ಮಾತಿನ ಮೇಲೆ ನಿಗಾ ಇರಲಿ

Posted In : ಸಂಪಾದಕೀಯ-1

ಚುನಾವಣೆ ಕಾಲದಲ್ಲಿ ರಾಜಕಾರಣಿಗಳ ಮಾತಿನ ಭರಾಟೆ ಎಗ್ಗಿಲ್ಲದಂತೆ ಸಾಗುತ್ತದೆ. ಇಡೀ ಸಮಾಜಕ್ಕೆ ತಿಳಿ ಹೇಳುವಂತಹ ಈ ರಾಜಕಾರಣಿಗಳು ತೀರಾ ಅತಿರೇಕಕ್ಕೆ ಹೋಗಿ ನಾಲಗೆಯನ್ನು ಹರಿಯ ಬಿಟ್ಟು ವಿರೋಧಿಗಳ ಖಾಸಗಿ ಜೀವನದ ಬಗ್ಗೆಯೂ ಮಾತನಾಡುತ್ತಾರೆ. ಇದು ಅಸಹ್ಯದ ಹಂತಕ್ಕೆ ಹೋಗಿಬಿಡುತ್ತದೆ. ಕೇಳಿಸಿಕೊಳ್ಳಲೂ ಸಹ್ಯವಾಗದಂಥ ಭಾಷೆಯನ್ನು ಬಳಸುತ್ತಾರೆ. ಅವರ ಕಣ್ಣು ಮುಂದೆ ಇರುವುದು ತಾವು ಮತ್ತು ತಮ್ಮ ಪಕ್ಷ ಗೆಲ್ಲಬೇಕೆಂಬ ಉದ್ದೇಶ ಇರುತ್ತದೆಯೇ ಹೊರತು ತಾವಾಡಿದ ಮಾತಿನಿಂದ ವಿರೋಧಿಗಳಿಗೆ ಎಷ್ಟರ ಮಟ್ಟಿಗೆ ಘಾಸಿಯಾಗುತ್ತದೆ ಎಂಬುದರ ಪರಿವೆಯೇ ಇರುವುದಿಲ್ಲ. ರಾಜಕಾರಣ ಎಂದರೆ ಆರೋಪ-ಪ್ರತ್ಯಾರೋಪಗಳು ಸಾಮಾನ್ಯ.

ಹಾಗೆಂದ ಮಾತ್ರಕ್ಕೆ ಮತ್ತೊಬ್ಬರ ಚಾರಿತ್ರ್ಯವಧೆ ಮಾಡುವಂಥ ಹೇಳಿಕೆಗಳನ್ನು ನೀಡುವುದು ತರವಲ್ಲ. ಹೀಗೆ ಅನಾವಶ್ಯಕ ಹೇಳಿಕೆ ಕೊಟ್ಟವರು ರಾಜಕೀಯದಿಂದ ದೂರ ಸರಿದಿರುವ ಉದಾಹರಣೆಗಳೂ ಇವೆ. ವರ್ಷ ನಡೆದ ಗುಜರಾತ್ ವಿಧಾನಸಭೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ನೀಚ ಎಂದು ಕರೆದಿದ್ದ ಕಾಂಗ್ರೆಸ್‌ನ ಹಿರಿಯ ಮುಖಂಡ ಮಣಿಶಂಕರ್ ಐಯ್ಯರ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿತ್ತು. ಅವರ ಈ ಒಂದು ಹೇಳಿಕೆಯಿಂದಾಗಿ ಆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸ್ವಲ್ಪ ಹಿನ್ನಡೆಯನ್ನೂ ಅನುಭವಿಸಿದ್ದು ಇತಿಹಾಸ. ಈಗ ಕರ್ನಾಟಕದಲ್ಲಿ ಅದೇ ರೀತಿಯ ಆವೇಶಭರಿತ ಹೇಳಿಕೆಗಳು ಹೊರಬರುತ್ತಿವೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಚಪ್ಪಲಿಯಲ್ಲಿ ಎಂದು ಕರೆ ಕೊಟ್ಟರೆ ಪ್ರಜಾಪ್ರಭುತ್ವ ಎಲ್ಲಿಗೆ ಬಂದು ನಿಲ್ಲಬೇಕು? ವಿರೋಧ ವ್ಯಕ್ತವಾದ ಮೇಲೆ ಕ್ಷಮೆ ಯಾಚನೆ ಮಾಡುವುದಕ್ಕಿಂತ ಮುನ್ನ ಇಂಥಹ ಹೇಳಿಕೆಗಳನ್ನು ಕೊಡುವ ಮುನ್ನ ಹತ್ತಾರು ಬಾರಿ ಯೋಚನೆ ಮಾಡಬೇಕು. ಆಕ್ಷೇಪಾರ್ಹ ಹೇಳಿಕೆಯಿಂದ ನಾಲ್ಕು ಮಂದಿಯನ್ನು ಮೆಚ್ಚಿಸಬಹುದು ಮತ್ತು ಅವರಿಂದ ಚಪ್ಪಾಳೆಯನ್ನೂ ಗಿಟ್ಟಿಸಬಹುದು. ಆದರೆ, ಆ ಹೇಳಿಕೆಯಿಂದ ಮತ್ತೊಬ್ಬರಿಗೆ ಆಗುವ ಘಾಸಿ ಹೇಗಿರುತ್ತದೆ ಎಂಬುದನ್ನು ಊಹಿಸಿಕೊಂಡು ಭಾಷಣಗಳನ್ನು ಮಾಡಿದರೆ ಒಳ್ಳೆಯದು. ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು ನಾಣ್ನುಡಿಯನ್ನು ಎಲ್ಲರೂ ಗಮನದಲ್ಲಿಡಬೇಕಾದುದು ಸೂಕ್ತ.

Leave a Reply

Your email address will not be published. Required fields are marked *

4 + 15 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

 

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

Back To Top