About Us Advertise with us Be a Reporter E-Paper

ಸಿನಿಮಾಸ್

ದೂದ್‌ಪೇಡಾ ಹೇಳುತ್ತಿರುವ ಹೊಸ ಕಥೆ

ಜಿ.ಎಸ್. ಕಾರ್ತಿಕ ಸುಧನ್

ಚಿತ್ರದ ಬಿಡುಗಡೆಗೂ ಮುನ್ನ ಮಾತನಾಡಿದ ನಟ ದಿಗಂತ್, ‘ಸುಮಾರು ಆರು ವರ್ಷಗಳ ಹಿಂದೆ ‘ಲೈಫು ಇಷ್ಟೇನೆ’ ಸಿನಿಮಾ ಬಿಡುಗಡೆಯಾಗುವಾಗಲೂ ಮನಸ್ಸಿನಲ್ಲಿ ಇದೇ ತುಡಿತ, ಕಾತುರ ಜೊತೆಗೆ ಭಯದ ಭಾವನೆಯಿತ್ತು. ಈ ಸಿನಿಮಾ ಬಿಡುಗಡೆಯಾಗುತ್ತಿ ರುವಾಗಲೂ ಅದೇ  ಮರುಕಳಿಸುತ್ತಿದೆ. ಆದರೆ ಚಿತ್ರದ ಮೇಲೆ ಬಲವಾದ ನಂಬಿಕೆ ಇದೆ. ಈ ಸಿನಿಮಾದಲ್ಲಿನ ಹೊಸತರದ ಪ್ರೆಸೆಂಟೇಷನ್ ಆಡಿಯನ್‌ಸ್ಗೆ ಇಷ್ಟವಾಗಲಿದೆ’ ಎನ್ನುತ್ತಾರೆ.

‘ನನಗೆ ಹೀರೋಗೆ ಎಷ್ಟು ಆದ್ಯತೆ ಇದೆ ಎನ್ನುವುದಕ್ಕಿಂತ, ಅದರಲ್ಲಿ ಕಥೆ ಹೇಗಿದೆ.., ಅದಕ್ಕೆಷ್ಟು ಮಹತ್ವವಿದೆ ಎನ್ನುವುದೇ ಮುಖ್ಯ. ಸಿನಿಮಾಕ್ಕೆ ಹೀರೋಗಿಂತ ಕಥೆಯೇ ಇಂಪಾರ್ಟೆಂಟ್. ಈ ಸಿನಿಮಾದಲ್ಲೂ ಕೂಡ ಮೊದಲು ಕಥೆ ಕೇಳಿ, ನನಗೆ ಇಷ್ಟವಾದ ನಂತರವೇ ಸಿನಿಮಾಕ್ಕೆ ಸಹಿ ಹಾಕಿದೆ’ ಎನ್ನುತ್ತಾರೆ ದಿಗಂತ್.

‘ಕಥೆಯೊಂದು ಶುರುವಾಗಿದೆ ಚಿತ್ರದ ಕಥೆ,  ಪ್ರೆಸೆಂಟೇಷನ್ ಎಲ್ಲವೂ ಚೆನ್ನಾಗಿ ಮೂಡಿಬಂದಿದೆ. ಉತ್ತಮ ತಂತ್ರಜ್ಞಾನ, ಗುಣಮಟ್ಟದಲ್ಲಿ ಎಲ್ಲೂ ಕೊರತೆಯಾಗದಂತೆ ಸಿನಿಮಾ ಬಂದಿದೆ. ಸಿನಿಮಾ ರಿಲೀಸ್ ಆಗುತ್ತಿರುವುದರ ಬಗ್ಗೆ ನಾನೂ ಎಕ್ಸೈಟ್ ಆಗಿದ್ದೇನೆ’ ಎನ್ನುವುದು ದಿಗಂತ್ ಮಾತು.

