About Us Advertise with us Be a Reporter E-Paper

ಗುರು

ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ

* ಹನುಮಂತ.ಮ.ದೇಶಕುಲಕರ್ಣಿ

ಸಂಕ್ರಾಂತಿ ಹಬ್ಬ ದೇಶ ವಿದೇಶಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಆಚರಿಸುವ ಒಂದು ಸುಗ್ಗಿ ಹಬ್ಬ. ಆಂಧ್ರ, ತಮಿಳು ನಾಡುಗಳಲ್ಲಿ ಸಂಕ್ರಾಂತಿ, ಕನು, ಭೋಗಿ ಎಂದು ಆಚರಿಸಲ್ಪಡುತ್ತದೆ. ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವ ಕಾಲವನ್ನು ಸಂಕ್ರಮಣ ಅಥವಾ ಸಂಕ್ರಾಂತಿ ಎಂದು ಜ್ಯೋತಿಷ್ಯಾಧಾರದ ಮೇಲೆ ಪರಿಗಣಿಸಲಾಗುವುದು.

ಸಂಕ್ರಾಂತಿಯು ಒಂದು ವಿಧದಲ್ಲಿ ಸೂರ್ಯನ ಆರಾಧನೆಯಾಗಿದ್ದು, ಉತ್ತರಾಯಣ ದಕ್ಷಿಣಾಯಣಗಳ ಪ್ರಾರಂಭದ ದಿನವಾದ್ದರಿಂದ ಹೆಚ್ಚಿನ ಮಾಹತ್ವವನ್ನು ಪಡೆದಿದೆ. ಸಾಮಾನ್ಯವಾಗಿ ಸುಗ್ಗಿಯ ಸಂದರ್ಭದಲ್ಲಿ ಸಂಕ್ರಾಂತಿ ಹಬ್ಬವು ಭಾರತೀಯ ಕಾಲಮಾನ ಪುಷ್ಯಮಾಸದಲ್ಲಿ ಬರುವುದು. ಉತ್ತರಾಯಣದ ಪುಣ್ಯಕಾಲವೆಂದೂ (ದೇವತೆಗಳ ಕಾಲವೆಂದೂ) ಸಹ ಕರೆಯಲಾಗುತ್ತದೆ.

ಮಕರ ಸಂಕ್ರಾಂತಿಯ ದಿನದಿಂದ ದೇವತೆಗಳಿಗೆ ಹಗಲು ಮತ್ತು ರಾಕ್ಷಸರಿಗೆ ರಾತ್ರಿ ಆಗುವುದೆಂದು ನಮ್ಮ ಪುರಾಣಗಳು ಹೇಳುತ್ತವೆ. ಆದ್ದರಿಂದಲೇ ಹಿರಿಯರು ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡು ಏಕೆಂದರೆ ದೇವತೆಗಳು ಸದಾ ಜಾಗೃತರಿರುತ್ತಾರೆ ಅಂತ ಹೇಳುತ್ತಾರೆ. ಸಂಕ್ರಾಂತಿ ಹಬ್ಬದ ಹಿಂದಿನ ದಿನವೇ ಭೋಗಿ ಹಬ್ಬ. ಅಂದು ಹಳೆಯದನ್ನು ತೊರೆದು ಹೊಸದನ್ನು ಪಡೆದು ಸಂತೋಷ ಸಡಗರ. ಮನೆಯನ್ನು ಶುದ್ಧಿಗೊಳಿಸುವುದು, ಮನೆ ಮಂದಿಯೆಲ್ಲಾ ಎಣ್ಣೆ ಸ್ನಾನ ಮಾಡಿ ನೂತನ ವಸ್ತ್ರಗಳನ್ನು ಧರಿಸುವುದು, ಮೂರನೆಯ ದಿನ ಹೊಸ ಫಸಲನ್ನು ಉಂಡು ಸಂತೋಷಪಡಲು ಎಲ್ಲಾ ಸನ್ನದ್ಧತೆ ನಡೆಸುತ್ತಾರೆ. ಗ್ರಾಮೀಣ ಭಾಗದಲ್ಲಿ ರೈತರು ತಾವು ಬೆಳೆದ ವರ್ಷದ ಮೊದಲ ಬೆಳೆಯನ್ನು ದೇವರಿಗೆ ಅರ್ಪಿಸಿ ತದನಂತರ ಮುಂದಿನ ದಿನಗಳಲ್ಲಿ ತಮಗೆ ಒಳ್ಳೆ ಬೆಳೆ ಬರಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತಾರೆ.

ಈ ಹಬ್ಬದ ಸಂದರ್ಭದಲ್ಲಿ ಭಕ್ತರು ಪುಣ್ಯ ನದಿಗಳೆಂದು ಹೆಸರುವಾಸಿಯಾದ ಗಂಗಾ, ಕಾವೇರಿ ಸ್ನಾನ ಮಾಡುವುದು ಉಂಟು. ಶಾಸ್ತ್ರದೃಷ್ಟಿಯಿಂದ ಈ ಹಬ್ಬದಂದು ಕಪ್ಪು ಎಳ್ಳಿನಿಂದ ಸ್ನಾನ ಮಾಡಿ ಬ್ರಾಹ್ಮಣರಿಗೆ ಎಳ್ಳುದಾನವನ್ನು ಮಾಡುತ್ತಾರೆ. ಸಂಜೆಯ ಹೊತ್ತು ದೇವಸ್ಥಾನಕ್ಕೆ ತೆರೆಳಿ ಎಳ್ಳಿನ ದೀಪ ಹಚ್ಚಬೇಕು. ಈ ದಿನ ಮಾಡಿದ ದಾನದಿಂದ ಸೂರ್ಯನು ಆಜನ್ಮ ಪರ್ಯಂತ ಅನುಗ್ರಹಿಸುತ್ತಾನೆಂಬ ನಂಬಿಕೆಯು ಇದೆ. ಅಲಹಾಬಾದಿನಲ್ಲಿ ಈ ಸಂದರ್ಭದಲ್ಲಿ ಕುಂಭ ಮೇಳ ನಡೆಯುವುದನ್ನು ಕಾಣಬಹುದು.

Tags

Related Articles

Leave a Reply

Your email address will not be published. Required fields are marked *

Language
Close