About Us Advertise with us Be a Reporter E-Paper

ಅಂಕಣಗಳು

ಸಾರ್…! ಸ್ವಲ್ಪ ಜೋರಾಗಿ ‘ಹ್ಹೂ-ಹ್ಹೂ’ ಎನ್ನಿ…!

- ಎಸ್. ಷಡಕ್ಷರಿ

ಹೌದು! ನಮಗೂ ಸ್ಥಳೀಯ ಸಂಜೆಯ ಹೊತ್ತು ನಮ್ಮ ವಾಹನಗಳನ್ನು ನಿಲ್ಲಿಸಿರಬಹುದು! ಒಂದು ಪುಟ್ಟ ಯಂತ್ರವನ್ನು ನಮ್ಮ ಮುಖದ ಬಳಿ ತಂದಿರಬಹುದು! ಸಾರ್ ಸ್ವಲ್ಪ ಜೋರಾಗಿ ಹ್ಹೂ-ಹ್ಹೂ ಎನ್ನಿ ಎಂದಿರಬಹುದು! ಆನಂತರ ಆ ಯಂತ್ರವನ್ನು ನೋಡಿ, ನಾವು ಮಾದಕ ಪಾನೀಯ ಸೇವಿಸಿದ್ದೇವೆಯೋ ಇಲ್ಲವೋ ಎಂಬುದನ್ನು ತೀರ್ಮಾನಿಸುತ್ತಾರಲ್ಲವೇ? ಮುಂದೆ ಪೊಲೀಸರು ಏನು ಮಾಡುತ್ತಾರೆ ಎಂಬುದನ್ನು ಪಕ್ಕಕ್ಕಿಡೋಣ. ಆದರೆ ಪೊಲೀಸರು ಈ ಪದ್ಧತಿಯನ್ನು ಏಕೆ ಅನುಸರಿಸುತ್ತಾರೆಂಬುದರ ಬಗ್ಗೆ ತಿಳಿದುಕೊಳ್ಳೋಣ.

ಆಕೆಯ ಹೆಸರು ಕ್ಯಾಂಡೀ ಲೈಟ್ನರ್. ಅಮೆರಿಕಾ ನಿವಾಸಿಯಾಗಿದ್ದ ಹದಿಮೂರು ವರ್ಷದ ಒಬ್ಬಳೇ ಮಗಳು ಕ್ಯಾರೀ ಕಾರಿಗೆ ಸಿಕ್ಕಿ 1980ರಲ್ಲಿ ಸತ್ತು ಹೋದಳು. ಮಗಳದೇನೂ ತಪ್ಪಿರಲಿಲ್ಲ. ತನ್ನ ಪಾಡಿಗೆ ತಾನು ರಸ್ತೆಯಲ್ಲಿ ನಡೆದು ಹೋಗುತ್ತಿದ್ದಳು. ಎಲ್ಲಿಂದಲೋ ಅಡ್ಡಾದಿಡ್ಡಿಯಾಗಿ ನುಗ್ಗಿ ಬಂದ ಕಾರು ಆಕೆಯ ಮೇಲೆ ಹರಿದುಹೋಯಿತು. ಆಕೆ ಸ್ಥಳದಲ್ಲೇ ಸಾವನ್ನಪ್ಪಿದಳು. ಲೈಟ್ನರ್ ತನಗಿದ್ದ ಒಬ್ಬಳೇ ಮಗಳ ಅಂತ್ಯಕ್ರಿಯೆ ಮಾಡಿ ಮನೆಗೆ ಮರಳಿದಾಗ ಮನೆ ಬಿಕೋ ಎನಿಸುತ್ತಿತ್ತು. ಮನ ಶೋಕಿಸುತ್ತಿತ್ತು.

