About Us Advertise with us Be a Reporter E-Paper

ಅಂಕಣಗಳು

ಹೊರಗೆಲ್ಲ ಕುಡುಕರು!  ಒಬ್ಬ ಸಾಧಕರು!

ಕೆಲವು ತಾಯ್ತಂದೆಯರು ನಮ್ಮ ಹುಡುಗ ಒಳ್ಳೆಯವನು. ಆದರೆ ಅವರ ಸುತ್ತಲ ವಾತಾವರಣ ಒಳ್ಳೆಯದಿರಲಿಲ್ಲ. ಹಾಗಾಗಿ ಅವನು ಕೆಟ್ಟುಹೋದ ಎಂದು ಹೇಳುವುದನ್ನು ಕೇಳಿರಬಹುದು. ಆದರೆ ಸುತ್ತಲೂ ಕೆಟ್ಟದು ಎನ್ನಬಹುದಾದ ವಾತಾವರಣ ಇದ್ದರೂ ಸಾಧನೆಯನ್ನು ಕೈಬಿಡದ ಮಹನೀಯರ ಬಗೆಗಿನ ಎರಡು ಪುಟ್ಟ ಘಟನೆಗಳು ಇಲ್ಲಿವೆ.

ಮೊದಲನೆಯ ಘಟನೆ: ಅದೊಂದು ಹೆಂಡದಂಗಡಿ. ಅಂಗಡಿಯ ತುಂಬೆಲ್ಲ ಗ್ರಾಹಕರು. ಕುಡಿಯುವವರು ಕುಡಿಯುತ್ತಿದ್ದರು. ತಿನ್ನುವವರು ತಿನ್ನುತ್ತಿದ್ದರು.  ಹರಟೆ ಹೊಡೆಯುವವರು ಹರಟೆ ಹೊಡೆಯುತ್ತಿದ್ದರು. ಅವರಿಗೆ ಆಹಾರ-ಪಾನೀಯಗಳನ್ನು ಸರಬರಾಜು ಮಾಡುತ್ತಿದ್ದ ಕೆಲಸಗಾರರು ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಭರಭರ ಓಡಾಡುತ್ತ ಕೆಲಸ ಮಾಡುತ್ತಿದ್ದರು. ಅಂಗಡಿಯ ತುಂಬೆಲ್ಲ ಗದ್ದಲವೋ ಗದ್ದಲ.

ಮೂಲೆಯಲ್ಲಿ ಒಂದು ಕುರ್ಚಿ-ಮೇಜಿತ್ತು. ಅಲ್ಲೊಬ್ಬ ಕ್ಯಾಷಿಯರ್ ಕುಳಿತಿದ್ದರು. ಹತ್ತು ಹದಿನೈದು ನಿಮಿಷಕ್ಕೊಮ್ಮೆ ಕೆಲಸಗಾರರು ತಂದು ಕೊಡುತ್ತಿದ್ದ ಬಿಲ್ಲಿಗೆ ಸರಿಯಾಗಿ ಲೆಕ್ಕ ಮಾಡಿ ಹಣ ತೆಗೆದುಕೊಳ್ಳುತ್ತಿದ್ದರು. ಉಳಿದ ಚಿಲ್ಲರೆ ಅವರಿಗೆ ವಾಪಸ್ಸು ಕೊಡುತ್ತಿದ್ದರು. ಮತ್ತೆ ಮುಂದಿನ ಬಿಲ್ ಬರುವವರೆಗೆ ತಮ್ಮ ಪಾಡಿಗೆ ತಾವು  ಆದರೆ ಸುಮ್ಮನೆ ಕುಳಿತಿರುತ್ತಿರಲಿಲ್ಲ. ಅವರ ಕೈಯ್ಯಲ್ಲಿ ‘ವಿಶ್ವವಿಜೇತ ಸ್ವಾಮಿ ವಿವೇಕಾನಂದ’ ಪುಸ್ತಕವಿತ್ತು. ಅದನ್ನೋದುತ್ತಾ ಕುಳಿತಿರುತ್ತಿದ್ದರು.

