ಮೋದಿ ವಿರುದ್ಧ ಪ್ರಾದೇಶಿಕ ರಂಗ

Posted In : ಸಂಪಾದಕೀಯ-1

ಲೋಕಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಇರುವಂತೆಯೇ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ಮುಂದಿನ ಚುನಾವಣೆಯಲ್ಲಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಪ್ರಾದೇಶಿಕ ಒಕ್ಕೂಟ ರಚನೆ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ಕೋಲ್ಕತಾದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಿ ಕುರಿತು ಮಾತುಕತೆ ನಡೆಸಿದ್ದಾರೆ. ಪ್ರತಿ ಬಾರಿ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಇಂತಹ ಪ್ರಯತ್ನಗಳು ಸರ್ವೇ ಸಾಮಾನ್ಯವಾಗಿದೆ. ಕೇಂದ್ರದಲ್ಲಿ ಆಡಳಿತದಲ್ಲಿರುವ ಪಕ್ಷ ಅಥವಾ ರಂಗದ ಜತೆ ಕೈಜೋಡಿಸಲಾಗದೆ, ಪ್ರತಿಪಕ್ಷದ ಜತೆ ಸೇರಲು ಸಾಧ್ಯವಾಗದೆ ಏಕಾಂಗಿತನ ಅನುಭವಿಸುವ ಪಕ್ಷಗಳು ಒಂದು ವೇದಿಕೆಯಡಿ ಬರುವ ಇಚ್ಛೆ ವ್ಯಕ್ತಪಡಿಸುವುದು ಅಭ್ಯಾಸವಾಗಿದೆ. ಆದರೆ ಚುನಾವಣೆ ಬರುವ ವೇಳೆಗೆ ವೈಯಕ್ತಿಕ ಮತ ಲೆಕ್ಕಾಚಾರಗಳೇ ಕೈ ಮೇಲಾಗಿ ಈ ಪ್ರಯತ್ನ ಕೇವಲ ಫೋಟೊ ಕ್ಲಿಕ್ಕಿಸಿಕೊಳ್ಳುವ ಹಂತದಲ್ಲಿಯೇ ಮುರಿದುಬಿದ್ದಿರುವುದನ್ನು ನೋಡಿದ್ದೇವೆ.

ಚುನಾವಣೆಗೆ ಮುನ್ನ ಲಾಲು, ಮುಲಾಯಂ, ದೇವೇಗೌಡ, ಮಮತಾ, ನಿತೀಶ್ ಯೆಚೂರಿ ಮುಂತಾದ ಮುಖಂಡರು ದಿಲ್ಲಿಯಲ್ಲಿ ಸಭೆ ಮಾಡಿ ತೃತೀಯ ರಂಗದ ಘೋಷಣೆ ಮಾಡಿದ್ದರು. ಆದರೆ ಚುನಾವಣೆಗೂ ಮುನ್ನವೇ ಮುಲಾಯಂ ಈ ರಂಗದಿಂದ ಹೊರ ನಡೆದಿದ್ದರು. ಕಾಂಗ್ರೆಸ್ ಮತ್ತು ಬಿಜೆಪಿ ಜತೆ ವ್ಯವಹಾರ ಮಾಡಲಾಗದ ಪಕ್ಷಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಚುನಾವಣಾ ಸಂದರ್ಭದಲ್ಲಿ ಅವಕಾಶಗಳಿಗೆ ಎಡತಾಕುವುದು ಮಾಮೂಲಾಗಿದೆ. ಇಂತಹ ಪ್ರಯತ್ನಗಳಿಗೆ ಮಾರಕವಾಗಿರುವುದು ಅಂತರ್ಗತ ಗೊಂದಲಗಳು. ಎಡಪಕ್ಷಗಳು ಮಮತಾ ಅವರೊಟ್ಟಿಗೆ ಕೆಲಸ ಅದೇ ರೀತಿ ಬಿಜೆಡಿ ಅಥವಾ ಟಿಆರ್‌ಎಸ್ ಕಾಂಗ್ರೆಸ್ ಪಕ್ಷದ ಜತೆ ಕೈಜೋಡಿಸಲಾರವು. ಈ ಕಾರಣಗಳಿಂದಾಗಿಯೇ ಒಂದು ಪ್ರಬಲ ದ್ರುವವಿಲ್ಲದೇ ತೃತೀಯ ರಂಗ ನಾವಿಕನಿಲ್ಲದ ಹಡಗಿನಂತಾಗಿದೆ. ಈಗ ನಡೆಯುತ್ತಿರುವ ಪ್ರಯತ್ನಗಳ ಹಿಂದಿನ ಉದ್ದೇಶ ಮೋದಿ ಮತ್ತು ಬಿಜೆಪಿ ಹಣಿಯುವುದೇ ಆಗಿದೆ. ಕೆಲವು ಪಕ್ಷಗಳಿಗೆ ಇದು ತಮ್ಮ ಅಸ್ತಿತ್ವದ ಪ್ರಶ್ನೆಯೂ ಆಗಿದೆ. ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯ ಶಕ್ತಿಗೆ ಅವಕಾಶವಿದ್ದರೂ, ಅದನ್ನು ಬಳಸಿಕೊಳ್ಳಬಲ್ಲ ನಾಯಕನ ಕೊರತೆ ಇದೆ. ಈ ಕೊರತೆ ನೀಗುವವರೆಗೆ ಒಂದು ರೀತಿಯ ವ್ಯರ್ಥ ಕಸರತ್ತೇ ಸರಿ

Leave a Reply

Your email address will not be published. Required fields are marked *

fifteen − 11 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

 

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

Back To Top