ಭವಿಷ್ಯದ ನಿಧಿ ಮೇಲಿನ ಬಡ್ಡಿದರ ಶೇ 8.65ರಲ್ಲಿ ಮುಂದುವರೆಯುವ ಸಾಧ್ಯತೆ

Posted In : ದೇಶ

ದೆಹಲಿ: ದೇಶದ ಸುಮಾರು ಐದು ಕೋಟಿ ಕಾರ್ಮಿಕರ ಭವಿಷ್ಯ ನಿಧಿ ಮೇಲಿನ ಬಡ್ಡಿದರವನ್ನು 2017-18ರ ವರ್ಷಕ್ಕೆ ಶೇ8.65 ರಲ್ಲಿ ಇಡಲು ಕಾರ್ಮಿಕರ ಭವಿಷ್ಯನಿಧಿ ಸಂಸ್ಥೆ(ಇಪಿಎಫ್‌ಓ) ನಿರ್ಧರಿಸುವ ಸಾಧ್ಯತೆ ಇದೆ.

ಇಪಿಎಫ್‌ಓ ಟ್ರಸ್ಟೀಗಳು ಫೆಬ್ರವರಿ 21ರಂದು ಸಭೆ ಸೇರಲಿದ್ದು ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಉದ್ದೇಶಿತ ಬಡ್ಡಿದರ ಕಪಾಡಿಕೊಳ್ಳುವ ನಿಟ್ಟಿನಲ್ಲಿ ಶೇರು ಮಾರುಕಟ್ಟೆಯಲ್ಲಿ 2,886 ಕೋಟಿ ರು ಬೆಲೆಬಾಳುವ ನಿಧಿಯನ್ನು ಇಪಿಎಫ್‌ಓ ಮಾರಾಟ ಮಾಡಿದೆ.

2015-16ರಲ್ಲಿ ಶೇ8.8ರಲ್ಲಿದ್ದ ಭವಿಷ್ಯ ನಿಧಿ ಮೇಲಿನ ಬಡ್ಡಿ ದರವನ್ನು 2016-17ರಲ್ಲಿ ಶೇ8.65ಕ್ಕೆ ಇಳಿಸಲಾಗಿತ್ತು. ಈ ಮೂಲಕ 1,054 ಕೋಟಿ ರುಗಳಷ್ಟು ಹಣ ಹಿಂದಿರುಗಿದ್ದು ಈ ಬಾರಿಯೂ ಅದೇ ಮಟ್ಟದ ಬಡ್ಡಿ ದರ ಕಾಪಾಡಿಕೊಳ್ಳಲು ಅನುವಾಗಲಿದೆ.

ಆಗಸ್ಟ್‌ 2015ರಿಂದಲೂ ಶೇರಿನಲ್ಲಿ ಹೂಡಿಕೆ ಮಾಡುತ್ತಿರುವ ಇಪಿಎಫ್‌ಓ ಇಲ್ಲಿಯವರೆಗೂ ಸುಮಾರು 44,000 ಕೋಟಿ ರುಗಳಷ್ಟು ಹೂಡಿಕೆ ಮಾಡಿದೆ.

 

Leave a Reply

Your email address will not be published. Required fields are marked *

two × 1 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Friday, 23.02.2018

ಶ್ರೀಹೇಮಲಂಬಿ, ಉತ್ತರಾಯಣ, ಶಿಶಿರಋತು, ಪಾಲ್ಗುಣ ಮಾಸ, ಶುಕ್ಲಪಕ್ಷ, ಅಷ್ಟಮಿ, ಶುಕ್ರವಾರ, ನಿತ್ಯ ನಕ್ಷತ್ರ-ಕೃತ್ತಿಕಾ, ಯೋಗ-ವೈಧೃತಿ, ಕರಣ-ಭದ್ರೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 7.30-9.00 3.00-4.30

Read More

 

Friday, 23.02.2018

ಶ್ರೀಹೇಮಲಂಬಿ, ಉತ್ತರಾಯಣ, ಶಿಶಿರಋತು, ಪಾಲ್ಗುಣ ಮಾಸ, ಶುಕ್ಲಪಕ್ಷ, ಅಷ್ಟಮಿ, ಶುಕ್ರವಾರ, ನಿತ್ಯ ನಕ್ಷತ್ರ-ಕೃತ್ತಿಕಾ, ಯೋಗ-ವೈಧೃತಿ, ಕರಣ-ಭದ್ರೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 7.30-9.00 3.00-4.30

Read More

Back To Top