About Us Advertise with us Be a Reporter E-Paper

Breaking Newsಪ್ರಚಲಿತವಿದೇಶ

ಇರಾನ್‌ನಲ್ಲಿ ಭೂಕಂಪ: ಎರಡು ಬಲಿ

ಟೆಹ್ರಾನ್: ಪಶ್ಚಿಮ ಇರಾನಿನಲ್ಲಿ ಭೂ ಕಂಪನ ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದು, 241 ಜನ ಗಾಯಗೊಂಡಿದ್ದಾರೆ. ರಿಕ್ಟರ್ ಮಾಪಕದಲ್ಲಿ ಶೇ. 6.0ಯಷ್ಟು ಭೂಮಿ ಕಂಪಿಸಿರುವ ದಾಖಲೆಯಾಗಿದೆ ಎಂದು ವರದಿಯಾಗಿದೆ.

ಮೂರು ಕಡೆ ಭೂಮಿ ಕಂಪಿಸಿದ್ದು ಎರಡು ಕಡೆ 4.4ರಷ್ಟು ಹಾಗೂ 4.2ರಷ್ಟು ತೀವ್ರತೆಯಲ್ಲಿ ಕಂಪನ ದಾಖಲಾಗಿದೆ ಎಂದು ಅಮೆರಿಕ ಭೂ ವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ಪಶ್ಚಿಮ ಇರಾನಿನ ಕೆರ್ಮನಶಾ ಪ್ರಾಂತ್ಯದ ಜಾವನ್ ರುಡ್‌ನಲ್ಲಿ ಎರಡು ಬಾರಿ ಭೂಮಿ ಕಂಪಿಸಿದೆ. ಭೂ ಕಂಪನದ 70ವರ್ಷದ ವೃದ್ಧರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ. ಅಲ್ಲಿನ ಕಾಲಮಾನ ಪ್ರಕಾರ 2.43ಕ್ಕೆ ಭೂ ಕಂಪನ ಸಂಭವಿಸಿದೆ. ಜನರು ಭಯದಿಂದ ಮನೆಯಿಂದ ಹೊರಬಂದಿದ್ದಾರೆ.

ಆರು ಜನ ಗಂಭೀರ ಸ್ಥಿತಿಯಲ್ಲಿದ್ದು, ಅವರನ್ನು ಕೆರ್ಮಾನ್ಶು ವೈದ್ಯಕೀಯ ಕಾಲೇಜಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ನವೆಂಬರ್‌ನಲ್ಲಿಯೂ ಇರಾನಿನಲ್ಲಿ ಭೂಕಂಪ ಸಂಭವಿಸಿದ್ದು 530 ಜನ ಪ್ರಾಣ ಕಳೆದುಕೊಂಡು ಸಾವಿರಾರು ಜನ ಗಾಯಾಗೊಂಡಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close