ಉತ್ತರದಾಯಿತ್ವ ಬೇಕು

Posted In : ಸಂಪಾದಕೀಯ-1

ಸಮಾಜದಲ್ಲಿ ಭ್ರಷ್ಟಾಚಾರ ಮಿತಿಮೀರುತ್ತಿದೆ ಎಂಬ ಮಾತನ್ನು ಎಲ್ಲರೂ ಹೇಳುತ್ತಾರೆ. ಆದರೆ, ಭ್ರಷ್ಟಾಚಾರ ತಡೆಗೆ ಕೈಗೊಳ್ಳಬೇಕಾದ ಕ್ರಮಗಳನ್ನು ಮಾತ್ರ ಯಾರೂ ತೆಗೆದುಕೊಳ್ಳಲು ಮುಂದೆ ಬರಲಾರರು. ಲಕ್ಷಾಂತರ ರು. ಸಂಬಳ ಪಡೆಯುವ ಯಾವ ಅಧಿಕಾರಿಯೂ ಭ್ರಷ್ಟಾಚಾರದ ಹಣವನ್ನು ಮುಟ್ಟಲಾರೆ ಎಂದು ಎದೆ ತಟ್ಟಿಕೊಂಡು ಹೇಳಲಾರದಷ್ಟು ಕೊಳಕಾಗಿದೆ ಅಧಿಕಾರಶಾಹಿ ವ್ಯವಸ್ಥೆ. ಸರಕಾರಿ ಕಚೇರಿಯಲ್ಲಿ ಹತ್ತು ಸಾವಿರ ಸಂಬಳ ಪಡೆದು ಗುಮಾಸ್ತರಲ್ಲಿ ಕೆಲವರು ಕೋಟ್ಯಂತರ ರು. ಬೆಲೆಬಾಳುವ ಆಸ್ತಿಗಳ ಒಡೆಯರು. ಅದರಲ್ಲಿ ಬೆರಳೆಣಿಕೆ ಮಂದಿ ಮಾತ್ರ ಲೋಕಾಯುಕ್ತ, ಎಸಿಬಿ ದಾಳಿಗೆ ಸಿಲುಕಿ ಅಕ್ರಮ ಸಂಪತ್ತು ಹೊಂದಿರುವುದು ಬೆಳಕಿಗೆ ಬಂದಿದೆ. ಆದರೆ, ಬೆಳಕಿಗೆ ಬರದಷ್ಟು ಮಂದಿ ಸಾವಿರಾರು ಸಂಖ್ಯೆಯಲ್ಲಿದ್ದಾರೆ.

ಸರಕಾರಿ ವೇತನ ಪಡೆಯುವವರಲ್ಲಿ ನಾವು ಸಾರ್ವಜನಿಕ ಸೇಕರು ಎಂಬ ಭಾವನೆ ಬರದಿದ್ದರೆ ಪ್ರತಿ ಕೆಲಸಕ್ಕೂ ಸರಕಾರಿ ಅಧಿಕಾರಿಗಳನ್ನು ನಂಬಿಕೊಂಡಿರುವ ಬಡ ಸಾರ್ವಜನಿಕನ ಸ್ಥಿತಿ ಏನಾಗಬೇಡ? ಸೇವಾ ಮನೋಭಾವದಲ್ಲಿ ಸಾರ್ವಜನಿಕರ ಕೆಲಸ ಮಾಡಿಕೊಡಬೇಕಾದ ಅಧಿಕಾರಿಗಳ ಲಂಚಗುಳಿತನ ಪತ್ತೆಹಚ್ಚಲು ಲೋಕಾಯುಕ್ತ, ಎಸಿಬಿಯಂತಹ ಸಂಸ್ಥೆಗಳೇ ಬೇಕೆ? ನಾವು ಸಾರ್ವಜನಿಕ ಸೇವಕರು ಎಂಬ ಉತ್ತರದಾಯಿತ್ವ ಅಧಿಕಾರಿಗಳಿಗೆ ಬೇಡವೇ? ಸಾರ್ವಜನಿಕ ಸೇವೆಯನ್ನು ಆಯ್ಕೆ ಮಾಡಿಕೊಂಡಾಗಲೇ ಒಬ್ಬ ಅಧಿಕಾರಿಗೆ ನಾನು ದೇಶದ ನಾಗರಿಕರಿಗೆ ಉತ್ತರದಾಯಿ ಎಂಬ ಭಾವನೆ ಮೊಳಕೆಯೊಡೆಯಬೇಕು. ಅಧಿಕಾರಿಗಳ ಪ್ರತಿ ನಡೆಯು ಸಾರ್ವಜನಿಕರ ಅಪೇಕ್ಷೆಯಂತಿರಬೇಕು. ಅಧಿಕಾರಿಗಳ ಆಡಳಿತ ವೈಖರಿ ಆದರೆ, ಇತ್ತೀಚೆಗೆ ಪಾರದರ್ಶಕ ಆಡಳಿತ ಕೇವಲ ಕಡತಗಳ ಪದವಾಗಿ ಮಾತ್ರ ಉಳಿದುಕೊಂಡಿದೆ. ಸರಕಾರದ ಪಾರದರ್ಶಕ ಆಡಳಿತದ ಘೋಷವಾಕ್ಯವನ್ನು ಧ್ಯೇಯವಾಗಿಸಿಕೊಂಡು ಆಡಳಿತ ನಡೆಸುವ ಅಧಿಕಾರಿಗಳ ಸಂಖ್ಯೆ ಅಧಿಕವಾಗಬೇಕಿದೆ.

ಸಣ್ಣ ಕೆಲಸಕ್ಕೂ ದಿನವಿಡೀ ಅಲೆಸುವ ಮೂಲಕ ಲಂಚಕ್ಕೆ ಬೇಡಿಕೆಯಿಡುವ ಪ್ರವೃತ್ತಿ ಕೊನೆಗಾಣಬೇಕಿದೆ. ಇದಕ್ಕೆ ಮೇಲ್ಮಟ್ಟದ ಅಧಿಕಾರಿಗಳು ಅಡಿಪಾಯ ಹಾಕಿಕೊಡಬೇಕು. ಜತೆಗೆ, ಆಡಳಿತ ವರ್ಗದ ಆಶಯಕ್ಕೆ ತಕ್ಕಂತೆ ರಾಜಕಾಣವೂ ಇರಬೇಕು. ಆಗ ಮಾತ್ರ ಪಾರದರ್ಶಕ ಆಡಳಿತ ವ್ಯವಸ್ಥೆ ಜಾರಿಯಾಗುತ್ತದೆ. ಆದರ್ಶ ಸರಕಾರ ಮತ್ತು ಜನರದ್ದಾಗುತ್ತದೆ. ಅಂತಹ ಸ್ಥಿತಿ ತಲುಪುವತ್ತ ದೇಶ ಹೆಜ್ಜೆ ಹಾಕಬೇಕಿದ್ದು, ಇದನ್ನು ಜನರ ತೆರಿಗೆ ಹಣದಿಂದ ಲಕ್ಷಾಂತರ ರು. ಸಂಬಳ ಪಡೆದು ಐಷಾರಾಮಿ ಜೀವನ ನಡೆಸುವ ಅಧಿಕಾರಿಗಳ ಮನಗಾಣಬೇಕಿದೆ.

Leave a Reply

Your email address will not be published. Required fields are marked *

1 × three =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top