About Us Advertise with us Be a Reporter E-Paper

ಯಾತ್ರಾಯಾತ್ರಾ panel2

ಎಂಪೈರ್ ಸ್ಟೇಟ್ ಕಟ್ಟಡ

ಮಂಜುನಾಥ. ಡಿ.ಎಸ್.

ಈ ವಿಹಂಗಮ ದೃಶ್ಯವನ್ನು ಸೆರೆಹಿಡಿದಿದ್ದು ನ್ಯೂಯಾರ್ಕ್ ನಗರದ ಮನ್‌ಹಟನ್‌ನಲ್ಲಿರುವ 102 ಆಂತಸ್ತುಗಳ ಎಂಪೈರ್ ಸ್ಟೇಟ್ ಕಟ್ಟಡದ ವೀಕ್ಷಣಾ ಮಹಡಿಯಿಂದ. ಶ್ರೀವ್, ಲ್ಯಾಂಬ್ ಮತ್ತು ಹರ್ಮನ್ ವಿನ್ಯಾಸಗೊಳಿಸಿದ ಈ ಭವನ 1931ರಲ್ಲಿ ಪೂರ್ಣಗೊಂಡಿತು. ಇದು ಅಡಿ ಎತ್ತರ ವಿದ್ದು ನಲವತ್ತು ವರ್ಷಗಳ ಕಾಲ ವಿಶ್ವದ ಅತಿ ಎತ್ತರದ ಕಟ್ಟಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

2001 ಸೆಪ್ಟಂಬರ್ ಹನ್ನೊಂದರ ಉಗ್ರರ ದಾಳಿಗೆ ವರ್ಲ್‌ಡ್ ಟ್ರೇಡ್ ಸೆಂಟರ್ ಉರುಳಿದ ಸಮಯದಿಂದ 2012ರಲ್ಲಿ ಹೊಸ ಕಟ್ಟಡ ತಲೆ ಯೆತ್ತುವ ತನಕ ಇದು ತಾತ್ಕಾಲಿಕವಾಗಿ ನ್ಯೂಯಾರ್ಕ್ ನಗರದ ಅತಿ ಎತ್ತರದ ಕಟ್ಟಡವೆನಿಸಿತ್ತು. ಐದನೆ ಅವೆನ್ಯುವಿನ ಪಶ್ಮಿಮ ದಿಸೆಯಲ್ಲಿರುವ ಇದು ಈಗ ಅಮೆರಿಕ ಸಂಯುಕ್ತ ಸಂಸ್ಥಾನದ ಕಟ್ಟಡಗಳಲ್ಲಿ ಐದನೆಯ ಸ್ಥಾನದಲ್ಲಿದೆ. 86 102ನೆಯ ಮಹಡಿಗಳಲ್ಲಿ ವೀಕ್ಷಣಾ ಸೌಲಭ್ಯವಿದೆ.

ಸುಂದರ ನಗರದ ಪೂರ್ಣವೃತ್ತದ ದೃಶ್ಯದೊಡನೆ ಹೆಗ್ಗು ರುತುಗಳಾದ ಬ್ರೂಕ್‌ಲಿನ್ ಬ್ರಿಜ್, ಟೈಮ್ ಸ್ಕ್ವೇರ್, ಹಡ್ಸನ್ ನದಿ, ಇತ್ಯಾದಿಗಳನ್ನು ಇಲ್ಲಿಂದ ಕಣ್ತುಂಬಿಸಿಕೊಂಡು ಬೆರಗಾಗ ಬಹುದು. ನಿರ್ಮಲ ಆಕಾಶವಿದ್ದರೆ ಸ್ವಾತಂತ್ರ್ಯ ಪ್ರತಿಮೆ ಯನ್ನೂ ಕಾಣಬಹುದು. ಅಲ್ಲಲ್ಲಿ ಅಳವಡಿಸಿರುವ ದೂರ ದರ್ಶಕಗಳು ಇವುಗಳನ್ನು ಇನ್ನೂ ಸಮೀಪಕ್ಕೆ ಕರೆತರುತ್ತವೆ!

ಅಮೆರಿಕದ ಸಾಂಸ್ಕೃತಿಕ ಚಿಹ್ನೆಯಾಗಿರುವ ಎಂಪೈರ್ ಸ್ಟೇಟ್ ಕಟ್ಟಡ ಲಕ್ಷಾಂತರ ಪ್ರವಾಸಿಗರನ್ನು ತನ್ನತ್ತ ಸೆಳೆದಿರು ವುದಲ್ಲದೆ ನೂರಾರು ಚಲನಚಿತ್ರಗಳು ಮತ್ತು ದರ್ಶನದ ಕಾರ್ಯಕ್ರಮಗಳಲ್ಲಿ ಚಿರಂತನವಾಗಿದೆ.

ಬೆಳಗ್ಗಿನ ಎಂಟು ಗಂಟೆಯಿಂದ ನಡುರಾತ್ರಿ ನಂತರವೂ ವೀಕ್ಷಣಾ ಮಹಡಿಗಳಿಗೆ ಪ್ರವೇಶವಿರುತ್ತದೆ. ಹಾಗಾಗಿ ದೀಪ ಗಳ ಬೆಳಕಿನಲ್ಲಿ ಝಗಮಗಿಸುವ ನಗರದ ಸೌಂದರ್ಯವನ್ನೂ ಸವಿಯಬಹುದಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close