Breaking Newsಗ್ಯಾಲರಿಪ್ರಚಲಿತರಾಜ್ಯ
ಕಾಯಕಯೋಗಿ ಶಿವಕುಮಾರ ಸ್ವಾಮೀಜಿಗಳ ಅಪರೂಪದ ಫೋಟೊಗಳ ಮೆಲುಕು

ತ್ರಿವಿಧ ದಾಸೋಹಿ, ಕಾಯಕ ಯೋಗಿ ಹಾಗೂ ನಡೆದಾಡುತ್ತಿದ್ದ ದೇವರು ಶ್ರೀ ಶಿವಕುಮಾರ ಸ್ವಾಮಿ ಅವರು ಶಿವೈಕ್ಯರಾಗಿದ್ದು, ಇಡೀ ನಾಡಿಗೆ ತುಂಬಲಾರದ ನಷ್ಟವಾಗಿದೆ. ಅಸಂಖ್ಯಾತರಿಗೆ ದಾರಿ ದೀಪವಾಗಿದ್ದ ಶ್ರೀಗಳ ಅಗಲಿಕೆಯಿಂದ ರಾಜ್ಯವೇ ಶೋಕಸಾಗರದಲ್ಲಿ ಮುಳುಗಿದೆ. ಜೀವನ ಯಾನದಲ್ಲಿ ಶ್ರೀಗಳು ಇನ್ನು ನೆನಪು ಮಾತ್ರ. ಇಂಥಹ ದುಃಖದ ಸಂದರ್ಭದಲ್ಲಿ ಶ್ರೀಗಳು ಬಿಟ್ಟು ಹೋದ ನೆನಪುಗಳ ಬುತ್ತಿಯು ಈ ಕೆಳಕಂಡ ಪೋಟೋಗಳಲ್ಲಿ ಹಚ್ಚ ಹಸಿರಾಗಿದೆ. ನಿತ್ಯದ ಪೂಜೆ ಶ್ರೀಗಳ ಉಸಿರು ಹಾಗೂ ವಿಶಿಷ್ಟವಾಗಿದೆ
ಶತಮಾನದ ಸಂತ, ಕಾಯಕಯೋಗಿ, ನಡೆದಾಡುವ ದೇವರು ಇನ್ನು ನೆನಪು ಮಾತ್ರ. ಕಲಿಯುಗದ ಈ ಮಹಾಪುರುಷ ಮಾಡದ ದಾನವಿಲ್ಲ, ಪಡೆಯದ ಭಕ್ತನೇ ಇಲ್ಲ. ಹಸಿದವರಿಗೆ ಅನ್ನ, ಮಕ್ಕಳಿಗೆ ವಿದ್ಯೆನೀಡದೇ ಒಂದೇ ಒಂದು ದಿನವೂ ಮಲಗಿಲ್ಲ. ತ್ರಿವಿಧ ದಾಸೋಹದ ಮೂಲಕ ವಿಶ್ವವಿಖ್ಯಾತಿ ಪಡೆದವರು ಸಿದ್ದಗಂಗಾ ಶ್ರೀಗಳು. ಕಾಯಕವೇ ಕೈಲಾಸ ಎಂಬ ಬಸವಣ್ಣನವರ ತತ್ವವನ್ನು ಅನುಸರಿಸಿ ಬದುಕಿನುದ್ದಕ್ಕೂ ಸಾರ್ಥಕ ಜೀವನ ನಡೆಸಿದವರು ಶತಮಾನದ ಸಂತ ಶಿವಕುಮಾರ ಸ್ವಾಮೀಜಿ. ಅವರ ಜೀವನದ ಹಲವಾರು ಘಟನೆಗಳನ್ನು ನೆನಪಿಸುವ ಒಂದಷ್ಟು ಚಿತ್ರಪಟಗಳು ಇಲ್ಲಿವೆ.




