About Us Advertise with us Be a Reporter E-Paper

Breaking Newsರಾಜ್ಯ
Trending

ಆನೆಮರಿ ಸಾವು: ತಾಯಾನೆಯ ಮೂಕ ರೋಧನೆ (ವಿಡಿಯೊ)

ಹಾಸನ: ಮಗುವನ್ನು ಕಳೆದುಕೊಂಡ ದುಃಖ ಮನುಷ್ಯರು ಮಾತ್ರವಲ್ಲ ಪ್ರಾಣಿಗಳೂ ಕೂಡ ತಮ್ಮ ಮಕ್ಕಳನ್ನು ಕಳೆದುಕೊಂಡರೆ ರೋಧಿಸುತ್ತೆ. ಪ್ರಾಣಿಗಳಲ್ಲೂ ಮಮತೆ, ಮಮಕಾರ ಇರುತ್ತೆ ಅನ್ನೋದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಹಾಸನ ಜಿಲ್ಲೆಯಲ್ಲಿ ಇಂಥದ್ದೇ ಒಂದು ಹೃದಯಕಲಕುವ ದೃಶ್ಯ ಕಂಡು ಬಂದಿದೆ.

ಹುಟ್ಟಿದ ಕೆಲವೇ ಗಂಟೆಗಳಲ್ಲಿ ಮರಿ ಆನೆಯೊಂದು ಮೃತಪಟ್ಟಿದ್ದು, ದುಃಖ ತಾಳದ ತಾಯಿ ಆನೆ ಮೃತದೇಹದ ಬಳಿಯೇ ಕುಳಿತು ರೋಧಿಸುತ್ತಿರುವ ಹೃದಯವಿದ್ರಾವಕ ಘಟನೆ ಸಕಲೇಶಪುರ ತಾಲ್ಲೂಕು ಕೊತ್ತನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಳೆದ ರಾತ್ರಿ  ಭತ್ತದ ಗದ್ದೆಯಲ್ಲಿ ಜನ್ಮ ನೀಡಿದ ಕೆಲವೇ ಗಂಟೆಯಲ್ಲಿ ಮರಿ ಸಾವನಪ್ಪಿದೆ. ಮರಿಯ ಮೃತದೇಹದ ಪಕ್ಕದಲ್ಲಿ ಕಾಡಾನೆ ಇದ್ದು ಯಾರನ್ನು ಸಹ ಹತ್ತಿರ ಬಿಡದೆ ರೋಧಿಸುತ್ತಿದೆ. ತಾಯಿ ಆನೆಯ ಈ ದೃಶ್ಯ ಕಂಡ ಜನರು ಮಮ್ಮಲ ಮರುಗಿದ್ದಾರೆ. ಈ ತಿಂಗಳಿನಲ್ಲಿ ಮೃತಪಟ್ಟ ಎರಡನೇ  ಆನೆಮರಿ ಇದಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close