ಶತಾಯುಷಿ ಏಣಗಿ ಬಾಳಪ್ಪ ಅಂತ್ಯಕ್ರಿಯೆ ಇಂದು

Posted In : ಬೆಳಗಾವಿ, ರಾಜ್ಯ

ಬೆಳಗಾವಿ: ಸವದತ್ತಿ ತಾಲೂಕಿನ ಏಣಗಿ ಗ್ರಾಮದ ಸ್ವಗೃಹದಲ್ಲಿ ಅನಾರೋಗ್ಯದಿಂದ ನಿಧನರಾದ ಶತಾಯುಷಿ ಏಣಗಿ ಬಾಳಪ್ಪ (103) ಅವರ ಅಂತ್ಯಕ್ರಿಯೆ ಶನಿವಾರ ನಡೆಯಲಿದೆ.

506ಕ್ಕೂ ಅಧಿಕ ನಾಟಕಗಳು ಹಾಗೂ 5-6 ಚಲನಚಿತ್ರಗಳಲ್ಲಿ ಅಭಿನಯಿಸಿದ ಈ ಹಿರಿಯ ಜೀವಿ ಇನ್ನು ನೆನಪು ಮಾತ್ರ. ಇಬ್ಬರು ಪತ್ನಿಯರು, ಒಟ್ಟು 9 ಮಕ್ಕಳು ಹಾಗೂ 25 ಜನ ಮೊಮ್ಮಕ್ಕ ಳನ್ನು ಅಗಲಿದ್ದಾರೆ. ಬಾಳಪ್ಪ ಅಗಲಿಕೆಯಿಂದ ಇಡೀ ಕುಟುಂಬ ವರ್ಗ ಹಾಗೂ ಅಭಿಮಾನಿಗಳು ಶೋಕ ಸಾಗರದಲ್ಲಿ ಮುಳುಗಿದ್ದಾರೆ.

ಇಂದು ಬೆಳಗ್ಗೆ 11 ಗಂಟೆಗೆ ಏಣಗಿ ಬಾಳಪ್ಪನವರ ಸ್ವಂತ ಜಮೀನಿನಲ್ಲಿ ವೀರಶೈವ ವಿಧಿ ವಿಧಾನದಂತೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಸದಸ್ಯರೊಬ್ಬರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

5 × 5 =

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

 

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

Back To Top