ಸಹಮತದ ಕೊರತೆ

Posted In : ಸಂಪಾದಕೀಯ-1

ಪೊಲೀಸ್ ಇಲಾಖೆಯಲ್ಲಿ ರಾಜಕೀಯ ಹಸ್ತಕ್ಷೇಪ ಕುರಿತು ಕರ್ನಾಟಕ ಐಪಿಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷ ಹಾಗೂ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಎಡಿಜಿಪಿ) ಆರ್.ಪಿ. ಶರ್ಮಾ ರಾಜ್ಯ ಸರಕಾರಕ್ಕೆ ಪತ್ರ ಬರೆದಿರುವುದು ವಿವಾದ ಸೃಷ್ಟಿಸಿದೆ. ರಾಜಕಾರಣಿಗಳ ಒತ್ತಡದಿಂದಾಗಿ ಪೊಲೀಸರ ನೈತಿಕ ಸ್ಥೈರ್ಯ ಮತ್ತು ವೃತ್ತಿಪರತೆ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ. ಅವರು ಪ್ರಾಮಾಣಿಕವಾಗಿ ಕೆಲಸ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದು ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರಿಗೆ ಶರ್ಮಾ ಪತ್ರದ ಸಾರಾಂಶ. ಶರ್ಮಾ ಆರೋಪದಲ್ಲಿ ಹುರುಳಿಲ್ಲದೆ ಏನಿಲ್ಲ. ಉದ್ಯಮಿ ಪುತ್ರ ವಿದ್ವತ್ ಮೇಲೆ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಗುಂಪಿನ ಹಲ್ಲೆ, ಮೈಸೂರಿನಲ್ಲಿ ಐಪಿಎಸ್ ಅಧಿಕಾರಿ ರಶ್ಮಿ ಮೇಲೆ ರಾಜಕೀಯ ಪ್ರೇರಿತ ಗೂಂಡಾಗಳ ಹಲ್ಲೆ, ತಮ್ಮ ಮೇಲೆ ಹಲ್ಲೆ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದವರ ಮೇಲೆ ಮೈಸೂರು ಡಿಸಿ ಶಿಖಾ ಎಫ್‌ಐಆರ್ ದಾಖಲಿಸಲು ತಿಣುಕಾಡಿದ್ದು ಮತ್ತಿತರ ಪ್ರಕರಣಗಳು ಶರ್ಮಾ ಆರೋಪಕ್ಕೆ ಕೆಲ ನಿದರ್ಶನಗಳು. ಹಲ್ಲೆಗೆ ಒಳಗಾದ ವಿದ್ವತ್ ವಿರುದ್ಧವೇ ಕೇಸು ಪೊಲೀಸರು ಮುಂದಾಗಿದ್ದರ ಹಿಂದೆ ಕೆಲಸ ಮಾಡಿದ್ದ ರಾಜಕೀಯ ಒತ್ತಡವೇ.

ಅದೇ ರೀತಿ ವಿದ್ವತ್ ಆಸ್ಪತ್ರೆಯಿಂದ ಬಿಡುಗಡೆ ಕುರಿತ ವೈದ್ಯ ವರದಿ ಅವರ ಪೋಷಕರಿಗಿಂತ ಮೊದಲು ಆರೋಪಿ ಪರ ವಕೀಲರ ಕೈಸೇರುವಲ್ಲಿ ಕೆಲಸ ಮಾಡಿರುವುದು ಇದೇ ರಾಜಕೀಯ ಒತ್ತಡವೇ. ಈ ಬಗ್ಗೆ ನ್ಯಾಯಾಲಯವೇ ಆರೋಪಿ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡಿದೆ. ಹೀಗಾಗಿ ಶರ್ಮಾ ಆರೋಪದ ಹಿಂದೆ ಸತ್ಯ ಇರುವುದನ್ನು ತಳ್ಳಿ ಹಾಕುವಂತಿಲ್ಲ. ಆದರೆ ಅದೇ ಶರ್ಮಾ ಸರಕಾರಕ್ಕೆ ಪತ್ರ ಬರೆಯಲು ಅಧಿಕಾರಿಗಳ ಸಂಘದ ಲೆಟರ್‌ಹೆಡ್ ಅನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಬಂದಿದೆ. ಈ ರೀತಿ ಆರೋಪ ಮಾಡಿರುವವರು ಬೇರೆ ಯಾರೂ ಅಲ್ಲ. ಶರ್ಮಾ ಅಧ್ಯಕ್ಷರಾಗಿರುವ ಸಂಘದ ಇತರೆ ಪದಾಧಿಕಾರಿಗಳಿಂದ. ಅಂದರೆ ಶರ್ಮಾ ಮಾಡಿರುವ ವಿಚಾರದಲ್ಲಿ ಐಪಿಎಸ್ ಅಧಿಕಾರಿಗಳ ವಲಯದಲ್ಲೇ ಸಹಮತ ಇಲ್ಲ ಎಂದಂತಾಯಿತು. ಇದು ರಾಜಕೀಯ ಹಸ್ತಕ್ಷೇಪಕ್ಕಿಂತಲೂ ಮಿಗಿಲಾಗಿ ಪರಿಗಣಿಸಬೇಕಾದ ಗಂಭೀರ ಅಂಶ. ವ್ಯವಸ್ಥೆಯಲ್ಲಿನ ಲೋಪಕ್ಕೆ ಪರಿಹಾರ ಕಂಡು ಹಿಡಿಯುವಲ್ಲಿ ಸಂಘಟಿತ ಪ್ರಯತ್ನ ಮುಖ್ಯ. ಆದರೆ ಐಪಿಎಸ್ ಅಧಿಕಾರಿಗಳ ಈ ಕೊರತೆ ಶರ್ಮಾ ಆರೋಪದ ಹಿಂದೆಯೂ ರಾಜಕೀಯ ಕಾರಣಗಳನ್ನು ಹುಡುಕುವಂತೆ ಮಾಡಿದೆ. ಅದೂ ಚುನಾವಣೆ ಸಮೀಪಿಸಿರುವ ಈ ಸಂದರ್ಭದಲ್ಲಿ. ಇದು ಕೂಡ ವಿಪರ್ಯಾಸವೇ!

 

Leave a Reply

Your email address will not be published. Required fields are marked *

eleven − 2 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top