ಮರುದಿನ ಪೊಲೀಸ್ ಸ್ಟೇಷನ್ನಿಗೆ ಹೋದಾಗ ಆಕೆಗೆ ತನ್ನ ಮಗಳ ಕಾರಣನಾದ ಚಾಲಕನ ಬಗ್ಗೆ ಅನೇಕ ವಿಷಯಗಳು ತಿಳಿದುಬಂದವು. ಆತ ಅಷ್ಟುಹೊತ್ತಿಗಾಗಲೇ ನಾಲ್ಕು ಬಾರಿ ಕುಡಿದು ಕಾರು ಚಲಾಯಿಸಿ ಅಪಘಾತ ಮಾಡಿ ನಾಲ್ಕು ಜನರ ಬಲಿತೆಗೆದುಕೊಂಡಿದ್ದ. ನಾಲ್ಕು ಬಾರಿ ಬಂಧನಕ್ಕೆ ಒಳಗಾಗಿದ್ದ. ಆಕೆಯ ಮಗಳ ಸಾವಿಗೆ ಎರಡೇ ದಿನದ ಮುಂಚೆ ಮತ್ತೊಂದು ಅಪಘಾತ ಮಾಡಿದ್ದ. ಬಂಧನಕ್ಕೆ ಒಳಗಾಗಿದ್ದ. ಜಾಮೀನು ಪಡೆದು ಹೊರಬಂದು ಮತ್ತೆ ಕುಡಿದು ಕಾರು ಚಲಾಯಿಸಿ ಆಕೆಯ ಮಗಳ ಸಾವಿಗೆ ಕಾರಣನಾಗಿದ್ದ. ಮತ್ತೆ ಬಂಧನಕ್ಕೆ ಒಳಗಾಗಿದ್ದರೂ, ಜಾಮೀನು ಪಡೆದು ಇದೆಲ್ಲವನ್ನೂ ಕೇಳಿದ ಲೈಟ್ನರ್‌ಗೆ ಮೈಯೆಲ್ಲ ಉರಿದುಹೋಯಿತು. ಇಂತಹ ಅಪಘಾತ ಸರಣಿಗಳನ್ನು ಮಾಡುವವರಿಗೆ ಧಾರಾಳವಾಗಿ ಜಾಮೀನು ಕೊಡುವ ಸರಕಾರಿ ಕಾನೂನುಗಳ ಬಗ್ಗೆ ಸಿಟ್ಟು ಬಂತು. ಆದರೆ ಆಕೆ ಸಿಟ್ಟುಗೊಂಡು ಸುಮ್ಮನೆ ಕೂರಲಿಲ್ಲ. ಇದರ ಬಗ್ಗೆ ಏನಾದರೂ ಮಾಡಬೇಕೆಂದು ತೀರ್ಮಾನಿಸಿದಳು.

ಕುಡಿದು ಕಾರು ಚಲಾಯಿಸಿ ನಡೆದ ಅಪಘಾತಗಳಲ್ಲಿ ಮಕ್ಕಳನ್ನು ಕಳೆದುಕೊಂಡ ನತದೃಷ್ಟರ ತಾಯಂದಿರ ಸಂಘವನ್ನು ಕಟ್ಟಿದಳು. ಅದಕ್ಕೆ ‘ಮದರ್ಸ್ ಎಗೈನ್‌ಸ್ಟ್ ಡ್ರಂಕನ್ ಡ್ರೈವಿಂಗ್’ (ಎಂ.ಎ.ಡಿ.ಡಿ) ಎಂದು ಹೆಸರಿಟ್ಟಳು. ಆಕೆಗೆ ಸಂಘಕ್ಕೆ ಸದಸ್ಯೆಯರನ್ನು ಕಷ್ಟವಾಗಲಿಲ್ಲ, ಏಕೆಂದರೆ ಅಮೆರಿಕಾದಲ್ಲಿ ಪ್ರತಿವರ್ಷ ಹದಿನೈದು ಸಾವಿರಕ್ಕೂ ಹೆಚ್ಚು ಜನ ಕುಡಿದು ಕಾರು ಚಲಾಯಿಸಿದವರ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದರಂತೆ! ಎಂ.ಎ.ಡಿ.ಡಿ. ಸಂಘ ಸರಸರನೆ ಬೆಳೆಯುತ್ತ ಹೋಯಿತು. ಅದರ ಶಕ್ತಿಯೂ ಬೆಳೆಯುತ್ತಾ ಹೋಯಿತು. ಅದರ ಒತ್ತಾಯಕ್ಕೆ ಮಣಿದು ಅಲ್ಲಿನ ಸರಕಾರ ಅನೇಕ ಸುಧಾರಣೆಗಳನ್ನು ತಂದಿತು.