ಅದನ್ನು ಗಮನಿಸಿದ ಒಬ್ಬರು ಅಯ್ಯಾ ಪುಣ್ಯಾತ್ಮರೇ! ಹೆಂಡದಂಗಡಿಯಲ್ಲಿ, ಗದ್ದಲದ ವಾತಾವರಣದಲ್ಲಿ ಕ್ಯಾಷಿರ್ಯ ಕೆಲಸ ಮಾಡುತ್ತಿದ್ದೀರಿ. ಹೊರಗೆ ಜನ ಕುಡಿಯುತ್ತ ಕುಳಿದ್ದಾರೆ. ಮತ್ತು ಹೊರಗೆಲ್ಲ ಹೆಂಡದ ಬಾಟಲುಗಳು ತುಂಬಿವೆ. ಆದರೆ ನೀವು ಕೊಂಚ ಬಿಡುವು ಸಿಕ್ಕರೆ ಸಾಕು, ವಿವೇಕಾನಂದರ ಪುಸ್ತಕವನ್ನು ಓದುತ್ತೀರಿ! ನಿಮಗಿದು ಹೇಗೆ ಸಾಧ್ಯ? ಎಂದರು. ಆತ ಹೊರಗಿರುವವರು ಕುಡಿಯುತ್ತಿದ್ದಾರೆ. ಆದರೆ ನನ್ನೊಳಗಿರುವವನು  ಹೆಂಡ ನನ್ನ ಹೊರಗೆ ತುಂಬಿದೆ. ಆದರೆ ನನ್ನೊಳಗೆ ಹೆಂಡವಿಲ್ಲ. ಆದುದರಿಂದ ಇದು ಸಾಧ್ಯವಾಗುತ್ತಿದೆ! ಎಂದು ಹೇಳಿದಾಗ, ಕೇಳಿದವರು ವಾರ್ರೆವ್ಹಾ! ಎಂದು ಮೆಚ್ಚುಗೆ ಸೂಚಿಸಿದರು.

ಮತ್ತೊಂದು ಘಟನೆ: ಎರಡನೆಯ ವಿಶ್ವಯುದ್ಧದ ಸಮಯ. ಅಮೆರಿಕಾದ ಸೈನಿಕರು ಇಟಲಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರು. ಅಲ್ಲೊಂದು ಹಳ್ಳಿಯಿತ್ತು. ಅದನ್ನು ಶತೃಸೈನ್ಯದಿಂದ ಬಿಡಿಸಿೊಳ್ಳಬೇಕಾಗಿತ್ತು. ಭೀಕರ ಕಾಳಗ ನಡೆಯುತ್ತಿತ್ತು. ಎಲ್ಲೆಲ್ಲೂ ಗುಂಡು-ಫಿರಂಗಿಗಳ ಸದ್ದು ಗದ್ದಲ, ಗೊಂದಲದ ಪರಿಸ್ಥಿತಿ. ತೀವ್ರ ಹೋರಾಟದ ನಂತರ ಆ ಹಳ್ಳಿ ಅಮೆರಿಕನ್ ಸೈನ್ಯದ ವಶವಾಯಿತು.

 ಸೈನಿಕರು ಹಳ್ಳಿಯನ್ನು ಪ್ರವೇಶಿಸಿ ಅಡಗಿ ಕುಳಿತಿರಬಹುದಾದ ಶತೃಗಳನ್ನು ಹುಡುಕುತ್ತ ಪ್ರತಿಯೊಂದು ಮನೆಯನ್ನು ಶೋಧಿಸುತ್ತಿದ್ದರು. ಆಗ ಅವರಿಗೊಂದು ಆಶ್ಚರ್ಯ ಕಾದಿತ್ತು.

