About Us Advertise with us Be a Reporter E-Paper

ಸಿನಿಮಾಸ್

ನಮಸ್ಕಾರ ನಮಸ್ಕಾರ ನಮಸ್ಕಾರ

ಕಳೆದ ವಾರ ಮೂವರು ದೊಡ್ಡ ವ್ಯಕ್ತಿಗಳು ಕನ್ನಡಿಗರಿಗೆ ನಮಸ್ಕಾರ ಹೇಳಿದರು. ಮೊದಲನೆಯದು ಬಾಲಿವುಡ್‌ನ ನಟಿ ವಿದ್ಯಾಬಾಲನ್, ತೆಲುಗು ನಟ ಬಾಲಣ್ಣ, ಮತ್ತು ತಮಿಳಿನ ಬೇಡಿಕೆ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್. ಇವರು ನಮಸ್ಕಾರ ಹೇಳಿದ ಕಾರಣ ತೆಲುಗಿನ ‘ಕಥಾನಾಯಕಡು’ ಮತ್ತು ತಮಿಳಿನ ‘ಪೆಟ್ಟಾ’ ಸಿನಿಮಾಗಳು ಕನ್ನಡನಾಡಿನಲ್ಲಿ ಬಿಡುಗಡೆಯಾಗಬೇಕಿತ್ತು.

ಇದೇ ಕಾರಣಕ್ಕೆ ಈ ಮೂವರು ಕನ್ನಡವನ್ನು ಗಿಣಿ ಪಾಠದಂತೆ ಕಲಿತು ಕಷ್ಟ ಪಟ್ಟು ಎಲ್ಲೂ ತಪ್ಪಾಗದಂತೆ ಚೂರು ಮನಮುಟ್ಟುವಂತೆ ‘ಎಲ್ಲರಿಗೂ ನಮಸ್ಕಾರ’ ಎಂದರು. ಇವರು ಮನತುಂಬಿ ಕನ್ನಡಿಗರಿಗೆ ನಮಸ್ಕಾರ ಮಾಡಿದ ಕಾರಣ ಬಿಡುಗಡೆಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದ ಬಜಾರ್ ಸಿನಿಮಾ ಒಂದು ವಾರ ಮುಂದಕ್ಕೆ ಹೋಯ್ತು. ಇವರ ನಮಸ್ಕಾರಕ್ಕೂ, ಬಜಾರ್ ಸಿನಿಮಾ ಮುಂದೆ ಹೋಗುವುದಕ್ಕೂ ಯಾವ ಸಂಬಂಧ ಎಂದು ನೀವು ಯೋಚಿಸುತ್ತಿರಬಹುದು. ಕಾರಣ ಇಷ್ಟೇ ಕರ್ನಾಟಕದಲ್ಲಿ ಕಥಾನಾಯಕುಡು ಸಿನಿಮಾಗೆ 150 ಮತ್ತು ರಜಿನಿ ಕಾಂತ್ ಅಭಿನಯದ ಪೆಟ್ಟಾ ಸಿನಿಮಾಗೆ 250 ಥಿಯೇಟರ್‌ಗಳ ಅವಶ್ಯಕತೆ ಇತ್ತು. ಈ ಇವರು ನಮಸ್ಕಾರ ಎಂದರು, ಪರಿಣಾಮ ಬಜಾರ್ ಸಿನಿಮಾ ಮುಂದಕ್ಕೆ ಹೋಯ್ತು.

