About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ

ಸಚಿನ್‌-ಕೊಹ್ಲಿ ತುಲನೆ ಸಲ್ಲದು: ಲಾರಾ

Cricket – India v South Africa – Third One Day International – Newlands Stadium, Cape Town, South Africa – February 7, 2018. India’s Virat Kohli celebrates his century. REUTERS/Mike Hutchings

ಇತ್ತೀಚಿನ ದಿನಗಳಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಹಾಗ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ನಡುವೆ ತುಲನೆ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ.

ಇದೇ ವಿಚಾರವಾಗಿ ಮಾತನಾಡಿದ ಚಾಂಪಿಯನ್‌ ಕ್ರಿಕೆಟರ್‌ ಬ್ರಯಾನ್‌ ಲಾರಾ, “ಸಚಿನ್‌ ಹಾಗು ನನ್ನ ನಡುವೆ ಜನ ಹೋಲಿಕೆ ಮಾಡುತ್ತಿದ್ದರು. ಈ ವಿಚಾರವನ್ನು ಪತ್ರಿಕೆಗಳಲ್ಲಿ ಓದುತ್ತಿದ್ದವು. ಆದರೆ ಇವೆಲ್ಲ ನಮಗೆ ಮುಖ್ಯ ಎನಿಸಿರಲಿಲ್ಲ. ಹೀಗೆಯೇ ಕೊಹ್ಲಿ ಸಹ ಸಚಿನ್‌ ಜತೆಗೆ ಹೋಲಿಕೆ ವಿಚಾರವಾಗಿ ಗಮನ ಕೊಡುವುದಿಲ್ಲ” ಎಂದು ಹೇಳಿದ್ದಾರೆ.

ತಮ್ಮ ಮಾತು ಮುಂದುವರೆಸಿದ ಕೆರಿಬಿಯನ್‌ ದಂತಕಥೆ, “ಬೇರೆ ಬೇರೆ ತಲೆಮಾರುಗಳ ಆಟಗಾರರ ನಡುವಿನ ತುಲನೆ ಸರಿಯಲ್ಲ. ನನ್ನ ಕಾಲದಲ್ಲಿ ರಾಹುಲ್‌ ದ್ರಾವಿಡ್‌, ಜಾಕ್‌ ಕಾಲಿಸ್‌, ರಿಕಿ ಪಾಂಟಿಂಗ್‌ರಂಥ ಆಟಗಾರರಿದ್ದರು. ಆದರೆ ನಾವು ವೀವ್‌ ರಿಚರ್ಡ್ಸ್‌ ಅಥವಾ ಗ್ಯಾರಿ ಸೋಬರ್ಸ್‌‌ಗಿಂತ ಉತ್ತಮ ಎಂದು ಹೇಳಲು ಆಗದು” ಎಂದಿದ್ದಾರೆ.

ಕೊಹ್ಲಿ ಕುರಿತು ಮೆಚ್ಚುಗೆ ಸೂಸಿದ ಲಾರಾ, “ಕೊಹ್ಲಿ ಸರ್ವಾಂಗೀಣ ಆಟಗಾರ. ಫಿಟ್ನೆಸ್‌, ಆಹಾರ ಪದ್ಧತಿ, ಆಟದ ಮೇಲಿನ ಪ್ರೀತಿ- ಎಲ್ಲದರಲ್ಲೂ ಆತ ಪರಿಪೂರ್ಣ. ಆಟದ ಪ್ರತಿಯೊಂದು ಆಯಾಮದ ಮೇಲೂ ಕೊಹ್ಲಿ ಬಹಳ ತಲ್ಲೀನತೆ ಹೊಂದಿದ್ದಾರೆ. ಯಾವುದೇ ಕ್ರಿಕೆಟರ್‌ ತನ್ನ ಕೈಯಲ್ಲಿ ಬ್ಯಾಟ್‌ ಹಿಡಿಯಲು ಇಷ್ಟ ಪಡುತ್ತಾನೆ, ಆದರೆ ಐದು ಮೈಲು ಓಡಲು ಹೇಳಿದರೆ ನಿರಾಕರಿಸುತ್ತಾರೆ. ಆದರೆ ಕೊಹ್ಲಿ ಹಾಗಲ್ಲ, ತಮ್ಮ ಪರಿಧಿ ಆಚೆಗಿನ ಕೆಲಸಗಳನ್ನೂ ಮಾಡುವ ಅದಮ್ಯ ಉತ್ಸಾಹ ಕೊಹ್ಲಿಗೆ ಇದೆ. ಆಟಕ್ಕೆ ಕೊಹ್ಲಿ ಹಾಗು ಜೋ ರೂಟ್‌ನಂಥ ಮುಂದಾಳುಗಳು ಸಿಕ್ಕಿರುವುದನ್ನು ನೋಡಲು ಸಂತಸವಾಗುತ್ತದೆ” ಎಂದು ಲಾರಾ ತಿಳಿಸಿದ್ದಾರೆ.