ಅವುಗಳಲ್ಲಿ ಮುಖ್ಯವಾದವುಗಳು:
* ಕುಡಿದು ಕಾರು ಚಲಾಯಿಸುವುದು ಕೊಲೆಯಷ್ಟೇ ತೀವ್ರ ಅಪರಾಧವೆಂಬ ಚಿಂತನೆ ಮೊದಲಾಯಿತು.
* ಅಂತಹ ಚಾಲಕರ ಡ್ರೈವಿಂಗ್ ಲೈಸನ್ಸುಗಳನ್ನು ರದ್ದು ಮಾಡಲಾಗುತ್ತಿತ್ತು.
ಮುಖ್ಯರಸ್ತೆಗಳಲ್ಲಿ ಕಾರು ನಿಲ್ಲಿಸಿ ಚಾಲಕರ ತಪಾಸಣೆ ಮಾಡಿ ಅವರ ರಕ್ತ ಪರೀಕ್ಷೆ ಮಾಡಿ ರಕ್ತದಲ್ಲಿನ ಆಲ್ಕೋಹಾಲ್ ಮಟ್ಟವನ್ನು ಪರೀಕ್ಷಿಸುವ ಪದ್ಧತಿ ಮೊದಲಾಯಿತು.

ಈಗ ಸಂಘ ವಿಶ್ವದ ಅನೇಕ ದೇಶಗಳಲ್ಲಿ ಸಾವಿರಾರು ಶಾಖೆಗಳನ್ನು ಹೊಂದಿದೆ. ಲಕ್ಷಾಂತರ ಮಂದಿ ಸ್ವಯಂ ಸೇವಕರಿದ್ದಾರೆ. ಬಲಿಷ್ಟವಾಗಿರುವ ಈ ಸಂಸ್ಥೆ ಸರಕಾರಗಳನ್ನು ಅಲುಗಾಡಿಸುವಷ್ಟು ದೊಡ್ಡದಾಗಿ ಬೆಳೆದಿದೆ!

ಮುಂದಿನ ಬಾರಿ ನಿಮ್ಮ ಊರಿನ ಪೊಲೀಸರು ನಿಮ್ಮ ಕಾರನ್ನು ತಡೆದು, ಸಾರ್ ನಿಮ್ಮ ರಕ್ತದಲ್ಲಿನ ಆಲ್ಕೋಹಾಲ್ ಮಟ್ಟ ಪರೀಕ್ಷಿಸಿದರೆ, ಮೇಲೆ ಸಿಟ್ಟಾಗಬೇಡಿ. ಕುಡಿದು ಕಾರು ಚಲಾಯಿಸಿದವರಿಂದಾಗುವ ಅಪಘಾತಗಳಲ್ಲಿ ಮಗನನ್ನೋ, ಮಗಳನ್ನೋ, ಗಂಡನನ್ನೋ ಕಳೆದುಕೊಂಡು ಅಳುವವರನ್ನು ನೆನೆಸಿಕೊಳ್ಳಿ! ಮ್ಯಾಡ್ಡ್ ಸಂಸ್ಥೆಯ ಸದಸ್ಯರ ನೋವು ಕಡಿಮೆ ಆಗಲಿ ಎಂದು ಹಾರೈಸಿ..!

Tags

Related Articles

Leave a Reply

Your email address will not be published. Required fields are marked *

Language
Close