ಆಧಾರ್: ಸ್ಪಷ್ಟತೆ ಅಗತ್ಯ

Posted In : ಸಂಪಾದಕೀಯ-2

ಗುರುತು ಚೀಟಿ-ಆಧಾರ್- ಕುರಿತಾದ ವಿವಾದ ತಣ್ಣಗಾಗುವ ಯಾವುದೇ ಸೂಚನೆ ಕಾಣುತ್ತಿಲ್ಲ. ಈ ಆಧಾರದ ಮೂಲೋದ್ದೇಶವನ್ನೇ ಪ್ರಶ್ನಿಸಿರುವ ಅರ್ಜಿ ಸುಪ್ರೀಂ ಕೋರ್ಟಿನಲ್ಲಿ ಟಿವಿ ಧಾರಾವಾಹಿಗಳಂತೆ ಕೊನೆಗಾಣದ ವಿಚಾರಣೆ ಎದುರಿಸುತ್ತಿದೆ. ಜನಸಾಮಾನ್ಯರ ಎಲ್ಲ ಆರ್ಧಿಕ ಚಟುವಟಿಕೆಗಳಿಗೂ ಹಾಗೂ ಸರಕಾರದ ಎಲ್ಲ ರೀತಿಯ ಸೌಲಭ್ಯ ವಿತರಣೆಗೂ ಆಧಾರವನ್ನೇ ಮೂಲಾಧಾರ ಮಾಡಿರುವುದರ ಪರ-ವಿರುದ್ಧದ ವಾದ-ವಿವಾದ ನಿರಂತರವಾಗಿ ಸಾಗಿದೆ. ಆಧಾರದ ಮೂಲಕ ಜನರ ಖಾಸಗಿ ವಿವರಗಳು ಬಿಕರಿಯಾಗುತ್ತವೆ ಎಂಬುದು ವಿರೋಧಿಗಳ ಅಂಬೋಣ.

ಸರಕಾರದ ವಾದ ಇದಕ್ಕೆ ಸರಕಾರ ಕೊಡಮಾಡುವ ಆರ್ಥಿಕ ಸವಲತ್ತು (ಸಬ್ಸಿಡಿ ಮುಂತಾದವು) ನೇರವಾಗಿ ಫಲಾನುಭವಿಗಳಿಗೆ ತಲುಪಿಸುವ, ಆ ಮೂಲಕ ದಲ್ಲಾಳಿಗಳ ದೋಚುವಿಕೆ ತಡೆಗಟ್ಟುವ ಉದ್ದೇಶದಿಂದ 10 ವರ್ಷಗಳ ಹಿಂದೆ ಆರಂಭವಾದ ಈ ವಿಶಿಷ್ಟ ಗುರುತು ಚೀಟಿ ಯೋಜನೆಯನ್ನು ಈಗ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಬಲವಾಗಿ ವಿರೋಧಿಸಿತ್ತು. ಆದರೆ 2014ರಲ್ಲಿ ಗದ್ದುಗೆ ಏರಿದ ಬಳಿಕ ಆಧಾರದ ಕುರಿತು ಮೋದಿ ಸರಕಾರದ ನಿಲುವು ಏಕಾಏಕಿ ಬದಲಾಯಿತು. ಪ್ರತಿಪಕ್ಷವಾಗಿದ್ದಾಗ ಅಪಥ್ಯವಾಗಿದ್ದುದು, ಅಧಿಕಾರ ಸಿಕ್ಕ ಮೇಲೆ ಮೃಷ್ಠಾನ್ನವಾಯಿತು. ಖಾತೆ ತೆರೆಯುವದರಿಂದ ಹಿಡಿದು ಮೊಬೈಲ್ ಸಿಮ್ ಖರೀದಿವರೆಗೆ ಜನರ ಎಲ್ಲ ವಾಣಿಜ್ಯಿಕ ಚಟುವಟಿಕೆಗಳಿಗೂ ಸರಕಾರವು ಆಧಾರವನ್ನು ಕಡ್ಡಾಯಗೊಳಿಸಿತು.

ಈ ಮಧ್ಯೆ ಆಧಾರದಲ್ಲಿ ಅಡಕವಾಗಿರುವ ವ್ಯಕ್ತಿಗಳ ಖಾಸಗಿ ಮಾಹಿತಿ ಸುಲಭವಾಗಿ ಮೂರನೇ ವ್ಯಕ್ತಿಯ ಕೈಸೇರುತ್ತಿರುವುದರ ಕುರಿತಾದ ವರದಿಗಳು ಸಾಕಷ್ಟು ಗಲಿಬಿಲಿಗೆ ಕಾರಣವಾಗಿತ್ತು. ಇದರ ಪರಿಣಾಮವಾಗಿಯೇ ವಿವಾದ ಕೋರ್ಟಿನ ಕಟಕಟೆ ಏರಿದ್ದು, ಸರಕಾರ ಹಠಕ್ಕೆ ಬಿದ್ದು ಆಧಾರವನ್ನು ಸಮರ್ಥಿಸಿಕೊಳ್ಳುತ್ತಿದೆ. ಮಾಹಿತಿ ಸೋರಿಕೆ ಆಗದಂತೆ ತಡೆಯಲು 16 ಸಂಖ್ಯೆಗಳ ವರ್ಚುವಲ್ ಐಡಿ ನೀಡುವುದಾಗಿಯೂ ಆದರೆ ಅದಾವುದೂ ವಾಸ್ತವದಲ್ಲಿ ಕಾರ್ಯಗತವಾಗಿಲ್ಲ. ಸಹಜವಾಗಿಯೇ ಇದು ವಿರೋಧಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಇದು ತೀರಾ ಸೂಕ್ಷ್ಮ ವಿಚಾರವಾಗಿದ್ದು ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಸರಕಾರದ ಆದ್ಯ ಕರ್ತವ್ಯವಾಗಿದೆ.

 

 

Leave a Reply

Your email address will not be published. Required fields are marked *

3 + 11 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Thursday, 26.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ಏಕಾದಶಿ, ಗುರುವಾರ, ನಿತ್ಯನಕ್ಷತ್ರ-ಹುಬ್ಬಾ, ಕರಣ-ಬವ.

ರಾಹುಕಾಲಗುಳಿಕಕಾಲಯಮಗಂಡಕಾಲ
1.30-3.00 9.00-10.30 6.00-7.30

Read More

 

Thursday, 26.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ಏಕಾದಶಿ, ಗುರುವಾರ, ನಿತ್ಯನಕ್ಷತ್ರ-ಹುಬ್ಬಾ, ಕರಣ-ಬವ.

ರಾಹುಕಾಲಗುಳಿಕಕಾಲಯಮಗಂಡಕಾಲ
1.30-3.00 9.00-10.30 6.00-7.30

Read More

Back To Top