About Us Advertise with us Be a Reporter E-Paper

Breaking Newsರಾಜ್ಯ

ತುಮಕೂರು ವಿವಿ ನೂತನ ಕುಲಸಚಿವರಾಗಿ ಡಾ. ಟಿ.ವಿ.ವೆಂಕಟೇಶ ನೇಮಕ

ತುಮಕೂರು: ತುಮಕೂರು ವಿಶ್ವವಿದ್ಯಾಲಯದ ನೂತನ ಕುಲಸಚಿವರಾಗಿ ಡಾ.ಟಿ.ವಿ.ವೆಂಕಟೇಶ ಮಂಗಳವಾರ ನೇಮಕರಾಗಿದ್ದಾರೆ.

ಕುವೆಂಪು ವಿವಿಯ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದ ವೆಂಕಟೇಶರವರು, 30 ವರ್ಷಗಳ ಕಾಲ ಕುವೆಂಪು ವಿವಿ, ದಾವಣಗೆರೆ ವಿವಿ ಸೇರಿದಂತೆ ಇತರ ವಿವಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಕಳೆದ 2017ರ ಅಕ್ಟೋಬರ್ 27ರಂದು ಕುಲಸಚಿವರಾಗಿ ಅಧಿಕಾರವಹಿಸಿಕೊಂಡಿದ್ದ ಪ್ರೊ. ಬಿ.ಎಸ್.ಗುಂಜಾಳ್ ಕೇವಲ 8 ತಿಂಗಳು ಮಾತ್ರ ಕಾರ್ಯನಿರ್ವಹಿಸಿದ್ದಾರೆ. ಇವರನ್ನು ಏಕಾಏಕಿ ವರ್ಗಾವಣೆ ಮಾಡಿ, ಡಾ. ಟಿ.ವಿ.ವೆಂಕಟೇಶರನ್ನು ಕುಲಸಚಿವರಾಗಿ ನೇಮಕ ಮಾಡಲಾಗಿದೆ. ಇದರ ಹಿಂದೆ ರಾಜಕೀಯ ಪ್ರಭಾವವಿದೆ ಎಂಬ ಆರೋಪ ಕೇಳಿ ಬಂದಿದೆ.

Tags

Related Articles

Leave a Reply

Your email address will not be published. Required fields are marked *

Language
Close