ದೀಪದ ಸುತ್ತ ಕತ್ತಲೆ ಎನ್ನುವಂತೆ, ಯಾವುದೇ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆದ್ದಾಗ, ಸಣ್ಣ ಪುಟ್ಟ ಸಿನಿಮಾಗಳು ಸೋಲಲೇ ಬೇಕಾದ ಅನಿವಾರ್ಯತೆ ನಿರ್ಮಾಣವಾಗುತ್ತದೆ. ಇದಕ್ಕೆ ತಾಜಾ ಉದಾಹರಣೆ ಎಂದರೆ, ಅನಂತು ವರ್ಸಸ್ ನಸ್ರತ್. ಅನಂತು ಸಿನಿಮಾವನ್ನು ಸೋತ ಸಿನಿಮಾಗಳ ಪಟ್ಟಿಗೆ ಸೇರಿಸಲು ಸಾಧ್ಯವಿಲ್ಲ, ಬೇಕಿದ್ದರೆ ಹೋರಾಡಿ ವೀರಮರಣವನ್ನಪ್ಪಿದ ಸಿನಿಮಾಗಳ ಪಟ್ಟಿ ಇದ್ದರೆ ಅದಕ್ಕೆ ಸೇರಿಸಬಹುದು. ಕೆಜಿಎಫ್ ಸಿನಿಮಾಗಾಗಿ ಯಶ್ ಓಡಾಡಿ ಪ್ರಚಾರ ಮಾಡಿದರು. ಬಾಲಿವುಡ್‌ಗೆ ಹೋದಾಗ ಹಿಂದಿಯಲ್ಲೇ, ತಮಿಳಿಗೆ ಹೋದಾಗ ತಮಿಳಿನಲ್ಲಿಯೇ ಮಾತನಾಡಿದರು. ಆದರೆ ಕರ್ನಾಟಕಕ್ಕೆ ಬೇರೆಯವರು ಬರುವಾಗ ಇಲ್ಲಿಯ ಭಾಷೆಯನ್ನು ಕಲಿಯುವ ಅವಶ್ಯಕತೆ ಇಲ್ಲ. ಏಕೆಂದರೆ ಎಲರಿಗೂ ನಮಸಕಾರ (ಅವರು ಹೇಳುವ ರೀತಿ) ಎಂದರೆ ವಿಶಾಲ ಹೃದಯದ ಕನ್ನಡಿಗರು ತಕ್ಷಣ ಒಪ್ಪಿ ಅಪ್ಪಿ ಬಿಡುತ್ತಾರೆ.

ಪೆಟ್ಟಾ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಸಿನಿಮಾದ ವಿತರಣೆಯನ್ನು ತೆಗೆದುಕೊಂಡಿರುವ ಜಾಕ್ ಮಂಜು ಈ ಸಿನಿಮಾವನ್ನು ರಜಿನಿಕಾಂತ್‌ರಿಂದ ಡಬ್ ಮಾಡಿಸಿ ಬಿಡುಗಡೆ ಮಾಡು ಬಗ್ಗೆ ಮಾಡುತ್ತಿರುವುದಾಗಿ ಹೇಳಿದರು. ಅದೃಷ್ಟ ಮಾಡಿದ್ದರೆ ಇದ್ದರೆ ನಾಳೆ ರಜನಿ ಅಭಿಮಾನಿಗಳು ಕನ್ನಡದಲ್ಲಿಯೇ ಈ ಸಿನಿಮಾವನ್ನು ನೋಡಬಹುದು. ಒಂದೆರಡು ದಿನದ ಹಿಂದಿನ ರಿಪೋರ್ಟ್ ಪ್ರಕಾರ ಕೆಜಿಎಫ್ 200 ಕೋಟಿ ರುಪಾಯಿಗಳ ಗಳಿಕೆ ಮಾಡಿದೆ. 70 ಕೋಟಿ ಹಾಕಿದ ಸಿನಿಮಾ ಎರಡೇ ವಾರದಲ್ಲಿ ದಾಖಲೆಯ ಗಳಿಕೆ ಮಾಡಿದೆ. ನಾವು ಬೇರೆ ರಾಜ್ಯಗಳಲ್ಲಿ ನಮ್ಮ ಸಿನಿಮಾವನ್ನು ಬಿಡುಗಡೆ ಮಾಡುತ್ತಿರುವಂತೆ ಅವರು ನಮ್ಮಲ್ಲಿ ಬಂದು ನಮಸ್ಕಾರ ಹೇಳಿ ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ. ದೇಶದ ಅತ್ಯುನ್ನತ ಡಬ್ಬಿಂಗ್ ತಪ್ಪಲ್ಲ ಎಂದು ಹೇಳಿದೆ. ಇಷ್ಟೆಲ್ಲಾ ಹೇಳಿದ್ಯಾಕೆ ಎಂದು ನಿಮಗೆ ಅರ್ಥವಾಗಿರಬಹುದು ಅಥವಾ ಅರ್ಥವಾಗದದೆಯೂ ಇರಬಹುದು. ತೊಂದರೆ ಇಲ್ಲ. ನಮ್ಮ ನಿಮ್ಮೆಲ್ಲರನ್ನೂ ಕೊನೆಗೆ ಕಾಡುವ ಪ್ರಶ್ನೆ ಮುಂದಿನ ದಿನಗಳಲ್ಲಿ ‘ಬಜಾರ್’ ನಂಥ ದೊಡ್ಡ ಬಜೆಟ್ ಅಲ್ಲದ, ದೊಡ್ಡ ತಾರಾಗಣವಿಲ್ಲದ ಸಿನಿಮಾಗಳ ಗತಿ ಏನು?

Tags

Related Articles

Leave a Reply

Your email address will not be published. Required fields are marked *

Language
Close