About Us Advertise with us Be a Reporter E-Paper

ವಿ +

ಇಲ್ಲಿ ಸೆಲ್ಫಿ ತೆಗೆದರೆ ಜಾಗ್ರತೆ

ಸರಸ್ವತಿ ವಿಶ್ವನಾಥ್ ಪಾಟೀಲ್,  ಕಾರಟಗಿ

ಯುವಜನರಲ್ಲಿ ಸೆಲ್ಫಿ ಹುಚ್ಚು ಹೆಚ್ಚಾಗುತ್ತಿದೆ. ನಾನಾ ಭಂಗಿಗಳ, ಚಿತ್ರವಿಚಿತ್ರವಾಗಿ ಫೋಟೊ ತೆಗೆದುಕೊಳ್ಳುವುದು ಮೋಜಿನ ವಿಷಯವಾಗಿಬಿಟ್ಟಿದೆ. ಈಗ  ಸೆಲ್ಫಿ ಹುಚ್ಚು ಹೆಚ್ಚಾಗಿದೆ. ಎಲ್ಲೇ ಹೋದರು, ಏನೇ ಮಾಡಿದರೂ ಮೊಬೈಲ್ ಮುಂದೆ ನಿಂತು ಪೋಸು ಕೊಟ್ಟು ಸೆಲ್ಫಿ ತೆಗೆದುಕೊಳ್ಳುವ ಖಯಾಲಿ ಜಾಸ್ತಿ ಯಾಗಿದೆ. ಭಾರತದಲ್ಲಿ ಸೆಲ್ಫಿ ಕ್ರೇಝ್‌ಗೆ ಬಲಿಯಾಗುತ್ತಿರು ವವರ ಸಂಖ್ಯೆ ಇಡೀ ವಿಶ್ವದಲ್ಲೆ ಗರಿಷ್ಠ ಎಂದು ಅಧ್ಯಯನ ವರದಿಗಳು ತಿಳಿಸಿವೆ. ವಯಸ್ಸು, ಲಿಂಗ ಎಲ್ಲವನ್ನೂ ಮೀರಿ ಸೆಲ್ಫಿ ಹವಾ ಎಲ್ಲೆಡೆ, ಎಲ್ಲರನ್ನೂ ವ್ಯಾಪಿಸಿದೆ.  ಸಮುದ್ರದ ನಡುವಿನ ನಡು ಗಡ್ಡೆಯ ತುತ್ತ ತುದಿಯಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುವ ಹುಚ್ಚು,  ತುದಿ ಯಲ್ಲಿ ಕೈಯಾಡಿಸುತ್ತ ಸೆಲ್ಫಿ ತೆಗೆದುಕೊಳ್ಳುವ ಭಂಡ ಧೈರ್ಯ ಎಲ್ಲವೂ ಸೇರಿ, ‘ಇಲ್ಲಿ ಸೆಲ್ಫಿ ತೆಗೆಯುವಂತಿಲ್ಲ’ ಎಂದು ಪ್ರವಾಸಿ ತಾಣಗಳಲ್ಲಿ ಬೋರ್ಡ್ ಹಾಕುವ ಮಟ್ಟದವರೆಗೆ ಈ ಅಪಾಯದ ತಲೆಬಿಸಿ ತಂದಿಟ್ಟಿತ್ತು. ಈ ಸೆಲ್ಫಿಗೆ ಕನ್ನಡ ಫೇಸ್ಬುಕ್ ಬಳಗದವರು ‘ಸ್ವಂತಿ’ ಎನ್ನುವ ಹೊಸ ನಾಮಕರಣವನ್ನೂ ನೀಡಿದ್ದಾರೆ.

