ಕಾಶ್ಮೀರ ಕುರಿತ ವಿಶ್ವಸಂಸ್ಥೆಯ ವರದಿ ಖಂಡನೀಯ

Posted In : ಸಂಪಾದಕೀಯ-1

ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಹನನವಾಗುತ್ತಿದೆ ಎಂಬ ವಿಶ್ವಸಂಸ್ಥೆಯ ವರದಿ ವಾಸ್ತವಾಂಶಕ್ಕೆ ದೂರ ಹಾಗೂ ಕಪೋಲಕಲ್ಪಿತ ಎಂದು ಮೇಲ್ನೋಟಕ್ಕೇ ಹೇಳಬಹುದಾಗಿದೆ. ಅಸಲು ಪರಿಸ್ಥಿತಿ ಏನೆಂಬುದನ್ನು ಅವಲೋಕಿಸದೇ ಅಧಿಕಾರಿಗಳು ನೀಡುವ ಅಸಂಬದ್ಧ ಮಾಹಿತಿಯನ್ನಿಟ್ಟುಕೊಂಡು ವರದಿ ತಯಾರಿಸಿರಬೇಕು ಸಂಶಯ ಮೂಡುವಂತಿದೆ. ವಸ್ತುಸ್ಥಿತಿಗೆ ವಿರುದ್ಧವಾದ ವರದಿ ಇದಾಗಿದ್ದು ಸಹಜವಾಗಿಯೇ ಭಾರತವು ತನ್ನ ಅಸಮಾಧಾನವನ್ನು ವಿಶ್ವಸಂಸ್ಥೆಗೆ ಮನವರಿಕೆ ಮಾಡಿಕೊಟ್ಟಿದೆ. ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ತೀವ್ರ ಪ್ರಮಾಣದಲ್ಲಿದ್ದು ಆ ಕುರಿತು ಅಂತಾರಾಷ್ಟ್ರೀಯ ತನಿಖೆ ಆಗಬೇಕೆಂದು ಹೇಳುವ ಈ ವರದಿ ಒಂದು ರೀತಿ ಕುಚೋದ್ಯದ್ದು ಎಂದರೆ ತಪ್ಪಲ್ಲ. ಅಷ್ಟಕ್ಕೂ ಈ ವರದಿಯ ಉದ್ದೇಶವಾದರೂ ಏನು ಎಂಬುದೇ ತಿಳಿಯದಾಗಿದೆ.

ಪಾಕಿಸ್ತಾನ ಪ್ರೇರೇಪಿತ ಹಿಂಸಾವಾದವನ್ನು ದಮನ ಮಾಡಲು ಭಾರತ ಇನ್ನಿಲ್ಲದಂತೆ ಶ್ರಮಿಸುತ್ತಿರುವಾಗ ಇಂತಹ ಕುತ್ಸಿತ ಆಸ್ಪದವಿಲ್ಲ. ತನ್ನ ನೆಲದ ಸಮಗ್ರತೆ ಕಾಯ್ದುಕೊಳ್ಳುವುದು ಭಾರತದ ಆದ್ಯ ಕರ್ತವ್ಯ. ಅದನ್ನು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಬಣ್ಣಿಸುವುದಾದರೆ ಯಾವ ದೇಶವೂ ತನ್ನ ಸುರಕ್ಷತೆಗೆ ಭದ್ರತಾ ಪಡೆಗಳನ್ನು ನಿಯೋಜಿಸಬಾರದು ಎಂದಂತಾಗುತ್ತದೆ. ಇದು ಯಾರೂ ಒಪ್ಪುವ ಮಾತಲ್ಲ. ಕಾಶ್ಮೀರದಲ್ಲಿ ಸೇನೆಗೆ ವಿಶೇಷ ಹಕ್ಕುಗಳನ್ನು ನೀಡಲಾಗಿದೆ. ಇದು ಕಾಲಕಾಲಕ್ಕೆ ಮರು ಪರಿಶೀಲನೆಯೂ ಆಗುತ್ತಿದೆ. ಹಗಲಿರುಳೂ ಭಯೋತ್ಪಾದಕರ ಜತೆ ಸೆಣಸುತ್ತಿರುವ ಯೋಧರಿಗೆ ಕೆಲವೊಂದು ಹಕ್ಕುಗಳನ್ನು ನೀಡುವುದು ಅತ್ಯಂತ ಸಮಂಜಸ ಕ್ರಮವೇ ಆಗಿದೆ. ಅದರ ವಿವೇಚನೆಯೂ ಭಾರತದ್ದೇ ಆಗಿದೆ. ಇದರಲ್ಲಿ ವಿಶ್ವಸಂಸ್ಥೆಯೂ ಸೇರಿದಂತೆ ಯಾರೂ ಮೂಗು ತೂರಿಸುವ ಅವಶ್ಯಕತೆ ಇಲ್ಲ.

Leave a Reply

Your email address will not be published. Required fields are marked *

9 − three =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top