ಇತಿಮಿತಿ ಅರಿಯಲಿ

Posted In : ಸಂಪಾದಕೀಯ-1

ತಾವು ನಿರ್ವಹಿಸುತ್ತಿರುವ ಲೋಕೋಪಯೋಗಿ ಸೇರಿದಂತೆ ಅನೇಕ ಇಲಾಖೆಗಳ ವರ್ಗಾವಣೆಯಲ್ಲಿ ಸಚಿವ ಎಚ್.ಡಿ.ರೇವಣ್ಣ ಹಸ್ತಕ್ಷೇಪ ಮಾಡುತ್ತಿರುವುದು, ನಾನಾ ಇಲಾಖೆಗಳ ಸಭೆಗೆ ನುಗ್ಗುತ್ತಿರುವುದು ಒಂದೆಡೆ ಮೈತ್ರಿಕೂಟ ಸರಕಾರದ ಅಂಗವಾಗಿರುವ ಕಾಂಗ್ರೆಸ್ ಮುಖಂಡರಲ್ಲಿ ಆಕ್ರೋಶ ಮೂಡಿಸಿದ್ದರೆ, ಇನ್ನೊಂದೆಡೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮುಜುಗರವನ್ನೂ ತಂದಿದೆ. ಸಂಪುಟ ರಚನೆ, ವಿಸ್ತರಣೆ, ಖಾತೆ ಹಂಚಿಕೆ ಹಿನ್ನೆಲೆಯ ಬಂಡಾಯವೇ ಇನ್ನೂ ಶಮನವಾಗದ ಸೂಕ್ಷ್ಮ ಸಂದರ್ಭದಲ್ಲಿ ರೇವಣ್ಣ ಅವರ ಈ ಅತಿರೇಕದ ವರ್ತನೆ ಹೀಗೆಯೇ ಮುಂದುವರಿದರೆ ಮೈತ್ರಿ ಭವಿಷ್ಯಕ್ಕೆ ಮುಳುವಾಗುವ ಸಾಧ್ಯತೆಗಳಿವೆ. ಈಗಾಗಲೇ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಮುಖ್ಯಮಂತ್ರಿ ಅವರಿಗೆ ಈ ಬಗ್ಗೆ ಸೂಚ್ಯವಾಗಿ ತಿಳಿಸಿದ್ದರೆ, ಸಚಿವ ಡಿ.ಕೆ.ಶಿವಕುಮಾರ್ ಅವರು ಕುಮಾರಸ್ವಾಮಿ ಅವರ ಜತೆ ವಾಗ್ವಾದವನ್ನೂ ನಡೆಸಿದ್ದಾರೆ.

ಇನ್ನು ಮುಂದೆ ಹೀಗಾಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸುವುದಾಗಿ ಕುಮಾರಸ್ವಾಮಿ ಅವರು ವಾಗ್ದಾನ ನೀಡಿ ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ನಿಭಾಯಿಸಿದ್ದಾರೆ. ಈ ಮೊದಲು ತಮ್ಮ ಕಾರ್ಯ ಚಟುವಟಿಕೆ ಮೇಲೂ ಪ್ರಭಾವ ಬೀರಲೆತ್ನಿಸಿದ ರೇವಣ್ಣ ಅವರ ಬಗ್ಗೆ ಕುಮಾರಸ್ವಾಮಿ ಬೇಸರಗೊಂಡಿದ್ದರು. ಅವರೇನೋ ಎಂದು ಒಂದು ಹಂತಕ್ಕೆ ಸಹಿಸಿಕೊಳ್ಳಬಹುದು. ಆದರೆ ಕಾಂಗ್ರೆಸ್ ಮಂತ್ರಿಗಳಿಗೆ ಹಾಗೂ ಮುಖಂಡರಿಗೆ ಈ ದರ್ದು ಇರುವುದಿಲ್ಲ. ಬಹಿರಂಗ ಕಾಳಗಕ್ಕೆ ಇಳಿಯಬಹುದು, ಇಲ್ಲವೇ ಮೈತ್ರಿ ಸರಕಾರದ ಬುಡಕ್ಕೇ ಕೊಡಲಿ ಹಾಕಬಹುದು. ರೇವಣ್ಣ ಹೊಸ ಶಾಸಕರೂ ಅಲ್ಲ, ಹೊಸ ಮಂತ್ರಿಗಳೂ ಅಲ್ಲ. ಸಾಕಷ್ಟು ಅನುಭವ ಇರುವವರು. ಅವರಲ್ಲಿ ಕೆಲಸ ಮಾಡುವ ಉತ್ಸಾಹ ಇರಬೇಕು ನಿಜ. ಹಾಗೆಂದು ಸಿಕ್ಕಸಿಕ್ಕ ಎಲೆಗೆ ಕೈ ಹಾಕಿದರೆ ಎಂಜಲಾಗುತ್ತದೆ. ಮೈತ್ರಿ ಸರಕಾರದ ಹಿತದೃಷ್ಟಿಯಿಂದ ರೇವಣ್ಣ ತಮ್ಮ ಇತಿಮಿತಿ ನಡೆಯುವುದು ಒಳಿತು.

 

Leave a Reply

Your email address will not be published. Required fields are marked *

15 + three =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top