About Us Advertise with us Be a Reporter E-Paper

Breaking Newsದೇಶಪ್ರಚಲಿತ

ಏರ್‌ಸೆಲ್-ಮಾಕ್ಸಿಸ್‌ ಪ್ರಕರಣ: ಚಿದುಗೆ ಮತ್ತೆ ಸಂಕಷ್ಟ..?

ದೆಹಲಿ: ಏರ್‌ಸೆಲ್-ಮಾಕ್ಸಿಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಹಣಕಾಸು ಸಚಿವ, ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ಚಿದಂಬರಂ ಅವರನ್ನು ಶುಕ್ರವಾರ ಜಾರಿ ನಿರ್ದೇಶನಾಲಯ ಮತ್ತೆ ಪ್ರಶ್ನಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸದಂತೆ ದೆಹಲಿ ಹೈಕೋರ್ಟ್‌ ಚಿದಂಬರಂ ಮತ್ತು ಕಾರ್ತಿ ಚಿದಂಬರಂ ಅವರನ್ನು ಬಂಧಿಸಿದಂತೆ ಜಾರಿ ನಿರ್ದೇಶನಾಲಯಕ್ಕೆ ಸೂಚಿಸಿತ್ತು. ಏರ್‌ಸೆಲ್‌-ಮ್ಯಾಕ್ಸಿಸ್‌, ಐಎನ್‌ಎಕ್ಸ್‌ ಮೀಡಿಯಾ ಹಗರಣ ನಡೆದಿದೆ ಎಂದು  ಸಿಬಿಐ ಚಿದಂಬರಂ, ಕಾರ್ತಿ ಚಿದಂಬರಂ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ.

ಚಿದಂಬರಂ ಅವರು 3,500 ಕೋಟಿ ಮೊತ್ತ ಏರ್ ಸೆಲ್-ಮ್ಯಾಕ್ಸಿಸ್ ಮತ್ತು 305 ಕೋಟಿ ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಬಂಧನ ಭೀತಿ ಎದುರಿಸಿದ್ದರು. ಆಗ ದೆಹಲಿಯ ಪಟಿಯಾಲ ಕೋರ್ಟ್ ಸೆ. 28ರ ವರೆಗೂ ಬಂಧನಕ್ಕೆ ಮಧ್ಯಂತರ ತಡೆ ನೀಡಿತ್ತು. ನಂತರ ಅದನ್ನು ಅಕ್ಟೋಬರ್‌ 8ರ ವರೆಗೆ ವಿಸ್ತರಿಸಿತ್ತು.
ಅನಾರೋಗ್ಯದ ಕಾರಣ ಕೋರ್ಟಿಗೆ ವಕೀಲರು ಬರಲಾಗಿಲ್ಲ ಎಂದು ವಿನಂತಿಸಿಕೊಂಡ ಕಾರಣ ವಿಶೇಷ ಸಿಬಿಐ ನ್ಯಾಯಾಧೀಶ ಒ ಪಿ ಸೈನಿ ಅವರು ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್‌ 8ಕ್ಕೆ ನಿಗದಿಪಡಿಸಿದ್ದರು.

ಕಳೆದ ಜು.19ರಂದು ಸಿಬಿಐ ದಾಖಲಿಸಿದ್ದ ಚಾರ್ಜ್‌ ಶೀಟಿನಲ್ಲಿ ಚಿದಂಬರಂ ಮತ್ತು ಅವರ ಪುತ್ರ ಕಾರ್ತಿಯನ್ನು ಮುಖ್ಯ ಆರೋಪಿಗಳನ್ನಾಗಿ ಹೆಸರಿಸಲಾಗಿತ್ತು. ಚಿದಂಬರಂ ವಿರುದ್ಧ ಏರ್ ಸೆಲ್-ಮ್ಯಾಕ್ಸಿಸ್ ಸಂಬಂಧಿಸಿದಂತೆ 2011ರಲ್ಲಿ ಸಿಬಿಐ ಮತ್ತು 2012ರಲ್ಲಿ ಇಡಿ ಅಕ್ರಮ ಹಣ ವರ್ಗಾವಣೆ ಪ್ರಕರಣಗಳನ್ನು ದಾಖಲಿಸಿತ್ತು.

Tags

Related Articles

Leave a Reply

Your email address will not be published. Required fields are marked *

Language
Close