About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಕ್ವಾಟರ್ ಎಣ್ಣೆ ಮಾತ್ರ ಕುಡಿಯುವ ರೀತಿ ಮಾಡ್ರಪ್ಪ…..!

ಹಾಸನ: ಗ್ರಾಮಗಳಲ್ಲಿ ರೈತರಿಗೆ ಎಣ್ಣೆ ಸಾಲ ಸಿಗುತ್ತಿದೆ. ಒಂದು ಕ್ವಾಟರ್ ಕುಡಿಯುವವನು, ಸಾಲ ಸಿಗುತ್ತೆ ಅಂತಾ ಆರು-ಏಳು ಕ್ವಾಟರ್ ಕುಡಿತ್ತಿದ್ದಾನೆ. ದಯವಿಟ್ಟು ಒಂದು ಕ್ವಾಟರ್ ಮಾತ್ರ ಕುಡಿಯುವ ರೀತಿ ಮಾಡ್ರಪ್ಪ ಎಂದು ಅರಸೀಕೆರೆ ಶಾಸಕ ಶಿವಲಿಂಗೇಗೌಡ ಹೇಳಿದರು.

ಜಿಲ್ಲಾ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಮನೆಯಲ್ಲಿ ಹೆಂಡತಿ, ಮಕ್ಕಳ ಬಗ್ಗೆ ಚಿಂತೆ ಮಾಡುವುದಿಲ್ಲ. ಎಮ್ಮೆ ಮಾರಿಕೊಳ್ಳುವ ಪರಿಸ್ಥಿತಿ ಬರುತ್ತಿದೆ ಎಂದು ಶಾಸಕರು ಮಾತು ಮುಗಿಸಿದರು.

ಮದ್ಯದ ಅಂಗಡಿಗಳಲ್ಲಿ ಕಳಪೆ ಗುಣಮಟ್ಟದ ನೀರನ್ನು ಮಾರಾಟ ಮಾಡುತ್ತಿದ್ದಾರೆ. ಮತ್ತಿನ ಅಮಲಿನಲ್ಲಿ ಕೆಲವರು ಅದನ್ನೇ ಕುಡಿಯುತ್ತಾರೆ. ಅಧಿಕಾರಿಗಳು ಚೆನ್ನಾಗಿ ಡ್ರೆಸ್ ಹಾಕಿಕೊಂಡು ಬರುತ್ತಾರೆ. ಕೆಲಸ ಮಾತ್ರ ಮಾಡುವುದಿಲ್ಲ ಎಂದು ಚನ್ನರಾಯಪಟ್ಟಣ ಶಾಸಕ ಸಿ.ಎನ್.ಬಾಲಕೃಷ್ಣ ಅಸಮಧಾನ ಹೊರಹಾಕಿದರು.

ಕುಡಿದು ಮನೆಗೆ ಬಂದು ಪತ್ನಿ ಹಾಗೂ ಮಕ್ಕಳ ಮೇಲೆ ಹಲ್ಲೆ ಮಾಡುತ್ತಾರೆ. ಈ ರೀತಿ ಕುಡಿದು ಓಡಾಡುವರ ಮೇಲೆ ಒಂದರೆಡು ಕೇಸ್ ಹಾಕಿ ಬುದ್ಧಿ ಕಲಿಸಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸಚಿವ ಎಚ್.ಡಿ.ರೇವಣ್ಣ ಸೂಚಿಸಿದರು. ಕುಡಿದು ಬೈಕ್ ಓಡಿಸುತ್ತಾರೆ. ಒಂದು ವೇಳೆ ಬಿದ್ದು ಗಂಭೀರವಾಗಿ ಗಾಯಗೊಂಡರೆ ಪರಿಹಾರದ ಹಣ ಕೂಡ ಸಿಗಲ್ಲ. ಈ ಕುರಿತು ಅಗತ್ಯ ಕ್ರಮಕೈಗೊಳ್ಳಬೇಕು ಎಂದರು.

Tags

Related Articles

Leave a Reply

Your email address will not be published. Required fields are marked *

Language
Close