ಆಗ ಇಂಜಿನಿಯರ್ ಈಗ ಡೈರೆಕ್ಟರ್

‘ಕಥೆಯೊಂದು ಶುರುವಾಗಿದೆ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಸನ್ನಾ ಹೆಗ್ಡೆ ಎನ್ನುವ ಹೊಸ ನಿರ್ದೇಶಕನ ಪರಿಚಯವಾಗುತ್ತಿದೆ. ಕಾಸರಗೋಡು ಜಿಲ್ಲೆ ಕನ್ನಂಗಾಡು ಮೂಲದ ಸನ್ನಾ ಹೆಗ್ಡೆ ಓದಿದ್ದು ಮತ್ತು ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿ. ಇಂಜಿನಿಯರಿಂಗ್ ಬಳಿಕ ಆಸ್ಟ್ರೇಲಿಯಾದಲ್ಲಿ  ಮಾಡಿದ್ದ ಸನ್ನಾ ಬ್ಯುಸಿನೆಸ್ ಅನಾಲಿಸ್‌ಟ್ ಆಗಿ ಅಮೆರಿಕಾದಲ್ಲಿ ನಾಲ್ಕು ವರ್ಷ ಕೆಲಸ ಮಾಡಿದ್ದಾರೆ. ಬಳಿಕ ಜಾಹೀರಾತು ಕ್ಷೇತ್ರದತ್ತ ಮುಖ ಮಾಡಿದ ಸನ್ನಾ ಅಲ್ಲಿ ಕ್ರಿಯೆಟೀವ್ ಡೈರೆಕ್ಟರ್ ಆಗಿ ಹಲವು ಜಾಹೀರಾತುಗಳಿಗೆ ಕೆಲಸ ಮಾಡಿದ್ದರು. ತಮ್ಮ ಚೊಚ್ಚಲ ಚಿತ್ರದ ಬಗ್ಗೆ ಮಾತನಾಡುವ ಸನ್ನಾ ಹೆಗ್ಡೆ, ‘ಸಿನಿಮಾ ಡೈರೆಕ್ಷನ್ ನನ್ನ ಇಷ್ಟದ ವೃತ್ತಿ. ಅದಕ್ಕಾಗಿಯೇ ನಾನು ಭಾರತಕ್ಕೆ ವಾಪಾಸ್ಸಾದೆ. ಮೊದಲಿಗೆ ನೆರೆ ಹೊರೆಯವರನ್ನೇ ಕಾಸ್ಟಿಂಗ್ ಮಾಡಿಕೊಂಡು ಡಾಕ್ಯು ಮೆಂಟರಿ ಡೈರೆಕ್‌ಟ್ ಮಾಡಿದ್ದೆ.  ಅದಕ್ಕೆ ಏಳು ಲಕ್ಷ ರೂಪಾಯಿ ಖರ್ಚಾಗಿತ್ತು. ಇದನ್ನು ನೋಡಿದ್ದ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಪ್ರಶಂಸೆ ವ್ಯಕ್ತಪಡಿಸಿದ್ದರು. ಇದು ನನಗೆ ಕಥೆಯೊಂದು ಶುರು ವಾಗಿದೆ ನಿರ್ದೇಶನಕ್ಕೆ ಸ್ಪೂರ್ತಿಯಾಯಿತು’ ಎನ್ನುತ್ತಾರೆ.

‘ರಕ್ಷಿತ್ ಜತೆಗಿದ್ದ ಸಂಪರ್ಕ ನನಗೆ ಸ್ಯಾಂಡಲ್‌ವುಡ್‌ಗೆ ಬರಲು ಅನುಕೂಲವಾಯಿತು. ಉಳಿದವರು ಕಂಡಂತೆ ಸಿನಿಮಾದ ಸ್ಕ್ರಿಪ್‌ಟ್ ಡಿಸ್ಕಷನ್ ಮಾಡಿದ್ದೆ. ಕಿರಿಕ್ ಪಾರ್ಟಿ ಸಿನಿಮಾದ ಟೈಮ್‌ನಲ್ಲಿ ನನ್ನ ಕಥೆಯೊಂದನ್ನು ಅವರಿಗೆ ಹೇಳಿದ್ದೆ. ಇದನ್ನು ಮೆಚ್ಚಿದ ಅವರು ಚಿತ್ರಕ್ಕೆ ಬಂಡವಾಳ ತೊಡಗಿಸುವ ಭರವಸೆ  ಆಗಿನಿಂದಲೂ ನನ್ನ ಚಿತ್ರದಲ್ಲಿ ದಿಗಂತ್ ನಟಿಸಬೇಕು ಎಂಬ ಆಸೆಯಿತ್ತು. ಅದರಂತೆ ರಕ್ಷಿತ್ ಶೆಟ್ಟಿ ನನಗೆ ದಿಗಂತ್ ಅವರ ಪರಿಚಯ ಮಾಡಿಸಿದರು. ಹತ್ತು ನಿಮಿಷದ ಕಥೆ ಕೇಳಿದ್ದ ದಿಗಂತ್ ಸಿನಿಮಾದಲ್ಲಿ ಆ್ಯಕ್‌ಟ್ ಮಾಡಲು ಒಪ್ಪಿದರು’ ಎನ್ನುತ್ತಾರೆ ಸನ್ನಾಹೆಗ್ಡೆ.

