About Us Advertise with us Be a Reporter E-Paper

ರಾಜ್ಯ

ರಾಜಭವನಕ್ಕೆ ಸಾರ್ವಜನಿಕರು ಎಂಟ್ರಿ..!

ಬೆಂಗಳೂರು: ಜನಸಾಮಾನ್ಯರಿಗೂ ರಾಜಭವನ ಪ್ರವೇಶ ಕಲ್ಪಿಸುವ ಉದ್ದೇಶದಿಂದ ರಾಜ್ಯಪಾಲ ವಜುಭಾಯಿ ವಾಲಾ ಅವರು ಆಗಸ್ಟ್ 23ರಿಂದ ಸೆಪ್ಟೆಂಬರ್ 6ರ ವರೆಗೆ ರಾಜಭವನ ವೀಕ್ಷಣೆಗೆ ಸಾರ್ವಜನಿಕರಿಗೆ ವಿಶೇಷ ಅವಕಾಶ ಕಲ್ಪಿಸಿದ್ದು, ನೂರಾರು ಮಂದಿ ರಾಜಭವನ ಕಣ್ತುಂಬಿಕೊಂಡಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಆಗಸ್ಟ್ 16ರಿಂದ 31ರವರೆಗೆ ಹದಿನೈದು ದಿನ ಸಾರ್ವಜನಿಕರಿಗೆ ರಾಜಭವನವನ್ನು ಮುಕ್ತಗೊಳಿಸಿದ್ದರು. ಆದರೆ, ಮಾಜಿ ಪ್ರಧಾನಮಂತ್ರಿ ವಾಜಪೇಯಿ ಅವರ ನಿಧನದಿಂದ ಆಗಸ್ಟ್ 16ರಿಂದ 22ರವರೆಗಿನ ರಾಜಭವನ ಪ್ರವೇಶ ಅವಕಾಶವನ್ನು ನಿರ್ಬಂಧಿಸಿದ್ದರು. ಈ ಅವಧಿಗೆ ನೋಂದಣಿ ಮಾಡಿಕೊಂಡವರಿಗೆ ಸೆಪ್ಟೆಂಬರ್ 1ರಿಂದ 6ರವರೆಗೆ ಅವಕಾಶ ಕಲ್ಪಿಸಲಾಗಿದೆ.

ಮೊದಲ ತಂಡವಾಗಿ ಗುರುವಾರ ಭೇಟಿ ನೀಡಿದ ಸಾರ್ವಜನಿಕರು ರಾಜಭವನ ಹಾಗೂ ಆವರಣದಲ್ಲಿ ಸುತ್ತಾಡಿ ಖುಷಿ ಪಟ್ಟರು. ರಾಜಭವನದಲ್ಲಿ ಪ್ರದರ್ಶಿಸಲಾಗಿದ್ದ ಅಪರೂಪದ ಭಾವಚಿತ್ರಗಳು ಹಾಗೂ ಐತಿಹಾಸಿಕ ವಿಷಯಗಳನ್ನು ರಾಜಭವನ ಸಿಬ್ಬಂದಿ, ವೀಕ್ಷಕರಿಗೆ ವಿವರಿಸಿದರು.

ರಾಜಭವನ ಪ್ರವೇಶಿಸಲು ಆನ್‌ಲೈನ್ ನೋಂದಣಿಗೆ ಅವಕಾಶ ಮಾಡಿಕೊಡಲಾಗಿತ್ತು. ಈಗಾಗಲೇ ಸೆಪ್ಟೆಂಬರ್ 6ರವರೆಗೆ ಭೇಟಿ ನೀಡಲಿರುವವರ ನೋಂದಣಿ ಪೂರ್ಣಗೊಂಡಿದೆ. ಹೀಗಾಗಿ ನೋಂದಣಿ ಪ್ರಕ್ರಿಯೆ ಸ್ಥಗಿತಗೊಳಿಸಿದ್ದು, ಈಗಾಗಲೇ ನೋಂದಣಿ ಮಾಡಿಕೊಂಡವರಿಗೆ ರಾಜಭವನ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ರಾಜಭವನದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close