Breaking Newsಪ್ರಚಲಿತ
ಜಿಲ್ಲಾ ಪೊಲೀಸ್ ಇಲಾಖೆಯಿಂದ ಇ-ಬೀಟ್ ವ್ಯವಸ್ಥೆೆ ಜಾರಿ

ತುಮಕೂರು: ಜಿಲ್ಲೆೆಯ ಪೊಲೀಸ್ ವ್ಯವಸ್ಥೆೆಯು ಜನಸ್ನೇಹಿ ಆಗುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ ಆಧುನಿಕ ಇ-ಬೀಟ್ ವ್ಯವಸ್ಥೆೆ ಜಾರಿಗೊಳಿಸಲಾಗಿದೆ. ಇದರಿಂದ ಅಪರಾಧಗಳು ನಿಯಂತ್ರಣಕ್ಕೆೆ ಬರುತ್ತವೆ ಎಂದು ಎಸ್ಪಿ ದಿವ್ಯಾಗೋಪಿನಾಥ್ ತಿಳಿಸಿದರು.
ನಗರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಧುನಿಕ ತಂತ್ರಜ್ಞಾನವನ್ನೊಳಗೊಂಡ ಇ-ಬೀಟ್, ರೀಡರ್ ಮತ್ತು ಕ್ಯೂ.ಆರ್. ಕೋಡ್ ಟ್ಯಾಗ್ಗಳ ಸ್ಕ್ಯಾನಿಂಗ್ ತಂತ್ರಜ್ಞಾನದ ಮೂಲಕ ಸಿಬ್ಬಂದಿಗಳ ಬೆರಳ ತುದಿಯಲ್ಲಿ ಡಿಜಿಟಲೀಕರಣಗೊಂಡ ಇ-ಬೀಟ್ ಪುಸ್ತಕ ಲಭ್ಯವಿರುವಂತೆ ಮಾಡಿದ್ದು, ಇದು ಅತ್ಯಂತ ನಿಖರ ಹಾಗೂ ಖಚಿತವಾಗಿ ಬೀಟ್ ಸಿಬ್ಬಂದಿಗಳ ಪ್ರತಿ ಚಲನೆಯ ಡಿಜಿಟಲ್ ದಾಖಲಾತಿ ಲಭ್ಯವಿರುವಂತೆ ಮಾಡುತ್ತದೆ ಎಂದು ವಿವರಿಸಿದರು.
ಇ-ಬೀಟ್ ವ್ಯವಸ್ಥೆೆಯಿಂದ ಸಿಬ್ಬಂದಿಗಳು ನಿಖರವಾಗಿ ಬೀಟ್ ಕಾರ್ಯನಿರ್ವಹಣೆ ಮಾಡಲು ಸಹಾಯಕಾರಿ. ಜಿ.ಪಿ.ಎಸ್. ತಂತ್ರಜ್ಞಾನ ಹೊಂದಿರುವುದರಿಂದ ಸಿಬ್ಬಂದಿಗಳ ಚಲನೆಯ ಸಮಯ, ಸ್ಥಳದ ಡಿಜಿಟಲ್ ದಾಖಲಾತಿ ಲಭ್ಯವಿದ್ದು, ಠಾಣಾಧಿಕಾರಿಗಳು, ಮೇಲಾಧಿಕಾರಿಗಳು ಪರೀಕ್ಷಿಸಬಹುದು ಮತ್ತು ಮೇಲ್ವಿಚಾರಣೆ ಮಾಡಬಹುದು ಎಂದು ಹೇಳಿದರು.
ಸಿಬ್ಬಂದಿಗಳಲ್ಲಿ ಹೆಚ್ಚಿನ ಕರ್ತವ್ಯ ಪ್ರಜ್ಞೆಯನ್ನು ಮೂಡಿಸುತ್ತದೆ ಹಾಗೂ ಕರ್ತವ್ಯದ ದಕ್ಷತೆಯನ್ನು ಹೆಚ್ಚಿಸುತ್ತದೆ. ಜನರಿಗೆ ಹೆಚ್ಚಿನ ಸುರಕ್ಷತಾ ಭಾವನೆ ಮೂಡುತ್ತದೆ. ಪಾರದರ್ಶಕ ಬೀಟ್ ವ್ಯವಸ್ಥೆೆ ಜಾರಿಯಾಗಲು ಹಾಗೂ ಸರಳ ಮೇಲ್ವಿಚಾರಣೆಗೆ ಸಹಾಯಕಾರಿಯಾಗಿದೆ ಎಂದು ತಿಳಿಸಿದರು.