ಪಾಕಿಸ್ತಾನದ ಉದ್ಧಟತನ

Posted In : ಸಂಪಾದಕೀಯ-1

ಬೈಸಾಖಿಯ ಪವಿತ್ರ ಸಂದರ್ಭದಲ್ಲಿ ತನ್ನ ಗುರುದ್ವಾರಗಳಿಗೆ ಯಾತ್ರೆ ಕೈಗೊಂಡಿದ್ದ ಭಾರತೀಯರಿಗೆ ದೂತಾವಾಸದ ಕಚೇರಿಯ ಅಧಿಕಾರಿಗಳನ್ನು ಭೇಟಿ ಮಾಡಲು ಅವಕಾಶ ನೀಡದೆ ಪಾಕಿಸ್ತಾನವು ಮತ್ತೆ ತನ್ನ ಉದ್ಧಟತನ ಪ್ರದರ್ಶಿಸಿದೆ. ಸುಮಾರು 1800 ಮಂದಿ ಸಿಖ್ ಯಾತ್ರಾರ್ಥಿಗಳು ಅಲ್ಲಿನ ಗುರುದ್ವಾರಗಳಿಗೆ ಭೇಟಿ ನೀಡಿದ್ದರು. ಇದೇ ವೇಳೆ ಅಲ್ಲಿನ ದೂತಾವಾಸ ಕಚೇರಿಯ ಅಧಿಕಾರಿಗಳನ್ನು ಭೇಟಿ ಮಾಡುವ ಇರಾದೆ ವ್ಯಕ್ತಪಡಿಸಿದರು. ಆದರೆ ಅದಕ್ಕೆ ಪಾಕಿಸ್ತಾನದ ವಿದೇಶಾಂಗ ಅಧಿಕಾರಿಗಳು ನಿರಾಕರಿಸಿದ್ದರು. ಕಡೆಗೆ ಭಾರತೀಯ ದೂತಾವಾಸದ ಅಧಿಕಾರಿಯೇ ಗುರುದ್ವಾರ ಬಳಿ ಹೋಗಲು ಯತ್ನಿಸಿದಾಗ ಅವರನ್ನೂ ತಡೆಯುವ ಮೂಲಕ ಪಾಕಿಸ್ತಾನ ತನ್ನ ನೀಚ ಬುದ್ಧಿ ತೋರಿಸಿದೆ.

ಉಭಯ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧ ಹಳಸಿರುವುದು ಹೊಸ ವಿಷಯವೇನಲ್ಲ. ಭಾರತೀಯ ದೂತಾವಾಸ ಕಚೇರಿಯ ಅಧಿಕಾರಿಗಳ ಓಡಾಟಕ್ಕೂ ಪಾಕಿಸ್ತಾನ ನಿರ್ಬಂಧ ವಿಧಿಸಿದೆ. ಅದೇ ರೀತಿ ಭಾರತದಿಂದಲೂ ತನ್ನ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಂಡಿದೆ. ವಿನಾಕಾರಣ ಹೀಗೆಲ್ಲ ನಡೆದುಕೊಳ್ಳುವುದು, ವಿಷ ಕಾರುವುದು ಪಾಕಿಸ್ತಾನಕ್ಕೆ ಹೊಸದೇನಲ್ಲ. ಈ ಹಿಂದೆಯೂ ಅನೇಕ ಸಂದರ್ಭಗಳಲ್ಲಿ ಅದು ರಾಜತಾಂತ್ರಿಕ ಸಂಬಂಧಗಳ ಸೂಕ್ಷ್ಮ ನೆಲೆಯನ್ನು ಅರ್ಥ ಮಾಡಿಕೊಳ್ಳದೆ ಬಾಲಿಶವಾಗಿ ನಡೆದುಕೊಂಡಿದ್ದಿದೆ. ಆದರೆ ತನ್ನದೇ ಯೋಜನೆಯ ಫಲವಾಗಿ ಅತಿಥಿಗಳಾಗಿ ಬಂದವರನ್ನು ಈ ರೀತಿ ನಡೆಸಿಕೊಂಡಿರುವುದು ಬಹುಶಃ ಪಾಕಿಸ್ತಾನದ ನೈತಿಕ ಅಧಃಪತನ ಎತ್ತಿ ತೋರುತ್ತಿದೆ. ಕನಿಷ್ಠ ಭಾರತದಿಂದ ಬಂದ ಯಾತ್ರಾರ್ಥಿಗಳನ್ನು ಎದಿರುಗೊಳ್ಳಲು ದೂತಾವಾಸದ ಅಧಿಕಾರಿಗಳಿಗೆ ಅನುಮತಿ ನಿರಾಕರಿಸಿರುವುದು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಎಷ್ಟರಮಟ್ಟಿಗೆ ಹದಗೆಟ್ಟಿದೆ ಎಂಬುದನ್ನು ತಿಳಿಸುತ್ತದೆ.

ಈ ವಿಚಾರವನ್ನು ಭಾರತ ಪರಿಗಣಿಸಬೇಕು. ಇಷ್ಟೊಂದು ನಡೆದುಕೊಳ್ಳುವ ದೇಶದ ಜೊತೆ ರಾಜತಾಂತ್ರಿಕ ಸಂಬಂಧ ಉಳಿಸಿಕೊಳ್ಳಬೇಕೇ? ಅಂತಹ ದರ್ದು ಇದೆಯೇ ಎಂಬುದನ್ನು ಕೇಂದ್ರ ಪರಾಮರ್ಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ದೇಶಗಳ ನಡುವಿನ ರಾಜತಾಂತ್ರಿಕ ನಡಾವಳಿಯನ್ನು ವಿಯೆನ್ನಾ ಒಪ್ಪಂದದಲ್ಲಿ ಹೇಳಲಾಗಿದೆ. ಪಾಕಿಸ್ತಾನದ ಕ್ರಮ ಈ ಒಪ್ಪಂದದ ಕಟ್ಟುಪಾಡುಗಳನ್ನೂ ಉಲ್ಲಂಘಿಸಿದೆ. ಆದರೆ ಭಾರತ ದ್ವೇಷದಲ್ಲಿ ಕುರುಡಾಗಿರುವ ಪಾಕಿಸ್ತಾನಕ್ಕೆ ಇದಾವುದೂ ಕಾಣದಿರುವುದೇ ವಿಪರ್ಯಾಸ.

Leave a Reply

Your email address will not be published. Required fields are marked *

2 × 3 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

 

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

Back To Top