About Us Advertise with us Be a Reporter E-Paper

Breaking Newsದೇಶ
Trending

ಪ್ರತ್ಯೇಕತಾವಾದಿ ಮಲ್ಲಿಕ್‌ಗೆ ಜಾರಿ ನಿರ್ದೇಶನಾಲಯದ ಕಂಟಕ

ಶ್ರೀನಗರ: ಜಮ್ಮು ಕಾಶ್ಮೀರ ಪ್ರತ್ಯೇಕತಾವಾದಿ ಮುಖಂಡ ಯಾಸಿನ್‌ ಮಲ್ಲಿಕ್‌ಗೆ ನೋಟಿಸ್‌ ನೀಡಿರುವ ಜಾರಿ ನಿರ್ದೇಶನಾಲಯ, ಸೆಪ್ಟೆಂಬರ್‌ 5-6 ರಂದು ವಿಚಾರಣೆಗೆ ಹಾಜರಾಗಲು ಸೂಚಿಸಿದೆ.

ಈ ಕುರಿತು ಮಲ್ಲಿಕ್‌ ಅಲ್ಲದೇ ಮುಷ್ತಾಕ್ ಅಹ್ಮದ್‌ ದಾರ್‌ ಹಾಗು ಆತನ ಪತ್ನಿಗೆ ಪತ್ರ ಬರೆದಿದ್ದು, ಇವರುಗಳ ವಿರುದ್ಧ ತನಿಖಾ ಪ್ರಕ್ರಿಯೆಗಳನ್ನು ನಡೆಸಬೇಕಿದೆ ಎಂದು ತಿಳಿಸಿದೆ.

ವಿದೇಶೀ ವಿನಿಮಯ ನಿರ್ವಹಣೆ ಕಾಯಿದೆ, 1999ರ ಅಡಿಯಲ್ಲಿ ಮಲ್ಲಿಕ್‌ನನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ.

2001ರಲ್ಲಿ ಜಮ್ಮು ಕಾಶ್ಮೀರದ ಪೊಲೀಸರು ಮುಷ್ತಾಕ್‌ ಅಹಮದ್‌ ದಾರ್‌ ಹಾಗು ಆತನ ಪತಿ ಶಮೀಮಾಳಿಂದ 48.23 ಲಕ್ಷ ರುಗಳನ್ನು ಜಪ್ತಿ ಮಾಡಿಕೊಂಡ ವಿಚಾರವಾಗಿ ತನಿಖೆ ನಡೆಯುತ್ತಿದೆ. ಈ ಹಣವನ್ನು ನೇಪಾಳ ಮೂಲದ ವ್ಯಕ್ತಿಯೊಬ್ಬರು ತಮಗೆ ನೀಡಿ, ಮಲ್ಲಿಕ್‌ಗೆ ನೀಡಲು ತಿಳಿಸಿದ್ದಾಗಿ ದಾರ್‌ ಹೇಳಿದ್ದಾನೆ.

ವಿಚಾರಣೆಗೆ ಹಾಜರಾಗಲು ವಿಫಲವಾದಲ್ಲಿ, ತಮ್ಮ ವಿರುದ್ಧ ತನಿಖೆಗೆ ಮುಂದಾಗುವುದಾಗಿ ಇಡಿ ಎಚ್ಚರಿಕೆ ನೀಡಿದೆ.

Tags

Related Articles

Leave a Reply

Your email address will not be published. Required fields are marked *

Language
Close