lakshmi-electricals

ಕಾಡಿಗಟ್ಟಿದರೂ ನಾಡಿಗೆ ಬರುವ ಒಂಟಿಸಲಗ

Posted In : ರಾಜ್ಯ, ರಾಮನಗರ


ರಾಮನಗರ: ಕಾಡಿಗಟ್ಟಿದರೂ ಮತ್ತೆ ನಾಡಿಗೆ ಮರಳು ಒಂಟಿಸಲಗ ಅರಣ್ಯ ಇಲಾಖೆ ಸಿಬ್ಬಂಧಿಗಳಿಗೆ ತಲೆನೋವಾಗಿದೆ. ಎರಡು ದಿನಗಳ ಹಿಂದೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಸಾವನ ದುರ್ಗದಲ್ಲಿ ಹಳ್ಳಕ್ಕೆ ಬಿದ್ದು ಕಾಡಾನೆಯೊಂದು  ಕಾಲು ಮುರಿದುಕೊಂಡಿತ್ತು. ಅರವಳಿಕೆ ನೀಡಿ ಆನೆಗೆ ಅರಣ್ಯ ಇಲಾಖೆ ಸಿಬ್ಬಂಧಿಗಳು  ಚಿಕಿತ್ಸೆ ನೀಡಿದ್ದರು. ನಂತರ ಆನೆಯನ್ನು ಕಾಡಿಗಟ್ಟಲು ಪ್ರಯತ್ನಿಸಿದ್ದರು. ಪಟಾಕಿ ಸಿಡಿಸಿ ಆನೆಯನ್ನು ಕಾಡಿಗೆ ಕಳುಹಿಸಲು 80 ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂಧಿಗಳು ಹರಸಾಹಸ ಪಟ್ಟಿದ್ದರು.

ಆದರೆ ಒಂಟಿಸಲಗ ಗುರುವಾರ ಮತ್ತೆ ಬೆಂಗಳೂರು ಹೊರವಲೆಯ ತಾವರೆಕೆರೆಯ ಮಾಯಸಂದ್ರ ಗ್ರಾಮದ ಬಳಿ ಕಾಣಿಸಿಕೊಂಡಿದೆ.  ನಿನ್ನೆ ಉದಂಡನಹಳ್ಳಿಯ ತೋಪಿನಲ್ಲಿ ಕಾಲ ಕಳೆದಿದ್ದ ಕಾಡಾನೆಯನ್ನು ಮತ್ತೆ ಕಾಡಿಗಟ್ಟಲು ಅರಣ್ಯ ಇಲಾಖೆಯ ಸಿಬ್ಬಂಧಿಗಳು ಪ್ರಯತ್ನಿಸುತ್ತಿದ್ದಾರೆ.
 

Leave a Reply

Your email address will not be published. Required fields are marked *

fourteen − 10 =

 
Back To Top