About Us Advertise with us Be a Reporter E-Paper

Breaking Newsದೇಶಪ್ರಚಲಿತ

ಕುಡಿದ ಅಮಲಿನಲ್ಲಿ ಮಹಿಳೆಯ ಸೀಟಿನ ಮೇಲೆ ಮೂತ್ರ ಮಾಡಿದ ವ್ಯಕ್ತಿ

ದೆಹಲಿ:  ಏರ್‌‌‌‌ಇಂಡಿಯಾ ಅಂತಾರಾಷ್ಟ್ರೀಯ ವಿಮಾನದಲ್ಲಿ ಕುಡಿದ ಅಮಲಿನಲ್ಲಿ ಮಹಿಳಾ ಸೀಟಿನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆ ನಡೆದಿದೆ. ಘಟನೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ ವರದಿ ನೀಡುವಂತೆ ಏರ್‌‌‌ಇಂಡಿಯಾಗೆ ಸೂಚನೆ ನೀಡಿದೆ.

ದೆಹಲಿಯಿಂದ ನ್ಯೂಯಾರ್ಕ್‍ಗೆ ತೆರಳುತ್ತಿದ್ದ ಎಐ-102 ಏರ್ ಇಂಡಿಯಾ ವಿಮಾನದಲ್ಲಿ ಆ.30ರಂದು ಈ ಘಟನೆ ನಡೆದಿದೆ. ಈ ಘಟನೆೆಗೆ ಒಳಗಾದ ಮಹಿಳೆಯ ಪುತ್ರಿ ಇಂದ್ರಾಣಿ ಘೋಷ್ ನಿನ್ನೆ ಟ್ವೀಟ್ ಮಾಡಿದ್ದಾರೆ. ತನ್ನ ತಾಯಿಗೆ ವಿಮಾನದಲ್ಲಿ ಆದ ಅಹಿತಕರ ಘಟನೆಯನ್ನು ವಿವರಿಸಿದ್ದಾರೆ.

ಎಐ-102 ಜೆಎಫ್‍ಕೆ-ದೆಹಲಿ ಮಾರ್ಗದ ವಿಮಾನದ ಆಸನ ಸಂಖ್ಯೆ 36-ಡಿ ಸೀಟ್‍ನಲ್ಲಿ ಕುಳಿತು ನನ್ನ ತಾಯಿ ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ತೀವ್ರ ಮುಜುಗರಕ್ಕೀಡಾಗುವ ಘಟನೆ ನಡೆಯಿತು. ಪಾನಮತ್ತನಾಗಿದ್ದ ಪ್ರಯಾಣಿಕನೊಬ್ಬ ಊಟದ ನಂತರ ನನ್ನ ತಾಯಿ ಕುಳಿತ್ತಿದ್ದ ಸ್ಥಳಕ್ಕೆ ಧಾವಿಸಿ ಪ್ಯಾಂಟ್ ತೆಗೆದು ಸೀಟ್ ಮೇಲೆ ಮೂತ್ರ ವಿಸರ್ಜನೆ ಮಾಡಿದ. ಇದರಿಂದ ನನ್ನ ತಾಯಿ ತೀವ್ರ ದಿಗ್ಭ್ರಮೆಗೆ ಒಳಗಾದರು.

ಈ ಘಟನೆ ಕುರಿತು ಕ್ರಮ ಕೈಗೊಳ್ಳಿ ಎಂದು ಇಂದ್ರಾಣಿ ಅವರು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು, ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಏರ್ ಇಂಡಿಯಾ ಸಂಸ್ಥೆ ಮುಖ್ಯಸ್ಥರನ್ನು ಆಗ್ರಹಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close