಡಿದ್ದಾದೆ.

ಎಲ್ಲರಿಗೂ ತಮ್ಮ ಒಂದು ತಿಂಗಳ ಸಂಬಳವನ್ನು ನೀಡಲು ಸಾಧ್ಯವಾಗುವುದಿಲ್ಲ. ಆದರಿಂದ 10 ತಿಂಗಳ ಕಾಲಾವಕಾಶ ಪಡೆದುಕೊಂಡು ನೀಡಿ. ಇಲ್ಲಿಯವರೆಗೆ ಪ್ರವಾಹದಿಂದ  ಕೇರಳ ಒಟ್ಟಾರೆ 19,512 ಕೋಟಿ ರು ನಷ್ಟ ಅನುಭವಿಸಿದೆ ಎಂದು ತಿಳಿಸಿದ್ದಾರೆ.

ಸುಮಾರು ಮೂರು ಸಾವಿರ ಮನೆಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು ನೆಲೆ ಕಳೆದುಕೊಂಡವರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಇದುವರೆಗೂ 1435 ನೆರೆ ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗಿದೆ. 4.62 ಲಕ್ಷ ಜನ ಪರಿಹಾರ ಕೇಂದ್ರಗಳಲ್ಲಿದ್ದಾರೆ. ಈಗ ರಾಜ್ಯಕ್ಕೆ ಹಣದ ಅವಶ್ಯಕತೆ ಇದೆ. ಆದ್ದರಿಂದ ನಿಮ್ಮ ಸಹಾಯ ಹಸ್ತ ನಮಗೆ ಬೇಕಾಗಿದೆ ಎಂದು ಮುಖ್ಯಮಂತ್ರಿ ತಮ್ಮ ಫೇಸ್‌ ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close