ಪಕ್ಷದಲ್ಲಿ ಇಬ್ಬರಿಗೂ ಸಮಾನ ಹಕ್ಕಿದೆ: ಅಲಿ ಅನ್ವರ್

Posted In : ದೇಶ

ಪಾಟ್ನಾ: ಜೆಡಿಯು ಪಕ್ಷದಿಂದ ಶರದ್ ಯಾದವ್ ಅವರ ಉಚ್ಛಾಟನೆ ರಾಜಕೀಯವಾಗಿ ತಪ್ಪು ಸಂದೇಶ ರವಾನಿಸಿದಂತೆ. ರಾಜ್ಯದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಂತೆ ಶರದ್ ಯಾದವ್‌ರಿಗೆ ಸಮಾನ ಹಕ್ಕಿದೆ ಎಂದು ಪಕ್ಷದ ಮುಖಂಡ ಅಲಿ ಅನ್ವರ್ ಹೇಳಿದ್ದಾರೆ.

ಶರದ್ ಪಕ್ಷದ ಸ್ಥಾಪಕರು. ದಲಿತರು ಹಾಗೂ ಹಿಂದುಳಿದ ವರ್ಗಗಳಿಗಾಗಿ ಶ್ರಮಿಸಿದ್ದಾರೆ. ರಾಷ್ಟ್ರಪಟ್ಟದಲ್ಲಿ ತಮ್ಮದೇ ಆದ ವ್ಯಕ್ತಿತ್ವ ವನ್ನು ಹೊಂದಿದ್ದಾರೆ ಎಂದರು. ಯಾದವ್ ಅವರ ಉಚ್ಛಾಟನೆಯಿಂದ ಪಕ್ಷ ಇಬ್ಭಾಗವಾಗುತ್ತದೆ. ಪಕ್ಷದಲ್ಲಿ ಗೊಂದಲ ವಿರಕೂಡದು. ಭವಿಷ್ಯದ ಹಿತದೃಷ್ಟಿಯಿಂದ ಒಳ್ಳೆಯ ದಲ್ಲ ಎಂದರು.

ಕಳೆದ ಶನಿವಾರ ಜೆಡಿಯು, ಪಕ್ಷದಲ್ಲಿ ಯಾವುದೇ ಸಮಸ್ಯೆಯಿಲ್ಲ. ಇದೇ 19ರಂದು ನಡೆಯುವ ಪಕ್ಷದ ಸಭೆಯಲ್ಲಿ ಯಾದವ್ ಮತ್ತು ಅಲಿ ಹಾಜರಾತಿ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ ಎಂದರು. ತನ್ನ ಸ್ಥಾನಕ್ಕೆ ರಾಮ್‌ ಚಂದರ್ ಸಿಂಗ್ ಅವರ ನೇಮಕವನ್ನು ತಾನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಶರದ್ ಯಾದವ್ ಹೇಳಿದರು. ಶರದ್ ಯಾದವ್ ಅವರು ಪಕ್ಷದ ಹಿರಿಯರಾಗಿದ್ದು, ನಿರ್ಧಾರ ತೆಗೆದು ಕೊಳ್ಳುವ ಮುಕ್ತ ಸ್ವಾತಂತ್ರ್ಯವಿದೆ.

ಪಕ್ಷ ಹಾಗೂ ರಾಜ್ಯದ ಹಿತದೃಷ್ಟಿಯಿಂದ ಬಿಜೆಪಿಯೊಂದಿಗೆ ಮೈತ್ರಿ ಅನಿವಾರ್ಯವಾಗಿತ್ತು ಎಂದು ನಿತೀಶ್ ಶುಕ್ರವಾರ ಹೇಳಿ ದ್ದರು. ಶರದ್ ಅವರ ನಿರ್ದೇಶನದಂತೆ ಸೋನಿಯಾ ಗಾಂಧಿ ಕರೆದಿದ್ದ ಸಭೆಗೆ ಹಾಜರಾಗಿದ್ದ ಅನ್ವರ್ ಅಲಿ ಅವರನ್ನು ಕೂಡ, ಪಕ್ಷ ಅಮಾನತು ಮಾಡಿತ್ತು.

Leave a Reply

Your email address will not be published. Required fields are marked *

sixteen − 4 =

 
Back To Top