ಭಾರತ ಟೆಸ್ಟ್‌ ತಂಡದ ಆರಂಭಿಕ ಪೃಥ್ವಿ ಶಾ ಕುರಿತು ಮಾತನಾಡಿದ ಲಾರಾ, “ಆಸ್ಟ್ರೇಲಿಯಾದಲ್ಲಿರುವ ಬೌನ್ಸೀ ಪಿಚ್‌ಗಳಲ್ಲಿ ಪೃಥ್ವಿ ಹೇಗೆ ಆಡಿಯಾರು ಎಂಬ ಪ್ರಶ್ನೆಗಳಿವೆ. ಆದರೆ ಆಟಕ್ಕೆ ಅತ್ಯಗತ್ಯವಾದ ಕಠಿಣ ಮಾನಸಿಕ ದೃಢತೆ ಪೃಥ್ವಿಗೆ ಇದೆ ಎನಿಸುತ್ತದೆ. ನೀವು ಮಾನಸಿಕವಾಗಿ ಗಟ್ಟಿಗರಾದಲ್ಲಿ ನಿಮ್ಮ ತಂತ್ರಗಾರಿಕೆಯು ಪ್ರತಿಯೊಂದು ಪರಿಸ್ಥಿತಿಗೂ ತನ್ನಿಂತಾನೇ ಹೊಂದಿಕೊಳ್ಳುತ್ತದೆ. ನಾನೂ ಸಹ ಇದೇ ವಿಚಾರವನ್ನೇ ಆಟಕ್ಕೆ ಅಳವಡಿಸಿಕೊಂಡಿದ್ದೆ. ತಂತ್ರಗಾರಿಕೆ ಹಾಗು ಮತ್ಯಾವುದೇ ವಿಚಾರಕ್ಕಿಂತಲೂ ಎಲ್ಲ ಪರಿಸ್ಥಿತಿಗಳಲ್ಲೂ ಯಶ ಸಾಧಿಸಬೇಕೆಂಬ ಹಂಬಲ ನನ್ನಲ್ಲಿತ್ತು. ಅದೇ ವಿಷಯ ಪೃಥ್ವಿಯಲ್ಲೂ ಇದೆ” ಎಂದಿದ್ದಾರೆ.

ಇದೇ ವೇಳೆ, “ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ನ ಇಂದಿನ ಸ್ಥಿತಿಗತಿಗಳ ಕುರಿತು ಸಚಿನ್‌ ತೆಂಡೂಲ್ಕರ್‌ ಕಳವಳ ವ್ಯಕ್ತ ಪಡಿಸಿದ್ದಾರೆ. ಅಂಬ್ರೋಸ್‌, ವಾಲ್ಶ್‌ ರೀತಿಯ ವೇಗದ ಬೌಲರ್‌ಗಳ ವಿರುದ್ಧ ಆಡಿದ್ದನ್ನು ಸಚಿನ್‌ ಸ್ಮರಿಸಿದ್ದಾರೆ. ಪ್ರತಿಯೊಬ್ಬರೂ ತಮ್ಮ ದೇಶದ ತಂಡ ಬಿಟ್ಟರೆ ಬೆಂಬಲಿಸುವುದೇ ವಿಂಡೀಸ್‌ ತಂಡವನ್ನು. ಆದರೆ ಅಲ್ಲಿನ ಇಂದಿನ ಪರಿಸ್ಥಿತಿ ಕುರಿತು ಎಲ್ಲರೂ ದುಃಖಿತರಾಗಿದ್ದಾರೆ” ಎಂದು ಲಾರಾ ತಿಳಿಸಿದ್ದಾರೆ

ಇದೇ ವೇಳೆ ಫ್ರಾಂಚೈಸಿ ಹಾಗು ರಾಷ್ಟ್ರೀಯ ತಂಡಗಳ ನಡುವಿನ ಆಟಗಾರರ ಪ್ರಾಶಸ್ತ್ಯದ ಕುರಿತು ಮಾತನಾಡಿದ ಲಾರಾ, “ಪ್ರತಿಯೊಬ್ಬರಿಗೂ ಜೀವನ ಕಟ್ಟಿಕೊಳ್ಳುವ ಅಗತ್ಯವಿದೆ. ವಿಂಡೀಸ್‌ ಕ್ರಿಕೆಟ್ ಹಾಗು ಟಿ-20 ಲೀಗ್‌ ನಡುವೆ ಇರುವ ವೇತನಗಳು ಅಜಗಜಾಂತರವಿದೆ. ಮರ್‍ರೂನ್‌ ಟೊಪಿ ಧರಿಸಲು ಇಚ್ಛಿಸುವವರ ಕುರಿತು ನನಗೆ ಅತ್ಯುನ್ನತ ಗೌರವವಿದೆ. ಆದರೆ ಇತರರ ಕುರಿತಂತೆ ನನಗೆ ಯಾವುದೇ ವಿರೋಧವಿಲ್ಲ” ಎಂದಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close