About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ

ಇಂಗ್ಲೆಂಡ್ 332ಕ್ಕೆ ಆಲೌಟ್‌; ಭಾರತ ಎರಡು ವಿಕೆಟ್ ನಷ್ಟಕ್ಕೆ 98 ರನ್

ಓವಲ್: ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಒಡ್ಡಿರುವ 332 ರನ್‌ಗಳಿಗೆ ಉತ್ತರವಾಗಿ ಎರಡನೇ ದಿನದಾಟದಲ್ಲಿ ಬ್ಯಾಟಿಂಗ್ ಆರಂಭಿಸಿರುವ ಭಾರತ 29 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 98 ರನ್ ಗಳಿಸಿದೆ.

ಭಾರತಕ್ಕೆ ಆರಂಭದಲ್ಲೇ ಶಿಖರ್ ಧವನ್ (3) ವಿಕೆಟ್ ನಷ್ಟವಾಗಿತ್ತು. ಇದರೊಂದಿಗೆ ಸತತ ವೈಫಲ್ಯಕ್ಕೊಳಗಾದರು. ನಂತರ ಕ್ರೀಸ್‌ಗೆ ಬಂದ ಪೂಜಾರ ಜತೆ ಕರ್ನಾಟಕದ ಕೆಎಲ್ ರಾಹುಲ್ 64 ರನ್‌ ಜತೆಯಾಟ ಆಡುವವಾಗ 37 ರನ್‌ ಸಿಡಿಸಿದ್ದ ರಾಹುಲ್‌ ಸ್ಯಾಮ್‌ ಕುರ‍್ರನ್‌ಗೆ ಬೌಲ್ಡ್‌ ಆಗಿ ಪೆವಿಲಿಯನ್‌ನತ್ತ ಹೆಜ್ಜೆಹಾಕಿದರು. ಇದೀಗ ನಾಯಕ ವಿರಾಟ್‌ ಕೊಹ್ಲಿ  ಮತ್ತು ಪೂಜಾರ ಜೋಡಿ ಆಟ ಮುಂದುವರಿಸಿದ್ದಾರೆ.

ಈ ಮೊದಲು ಎರಡನೇ ದಿನದಾಟದಲ್ಲಿ ಜೋಸ್ ಬಟ್ಲರ್ ಆಕರ್ಷಕ ಅರ್ಧಶತಕ (89) ನೆರವಿನೊಂದಿಗೆ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 122.1 ಓವರ್‌ಗಳಲ್ಲಿ 332 ರನ್ ಗಳಿಸಿ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿತು.

ಇಂಗ್ಲೆಂಡ್ ಬಾಲಂಗೋಚಿಗಳು ಮಗದೊಮ್ಮೆ ಭಾರತಕ್ಕೆ ಪ್ರತಿರೋಧ ಒಡ್ಡಿದರು. 198/7 ಎಂಬಲ್ಲಿದ್ದ ದಿನದಾಟ ಆರಂಭಿಸಿದ ಆತಿಥೇಯರಿಗೆ ಆದಿಲ್ ರಶೀದ್ (15) ವಿಕೆಟ್ ನಷ್ಟವಾಯಿತು. ಆದರೂ ಜೋಸ್ ಬಟ್ಲರ್ ಜತೆ 33 ರನ್‌ಗಳ ಜತೆಯಾಟದಲ್ಲಿ ಭಾಗಿಯಾಗಿದ್ದರು.

ಇನ್ನೊಂದೆಡೆ ಜೋಸ್ ಬಟ್ಲರ್ ಸಮಯೋಚಿತ ಇನ್ನಿಂಗ್ಸ್ ಕಟ್ಟಿದರು. ಇವರಿಗೆ 10ನೇ ಕ್ರಮಾಂಕದ ಬ್ಯಾಟ್ಸ್‌ಮನ್ ಸ್ಟುವರ್ಟ್ ಬ್ರಾಡ್ ಅವರಿಂದಲೂ ಉತ್ತಮ ಬೆಂಬಲ ದೊರಕಿತು. ಸರಣಿಯುದ್ಧಕ್ಕೂ ಪ್ರಭಾವಿ ಬ್ಯಾಟಿಂಗ್ ಪ್ರದರ್ಶಿಸಿರುವ ಬಟ್ಲರ್, ಮಗದೊಂದು ಅರ್ಧಶತಕದ ಮೂಲಕ ಗಮನ ಸೆಳೆದರು. ತಮ್ಮ ಹುಟ್ಟುಹಬ್ಬದ ದಿನದಲ್ಲೇ ಈ ಇನ್ನಿಂಗ್ಸ್ ದಾಖಲಾಗಿರುವುದು ಹೆಚ್ಚಿನ ಗಮನ ಸೆಳೆದಿದೆ.

ಅಂತಿಮ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಬಟ್ಲರ್ ಇಂಗ್ಲೆಂಡ್ ತಂಡವನ್ನು ಸ್ಪರ್ಧಾತ್ಮಕ ಮೊತ್ತದತ್ತ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಂತಿಮವಾಗಿ ಶತಕದ ಸನಿಹದಲ್ಲಿ ವಿಕೆಟ್ ಒಪ್ಪಿಸಿದರು.

ಇದರೊಂದಿಗೆ ಇಂಗ್ಲೆಂಡ್ 332 ರನ್‌ಗಳಿಗೆ ಸರ್ವಪತನವನ್ನು ಕಂಡಿತು. 133 ಎಸೆತಗಳನ್ನು ಎಸೆತಗಳನ್ನು ಎದುರಿಸಿದ ಬಟ್ಲರ್ ಆರು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 89 ರನ್ ಗಳಿಸಿದರು.

ಭಾರತದ ಪರ ರವೀಂದ್ರ ಜಡೇಜಾ ನಾಲ್ಕು ಮತ್ತು ಜಸ್ಪ್ರೀತ್ ಬುಮ್ರಾ ಹಾಗೂ ಇಶಾಂತ್ ಶರ್ಮಾ ತಲಾ ಮೂರು ವಿಕೆಟುಗಳನ್ನು ಹಂಚಿಕೊಂಡರು.

Tags

Related Articles

Leave a Reply

Your email address will not be published. Required fields are marked *

Language
Close