ಅವಸರ ಮಾಡಬೇಡ್ರೀ ಸರ! ಅದು ಅಪಾಯಕರ!

Posted In : ಕ್ಷಣಹೊತ್ತು ಅಣಿ ಮುತ್ತು

ಕ್ಷಣ ಹೊತ್ತು ಆಣಿ ಮುತ್ತು: ಎಸ್.ಷಡಕ್ಷರಿ

ನಮ್ಮೂರಿನಲ್ಲೊಬ್ಬ ಮೋಟಾರ್ ರಿಪೇರಿ ಮಾಡುವವರಿ ದ್ದರು. ಅವರ ಬಳಿ ನಮ್ಮ ಮೋಟಾರ್ ಸೈಕಲ್ ರಿಪೇರಿ ಮಾಡಲು ಕೊಟ್ಟು ಬೇಗ ರಿಪೇರಿ ಮಾಡಿಕೊಡಿ ಎಂದು ಕೇಳಿಕೊಂಡರೆ ಅವರದ್ದು ಸಿದ್ಧ ಉತ್ತರ ಅವಸರ ಮಾಡಬೇಡ್ರೀ ಸರ! ಅದು ಅಪಾಯಕರ. ಮತ್ತೂ ಒತ್ತಾಯ ಮಾಡಿದರೆ ಅವರು ಸರ್! ನಾನು ಹ್ಯಾಂಗೋ ಏನೋ ರಿಪೇರಿ ಮಾಡಿಕೊಟ್ಟು ನಿಮ್ಮನ್ನು ಕಳಿಸಿಬಿಡುತ್ತೇನೆ. ಆದರೆ  ಮತ್ತೇನಾದರೂ ತೊಂದರೆಯಾದರೆ, ಕಷ್ಟ ಪಡುವವರು ನೀವೇ ಅಲ್ಲವೇ ಸರ್! ಎಂದರೆ, ನಾವು ಮತ್ತೇನೂ ಹೇಳಲು ಸಾಧ್ಯವಿರುತ್ತಿರಲಿಲ್ಲ.

ಈಗ ಅವಸರಕ್ಕೆ ಸಂಬಂಧಪಟ್ಟ ಜೆನ್ ಕತೆಯೊಂದನ್ನು ನೋಡೋಣ. ಚೈನಾ ದೇಶದ ಒಬ್ಬ ಅನುಕೂಲಸ್ಥ ತಂದೆಗೆ ತಮ್ಮ ಮಗ ಕತ್ತಿವರಸೆಯಲ್ಲಿ ನಿಪುಣನಾಗಬೇಕೆಂಬ ಆಕಾಂಕ್ಷೆ. ಅವರು ಒಬ್ಬ ಒಳ್ಳೆಯ ಕತ್ತಿವರಸೆ ಗುರುವಿನ ಬಳಿಗೆ ಮಗನನ್ನು ಕಳುಹಿಸಿಕೊಟ್ಟರು. ಮಗ ಗುರುವಿಗೆ ನಮಸ್ಕರಿಸಿ ತಾನು ಅವರಿಂದ ಕತ್ತಿವರಸೆ ಕಲಿಯಲು ಬಂದಿದ್ದೇನೆಂದು ಹೇಳಿದ. ಗುರುಗಳು ತಮ್ಮ ಆಶ್ರಮದ ನಿಯಮಗಳನ್ನು  ಅನುಕೂಲಸ್ಥರ ಮಗನಾದ್ದರಿಂದ ಎಲ್ಲವೂ ತಾನು ಬಯಸಿದಂತೆಯೇ ಆಗಬೇಕೆಂಬ ಮನೋಭಾವವುಳ್ಳವನಾದ ಆತ ನಾನು ಗುರುಕುಲದ ನಿಯಮಗಳಿಗನುಸಾರವಾಗಿ ನಡೆದುಕೊಂಡರೆ ನಾನು ಕತ್ತಿವರಸೆಯನ್ನು ಸಂಪೂರ್ಣವಾಗಿ ಕಲಿತು ನಿಪುಣನಾಗಲು ಎಷ್ಟು ಸಮಯಬೇಕಾಗಬಹುದು? ಎಂದು ಪ್ರಶ್ನಿಸಿದ.

ಸ್ವಲ್ಪ ಯೋಚಿಸಿದ ಗುರುಗಳು ಹತ್ತು ವರ್ಷಗಳು ಬೇಕಾಗಬಹುದು ಎಂದರು. ಯುವಕ ಹತ್ತು ವರ್ಷಗಳೇ? ನನ್ನ ತಂದೆಯವರು ವೃದ್ಧರಾಗುತ್ತಾ ಬಂದಿದ್ದಾರೆ. ನಾನು ವಿದ್ಯಾಭ್ಯಾಸವನ್ನು ಸಾಧ್ಯವಾದಷ್ಟು ಬೇಗ ಮುಗಿಸಿ ಹಿಂತಿರುಗಬೇಕು. ತಂದೆಯವರ ಜವಾಬ್ದಾರಿಗಳನ್ನು ವಹಿಸಿಕೊಳ್ಳಬೇಕು. ನಾನು ನಿಯಮಗಳಿಗಿಂತ ಹೆಚ್ಚು ಸಮಯವನ್ನು ಕಲಿಕೆಯಲ್ಲಿ  ನೀವು ಹೇಳಿಕೊಡುವುದನ್ನು ಬೇಗಬೇಗ ಕಲಿಯುತ್ತೇನೆ. ಹಾಗಿದ್ದರೆ ನಾನು ನಿಪುಣನಾಗಲು ಎಷ್ಟು ಸಮಯ ಬೇಕಾಗಬಹುದು? ಎಂದು ಕೇಳಿದ. ಗುರುಗಳು ಶಾಂತರಾಗಿ ನೀನು ಇಮ್ಮಡಿ ಕೆಲಸ ಮಾಡುವುದಾದರೆ, ನಿನಗೆ ನಿಪುಣನಾಗಲು ಇಪ್ಪತ್ತು ವರ್ಷಗಳು ಬೇಕಾಗಬಹುದು! ಎಂದರು.

