About Us Advertise with us Be a Reporter E-Paper

Breaking Newsದೇಶಪ್ರಚಲಿತ

ಭಾರತಕ್ಕೆ ಚಳ್ಳೆಹಣ್ಣು ತಿನ್ನಿಸಿ 28 ಮಂದಿ ಆರ್ಥಿಕ ಅಪರಾಧಿಗಳು ವಿದೇಶದಲ್ಲಿದ್ದಾರೆ!

ದೆಹಲಿ: 2015ರಿಂದ ಸುಮಾರು 28 ಆರ್ಥಿಕ ಅಪರಾಧಿಗಳು ವಿದೇಶಗಳಿಗೆ ಪರಾರಿಯಾಗಿ ನೆಲೆಸಿದ್ದಾರೆ. ಮತ್ತೆ ಮತ್ತೆ ಭಾರತಕ್ಕೆ ಕರೆತರಲು ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಕಾನೂನು ಪ್ರಯತ್ನ ನಡೆಸುತ್ತಲೇ ಇವೆ.

ಇತ್ತೀಚೆಗೆ ಲೋಕಸಭೆಯಲ್ಲಿ ಪ್ರೊ. ಕೆ.ವಿ ಥಾಮಸ್ ಅವರ ಪ್ರಶ್ನೆಗೆ, ವಿದೇಶಾಂಗ ಸಚಿವ ವಿ.ಕೆ ಸಿಂಗ್, ‘ದೇಶ ಬಿಟ್ಟಿರುವ ಆರ್ಥಿಕ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಲು ಲಾಕ್ ಔಟ್ ಸರ್ಕ್ಯುಲರ್, ರೆಡ್ ಕಾರ್ಡ್ ನೋಟಿಸ್ ಹಾಗೂ ಹಸ್ತಾಂತರದ ಮನವಿಗಳನ್ನು ಮಾಡಲಾಗುತ್ತಿದೆ’ ಎಂದು ತಿಳಿಸಿದ್ದರು.

ಸಿಬಿಐ 23 ಆರ್ಥಿಕ ಅಪರಾಧಿಗಳ ವಿರುದ್ಧ ತನಿಖೆ ನಡೆಸುತ್ತಿದ್ದರೆ, ನಿರ್ದೇಶನಾಲಯ 13 ಪ್ರಕರಣಗಳ ವಿಚಾರಣೆ ನಡೆಸುತ್ತಿದೆ. ಇದರಲ್ಲಿ ಎಂಟು ಮಂದಿ ಉದ್ದೇಶಿತ ಸುಸ್ಥಿದಾರ ಹಾಗೂ ಆರ್ಥಿಕ ಅಪರಾಧಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ವಿಜಯ್ ಮಲ್ಯ, ಮೆಹುಲ್ ಚೋಕ್ಸಿ, ನೀರವ್ ಮೋದಿ, ಜತಿನ್ ಮೆಹ್ತಾ, ಆಶೀಶ್ ಜೊಬನ್ಪುತ್ರಾ, ಚೇತನ್ ಜಯಂತಿಲಾಲ್, ನಿತಿನ್ ಜಯಂತಿಲಾಲ್ ಮತ್ತು ದೀಪ್ತಿಬೇನ್ ಚೇತನ್ ಕುಮಾರ್ ಎರಡೂ ಪಟ್ಟಿಯಲ್ಲಿದ್ದಾರೆ.

2018ರ ಮಾರ್ಚ್ ವೇಳೆಗೆ ಭಾರತ 48 ರಾಷ್ಟ್ರಗಳ ಜತೆ ಹಸ್ತಾಂತರ ಒಪ್ಪಂದಕ್ಕೆ ಸಹಿ ಹಾಕಿದ್ದು, ಆ ಪೈಕಿ, ಅಮೆರಿಕ, ಫ್ರಾನ್‌ಸ್, ಜರ್ಮನಿ, ಬ್ರಿಟನ್, ಹಾಂಕಾಂಗ್ ಸೇರಿವೆ. ಇನ್ನು ಕ್ರೊವೇಷಿಯಾ, ಇಟಲಿ ಮತ್ತು ಸ್ವೀಡನ್ ಜತೆಗೆ ಹೆಚ್ಚುವರಿಯಾಗಿಯೂ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ಇವರೇ 28 ಆರ್ಥಿಕ ಅಪರಾಧಿಗಳು

ಪುಷ್ಪೇಶ್ ಬೈದ್, ಆಶಿಶ್ ಜೊಬಂಪುತ್ರ, ವಿಜಯ್ ಮಲ್ಯ, ಸನ್ನಿ ಕಲ್ರಾ, ಸಂಜಯ್ ಕಲ್ರಾ, ಆರ್ತಿ ಕಲ್ರಾ, ಸುಧೀರ್ ಕುಮಾರ್ ಕಲ್ರಾ, ವರ್ಷಾ ಕಲ್ರಾ, ಜತಿನ್ ಮೆಹ್ತಾ, ಉಮೇಶ್ ಪರೇಖ್, ಕಮಲೇಶ್ ಪರೇಖ್, ನಿಲೇಶ್ ಪರೇಖ್, ಏಕಲವ್ಯ ಗರ್ಗ್, ಮಿತ್ತಲ್, ಚೇತನ್ ಜಯಂತಿಲಾಲ್ ನಿತಿನ್ ಜಯಂತಿಲಾಲ್, ದೀಪ್ತಿಬೆನ್ ಚೇತನ್ ಕುಮಾರ್, ನೀರವ್ ಮೋದಿ, ನೀಶಲ್ ಮೋದಿ, ಮೆಹುಲ್ ಚೋಕ್ಸಿ, ಸಭ್ಯ ಸೇಠ್, ರಾಜೀವ್ ಗೋಯೆಲ್, ಅಲಕಾ ಗೋಯೆಲ್, ಲಲಿತ್ ಮೋದಿ, ರಿತೇಶ್ ಜೈನ್, ಹಿತೇಶ್ ನರೇಂದ್ರ ಭಾಯ್ ಪಟೇಲ್, ಪ್ರೀತಿ ಆಶಿಶ್ ಜೊಬನ್ಪುತ್ರಾ

Tags

Related Articles

Leave a Reply

Your email address will not be published. Required fields are marked *

Language
Close