ಒಂದು ಮನೆಯ ಬಾಗಿಲನ್ನು ತಳ್ಳಿ ಒಳಗೆ ಹೋದಾಗ, ಅಲ್ಲೊಬ್ಬ ವೃದ್ಧರು ಕುಳಿತಿದ್ದರು. ಏನನ್ನೋ ಬರೆಯುತ್ತಿದ್ದರು. ಕೈಯ್ಯಲ್ಲಿ ಬಂದೂಕಿದ್ದ ಸೈನಿಕ ಹೈಯ್! ಯಾರು ನೀವು? ಇಲ್ಲೇನು ಮಾಡುತ್ತಿದ್ದೀರಿ? ಎಂದು ಗಡುಸಾದ ದನಿಯಲ್ಲಿ ಕೇಳಿದರು. ಆ ವೃದ್ಧರು ಸೈನಿಕನನ್ನು ನೋಡಿ ಸ್ವಲ್ಪವೂ ಗಲಿಬಿಲಿಗೊಳ್ಳಲಿಲ್ಲ. ಶಾಂತವಾಗಿ ತಲೆಯೆತ್ತಿ ನೋಡಿ ನನ್ನ ಹೆಸರು ಜಾರ್ಜ್  ನಾನೊಬ್ಬ ತತ್ವಚಿಂತಕ. ನಾನು ಕುಳಿತು ಒಂದು ಕವಿತೆ ಬರೆಯುತ್ತಿದ್ದೇನೆ ಎಂದರು. ಅಮೇರಿಕನ್ ಸೈನಿಕ ಹೊರಗೆಲ್ಲ ಭೀಕರ ಯುದ್ಧ ನಡೆಯುತ್ತಿದೆ. ಗುಂಡುಗಳು ಹಾರಾಡುತ್ತಿವೆ. ಅಂತಹುದರಲ್ಲಿ ನೀವಿಲ್ಲಿ ಕುಳಿತು ಕವಿತೆ ಬರೆಯಲು ಹೇಗೆ ಸಾಧ್ಯ? ಎಂದು ಆಶ್ಚರ್ಯ ವ್ಯಕ್ತಪಡಿಸಿದರು.

ಸಾಂತಾಯನರು ಹೊರಗೆಲ್ಲ ಯುದ್ಧ ನಡೆಯುತ್ತಿರಬಹುದು. ನನ್ನೊಳಗೆ ಯಾವ ಯುದ್ಧವೂ ನಡೆಯುತ್ತಿಲ್ಲ. ಅಲ್ಲಿ ಎಲ್ಲವೂ ಪ್ರಶಾಂತವಾಗಿದೆ. ಹಾಗಾಗಿ ನನಗೆ ಕವಿತೆ ಬರೆಯಲು ಸಾಧ್ಯವಾಗುತ್ತಿದೆ ಎಂದರು.

ಅಮೇರಿಕಾದ ಸೈನಿಕ ಏನೂ ಮಾತನಾಡಲಿಲ್ಲ. ಅವರಿಗೆ ನಮಸ್ಕರಿಸಿ,  ಕವಿತೆ ಬರೆಯುವುದನ್ನು ಮುಂದುವರೆಸಿ. ನಿಮಗೆ ತೊಂದರೆ ಕೊಟ್ಟಿದ್ದಕ್ಕೆ ಕ್ಷಮೆಯಿರಲಿ ಎಂದು ಹೇಳಿಹೋದರಂತೆ.

ಇವನ್ನು ಓದಿದ ಮೇಲೆ ಹೊರಗಿನ ವಾತಾವರಣಕ್ಕೂ, ಯಾರಾದರೂ ಕೆಡುವುದಕ್ಕೂ ಏನಾದರೂ ಸಂಬಂಧವಿದೆ ಎನಿಸುತ್ತದೆಯೇ? ಇಲ್ಲ ಅಲ್ಲವೇ?

Tags

Related Articles

Leave a Reply

Your email address will not be published. Required fields are marked *

Language
Close