ಮೊದಲು ಈ ಸಿನಿಮಾದ ಕಥೆ ಓದಿದ್ದ ರಕ್ಷಿತ್ ಅದನ್ನು ತುಂಬ ಮೆಚ್ಚಿಕೊಂಡಿದ್ದರು. ಬಳಿಕ ಪುಷ್ಕರ್ ಸಹ ಕಥೆಯನ್ನು ಮೆಚ್ಚಿಕೊಂಡರು. ಚಿತ್ರಕ್ಕಾಗಿ ರಕ್ಷಿತ್ ಶೆಟ್ಟಿ  ಸಾಕಷ್ಟು ಐಡಿಯಾ ಕೊಟ್ಟಿದ್ದಾರೆ. ಇನ್ನುಳಿದ ಇಬ್ಬರೂ ನಿರ್ಮಾಪಕರು  ಮೇಲೆ ಭರವಸೆ ಇಟ್ಟಿದ್ದರು. ಚಿತ್ರವನ್ನು ಸೆನ್ಸಾರ್‌ಗೆ ಕಳಿಸುವ ಮುನ್ನ ರಕ್ಷಿತ್ ಫೈನಲ್ ಪ್ರಿಂಟ್ ನೋಡಿದ್ದಾರೆ. ಅಂತಿಮವಾಗಿ ಆಡಿಯನ್‌ಸ್ಗೆ ಇಷ್ಟವಾ ಗುವಂತಹ ಒಳ್ಳೆಯ ಕಥೆಯೊಂದನ್ನು, ಸಿನಿಮಾ ಮಾಡಿದ್ದೇವೆ ಎಂಬ ಖುಷಿ ಇದೆ’ ಎನ್ನುತ್ತಾರೆ ಸನ್ನಾ ಹೆಗ್ಡೆ.

ಪೂಜಾ ನಾಯಕಿಯಾದ ಕಥೆ

‘ಕಥೆಯೊಂದು ಶುರುವಾಗಿದೆ’ ಚಿತ್ರದ ಮೂಲಕ ನಟಿ ಪೂಜಾ ದೇವರಿಯಾ ಕನ್ನಡ ಚಿತ್ರರಂಗಕ್ಕೆ ಅಡಿಯಿಡುತ್ತಿದ್ದಾರೆ. ಚೆನ್ನೈನಲ್ಲಿ ಹುಟ್ಟಿ ಬೆಳೆದ ಪೂಜಾ ತಾಯಿ ಕನ್ನಡತಿ. ಇದೇ ನಂಟು ಪೂಜಾರನ್ನು ಕನ್ನಡ ಚಿತ್ರದಲ್ಲಿ  ಮಾಡಿದೆ. ಕನ್ನಡ ಬಾರದಿದ್ದರೂ, ಚಿತ್ರದ ಪಾತ್ರಕ್ಕಾಗಿ ಪೂಜಾ, ಕನ್ನಡದ ಸರಿಯಾದ ಉಚ್ಚಾರಣೆ, ಧ್ವನಿ ಸಂಯೋಜನೆಗೊಳಿಸಿಕೊಳ್ಳುವುದನ್ನು ಸವಾಲಾಗಿ ಸ್ವೀಕರಿಸಿ ಕಲಿತುಕೊಂಡಿದ್ದಾರೆ.

‘ಚಿತ್ರೀಕರಣದ ಸಮಯದಲ್ಲಿ ಡಬ್ಬಿಂಗ್ ಬದಲಿಗೆ ಸಂಭಾಷಣೆಯನ್ನು ರೆಕಾರ್ಡಿಂಗ್ ಮಾಡುತ್ತಿದ್ದರಿಂದ, ಕನ್ನಡದಲ್ಲಿ ಡೈಲಾಗ್ ಹೇಳುವುದು ಸವಾಲಿನ ಕೆಲಸ ವಾಗಿತ್ತು. ನಿರ್ದೇಶಕರು ಭಾಷೆಯ ಉಚ್ಚಾರ, ಡೈಲಾಗ್‌ಸ್ ಡೆಲಿವರಿ ವಿಷಯಗಳಲ್ಲಿ ತುಂಬಾ ಸಹಕಾರ ನೀಡಿದ್ದರು. ಹೀಗಾಗಿ ಭಾಷೆಯ ಮೇಲೆ ಹಿಡಿತ ಸಾಧಿಸಿಕೊಳ್ಳುವುದು ಸಾಧ್ಯವಾಯಿತು. ಕಥೆಯೊಂದು ಶುರುವಾಗಿದೆ ಒಂದು ನೀಟಾದ ರೊಮ್ಯಾಂಟಿಕ್ ಹಾಸ್ಯ ಪ್ರಧಾನ  ಇದರಲ್ಲಿ ಯಾವುದೇ ರೀತಿಯ ದೈಹಿಕ ಸ್ಪರ್ಶದ ದೃಶ್ಯಗಳಿಲ್ಲ. ಇಲ್ಲಿ ಎಲ್ಲವೂ ಸಂಭಾಷಣೆ ಹಾಗೂ ಅಭಿವ್ಯಕ್ತಿಯ ಮೂಲಕವೇ ತೋರಿಸಲಾಗಿದೆ. ವಿಭಿನ್ನ ವಯೋಮಾನದವರಿಗೆ ಹೊಂದುವ ಕಥೆ ಇದು. ಚಿತ್ರ ನನ್ನ ಸಿನಿ ಕರಿಯರ್‌ನಲ್ಲಿ ಬ್ರೇಕ್ ನೀಡುವ ವಿಶ್ವಾಸವಿದೆ’ ಎನ್ನುತ್ತಾರೆ ಪೂಜಾ.

Tags

Related Articles

Leave a Reply

Your email address will not be published. Required fields are marked *

Language
Close