ಯುವಕ ಸ್ವಲ್ಪ ಅಸಹನೆಯಿಂದ ನಾನು ಮೊದಲು ಕೇಳಿದಾಗ ಹತ್ತು ವರ್ಷವೆಂದಿರಿ. ನಾನು ಇಮ್ಮಡಿ ಕೆಲಸ ಮಾಡುತ್ತೇನೆಂದರೆ ಈಗ ಇಪ್ಪತ್ತು ವರ್ಷ ಬೇಕಾಗುತ್ತದೆ ಎನ್ನುತ್ತೀರಿ. ನಾನು ದಿನದ ಇಪ್ಪತ್ತುನಾಲ್ಕು ಗಂಟೆಯೂ ಕಲಿಕೆಯಲ್ಲಿ ತೊಡಗಿಸಿಕೊಂಡರೆ ಎಷ್ಟು ವರ್ಷ  ಎಂದು ಕೇಳಿದ. ಗುರುಗಳು ಮತ್ತೂ ಶಾಂತರಾಗಿ ಮೆಲುದನಿಯಲ್ಲಿ ಮೂವತ್ತು ವರ್ಷಗಳೇ ಬೇಕಾಗಬಹುದೇನೋ? ಎಂದರು. ಯುವಕನಿಗೆ ಸಿಟ್ಟೇ ಬಂತು. ನೀವು ಮೊದಲು ಹತ್ತು ವರ್ಷವೆಂದಿರಿ. ನಾನು ಇಮ್ಮಡಿ ಕೆಲಸ ಮಾಡುತ್ತೇನೆಂದರೆ ಇಪ್ಪತ್ತು ವರ್ಷ ಬೇಕೆಂದಿರಿ. ನಾನು ಇಪ್ಪತ್ತನಾಲ್ಕು ಗಂಟೆ ಕೆಲಸ ಮಾಡುತ್ತೇನೆಂದರೆ ಮೂವತ್ತು ವರ್ಷಗಳು ಬೇಕಾಗುತ್ತದೆನ್ನುತ್ತೀರಿ! ವಿದ್ಯೆಯನ್ನು ದಿಢೀರ್ ಎಂದು ಕಲಿಯಲು ಬೇಕಾಗುವ ಸಮಯ ತಿಳಿಸಿ! ಎಂದು ಕೇಳಿದ. ಗುರುಗಳು ನೀನು ದಿಢೀರ್ ಮಾರ್ಗ ಅನುಸರಿಸವುದಾದರೆ ವಿದ್ಯೆಯನ್ನು ಕಲಿಯಲು, ನಿಪುಣನಾಗಲು  ವರ್ಷಗಳೇ ಬೇಕಾಗಬಹುದು. ಏಕೆಂದರೆ ಅವಸರದಲ್ಲಿರುವ ವಿದ್ಯಾರ್ಥಿ ಏನನ್ನೂ ಸರಿಯಾಗಿ ಕಲಿಯುವುದಿಲ್ಲ ಎಂದರು. ಆಗ ಯುವಕನಿಗೆ ಗುರುಗಳ ಮಾತಿನ ಅಂತರಾಳ ಅರ್ಥವಾಯಿತು. ಅತಿ ಅವಸರ ಒಳ್ಳೆಯದಲ್ಲ ಎಂಬುದನ್ನು ಅರ್ಥ ಮಾಡಿಕೊಂಡ.

ಬೀಜ ನೆಟ್ಟು ಮರವನ್ನು ಬೆಳೆಸಿ ಫಲ ಪಡೆಯಲು ಎಷ್ಟು ಸಮಯ ಬೇಕಾಗುತ್ತದೋ ಅಷ್ಟು ಸಮಯವನ್ನು ಅದಕ್ಕೆ ಕೊಡಲೇಬೇಕು. ಏಕೆಂದರೆ ಅದು ಪ್ರಕೃತಿ ನಿಯಮ. ಹಾಗೆಯೇ ವಿದ್ಯೆಯನ್ನು ಕಲಿತು ನಿಪುಣನಾಗಲು ಎಷ್ಟು ಸಮಯಬೇಕೋ, ಅಷ್ಟು ಸಮಯವನ್ನು ಕೊಡಲೇಬೇಕಾಗುತ್ತದೆ. ಬದುಕಿನ ಬಹುತೇಕ  ಅವಸರ ಅಪಾಯಕರ ಅಲ್ಲವೇ?

Leave a Reply

Your email address will not be published. Required fields are marked *

three × 5 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top