ಅಪಾಯಕಾರಿ ಸ್ಥಳದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುವು ದರಲ್ಲಿ ಪುರುಷರದು ಎತ್ತಿದ ಕೈ. ಎಷ್ಟೇ ಸಾವುಗಳು ಸಂಭವಿಸಿದರೂ ತಮಗೇನೂ ತಿಳಿದೇ ಇಲ್ಲ ಎಂಬಂತೆ ಸೆಲ್ಫಿ  ಮುಳುಗಿರುತ್ತಾರೆ. ನೀರು, ಎತ್ತರದ ಬೆಟ್ಟ, ಮರದ ಮೇಲೆ, ನೀರಿನೊಳಗೆ, ರೈಲು ಹಳಿ, ಅಪಾಯಕಾರಿ ಪ್ರಾಣಿ ಬಳಿ, ಜಾರುವ ಬಂಡೆಯ ತುದಿಯಲ್ಲಿ ಹೀಗೆ ಹಲವಾರು ಅಪಾಯದ ಸ್ಥಳಗಳಲ್ಲಿ ಸೆಲ್ಪೀ ತೆಗೆಯುವ ಕ್ರೇಜ್ ಹೆಚ್ಚಾಗಿದೆ. 2014ರಲ್ಲಿ ವಿಶ್ವಾದ್ಯಂತ ಸಂಭವಿಸಿದ ಸೆಲ್ಫಿ ಸಂಬಂಧಿತ 49 ಸಾವುಗಳ ಪೈಕಿ 19 ಪ್ರಕರಣ ಗಳು ಭಾರತದಲ್ಲೆ ನಡೆದಿದ್ದವು ಎಂದು ಸ್ಯಾನ್ ಫ್ರಾನ್ಸಿಸ್ಕೊ ಮೂಲದ ‘ಪ್ರೆಸ್ನೋಮಿಕ್‌ಸ್’ ಸಂಸ್ಥೆಯ ಅಧ್ಯಯನ ವರದಿ ತಿಳಿಸಿದೆ. ದಿಲ್ಲಿಯ ಇಂದ್ರಪ್ರಸ್ಥ ಮಾಹಿತಿ ಸಂಸ್ಥೆಯ  ಪ್ರಕಾರ 2014ರ ಮಾರ್ಚ್ ನಿಂದ 2016ರ ಸೆಪ್ಟೆಂಬವರ್‌ವರೆಗೆ ವಿಶ್ವಾದ್ಯಂತ ಬರೋಬ್ಬರಿ 127 ಮಂದಿ ಸೆಲ್ಫಿ ಹುಚ್ಚಿಗೆ ಬಲಿ ಯಾಗಿದ್ದಾರೆ. ಈ ಪೈಕಿ ಶೇ. 60ರಷ್ಟು ಪ್ರಕರಣಗಳು ಭಾರತದಲ್ಲೆ ನಡೆದಿರುವುದು ಆಘಾತಕಾರಿ. ಬಹುತೇಕ ಪ್ರಕರಣಗಳಲ್ಲಿ ಸೆಲ್ಫಿ ಕ್ಲಿಕ್ಕಿಸುವಾಗ ಬೆಟ್ಟ ಅಥವಾ ಕಟ್ಟಡದ ತುದಿಗಳಿಂದ ಜಾರಿ ಬಿದ್ದಿರುವುದು, ರೈಲಿಗೆ ಸಿಲುಕಿ ಮತ್ತು ನೀರಿನಲ್ಲಿ ಮುಳುಗಿ ಸಾವು ಸಂಭವಿಸಿವೆ. ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಿದ ತರುವಾಯ ಜನರು ತಮ್ಮ ಸ್ನೇಹಿತರು ಮತ್ತು ಆಪ್ತರ  ಜನಪ್ರಿಯತೆ ಗಿಟ್ಟಿಸಲು ಹಾತೊರೆಯುತ್ತಿದ್ದಾರೆ. ಹೀಗಾಗಿ ವೈದ್ಯಕೀಯ ಪರಿ ಭಾಷೆಯಲ್ಲಿ ‘ನಾರ್ಸಿಸಿಸಮ್’ ಎಂದು ಕರೆಯಲಾಗುವ ಮಾನಸಿಕ ಸ್ಥಿತಿಯ ಸೆಳೆತಕ್ಕೆ ಒಳಗಾಗುತ್ತಿದ್ದಾರೆ. ಮುಂಬಯಿ ನಲ್ಲಿ ಹೆಚ್ಚುತ್ತಿರುವ ಸೆಲ್ಫಿ ಸಂಬಂಧಿತ ಸಾವುಗಳ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಸಚಿವಾಲಯ ನಗರದ ಹಲವು ಪ್ರದೇಶಗಳಲ್ಲಿ ಸೆಲ್ಫಿ ತೆಗೆಯುವುದನ್ನು ನಿಷೇಧಿಸಿದೆ. ಬಾಂದ್ರಾ ಮತ್ತು ವರ್ಲಿ ಸೇರಿದಂತೆ ಮುಂಬಯಿನ 16 ಪ್ರವಾಸಿ ತಾಣಗಳಲ್ಲಿ ಸೆಲ್ಫಿ ನಿಷೇಧಿಸಲಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close