About Us Advertise with us Be a Reporter E-Paper

Breaking NewsUncategorizedಕ್ರೀಡೆಪ್ರಚಲಿತ

ಇಂಗ್ಲೆಂಡ್‌-ಭಾರತ 2ನೇ ಟೆಸ್ಟ್‌: ಆರಂಭದಲ್ಲೇ ಮುಗ್ಗರಿಸಿ ಕೊಹ್ಲಿ ಬಾಯ್ಸ್‌

ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್‌ ನಡುವಿನ 2ನೇ ಟೆಸ್ಟ್‌ನಲ್ಲಿ ಭಾರತ ಆರಂಭಿಕ ಆಘಾತ ಎದುರಿಸಿದೆ. ಮಳೆಯಿಂದಾಗಿ ಆಟ ಸ್ಥಗಿತಗೊಂಡಿದ್ದು ಭಾರತ 11 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡಿದೆ.

ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡ ಇಂಗ್ಲೆಂಡ್‌ ಆರಂಭದಲ್ಲೇ ಎರಡು ವಿಕೆಟ್‌ ಕಬಳಿಸುವ ಮೂಲಕ ಮೇಲುಗೈ ಸಾಧಿಸಿದೆ. ಭಾರತದ ಆರಂಭಿಕ ದಾಂಡಿಗರಾದ ಮುರುಳಿ ವಿಜಯ್‌ ಮತ್ತು ಕೆ.ಎಲ್‌.ರಾಹುಲ್‌ ಬೃಹತ್‌ ಮೊತ್ತ ಕಲೆ ಹಾಕುವಲ್ಲಿ ವಿಫಲರಾದರು.

ಮೊದಲ ಒವರ್‌ನಲ್ಲೇ ಜೇಮ್ಸ್‌ ಆಂಡರ್‌ಸನ್‌ ಬಲೆಗೆ ಬಿದ್ದ ಮುರಳಿ ವಿಜಯ್‌ ಐದನೇ ಎಸೆತಕ್ಕೆ ಕ್ಲೀನ್‌ ಬೌಲ್ಡ್ ಆಗಿ ನಿರಾಸೆ ಮೂಡಿಸಿದರು. ನಂತರ ಕೆ.ಎಲ್‌.ರಾಹುಲ್‌ ಕೂಡಾ ಕೇವಲ 8 ರನ್‌ ಗಳಿಸಿ ಕೀಪರ್‌ಗೆ ಕ್ಯಾಚ್‌ ಕೊಟ್ಟು ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು.

ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿದ್ದು,  ಕ್ರೀಸ್‌ನಲ್ಲಿ ಈಗ ಟೆಸ್ಟ್‌ ಸ್ಫೆಷಲಿಸ್ಟ್ ಚೇತೇಶ್ವರ್‌ ಫೂಜಾರ ಮತ್ತು ನಾಯಕ ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close