ವಿಶ್ವವಾಣಿ

ಎಥೆನಾಲ್ ಬೆಲೆ ಹೆಚ್ಚಳ ಜನಸಾಮನ್ಯರಿಗೆ ಶಾಕ್…..

ದೆಹಲಿ: ನಿರಂತರ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಏರಿಕೆಯಾಗಿರಿಂದ ಕಕ್ಕಾಬಿಕಿಯಾದ ಜನಸಾಮಾನ್ಯರಿಗೆ ಕೇಂದ್ರ ಸರಕಾರ ಮತ್ತೊಂದು ಶಾಕ್ ನೀಡಿದೆ.

ಎಥೆನಾಲ್ ದರದಲ್ಲೂ ಏರಿಕೆಯಾಗಿ ಪ್ರತಿ ಲೀಟರ್ ಎಥೆನಾಲ್ ಗೆ 52.43 ರುಕೇಂದ್ರ ಸಂಪುಟ ಸಭೆಯಲ್ಲಿ ನಿಗದಿಪಡಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಥೆನಾಲ್ ಬೆಲೆ ಹೆಚ್ಚಳ ವಾಗಿದೆ.

ಈ ಹಿಂದೆ ಲೀಟರ್ ಎಥೆನಾಲ್ ದರ 47.49 ರು.ಇತ್ತು ಆದರೆ , ತೈಲ ಬೆಲೆ ಏರಿಕೆ ಹಿನ್ನಲೆ ಸಂಪುಟ ಸಭೆಯಲ್ಲಿ ಎಥನಾಲ್ ದರ ಕೂಡಾ ಏರಿಸಲಾಗಿದೆ ಎಂದು ಸಭೆಯ ಬಳಿಕ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕಬ್ಬು, ಗೋಧಿ, ಜೋಳ ಮತ್ತಿತರ ಬೆಳೆಗಳಿಂದ ಉತ್ಪಾದಿಸುವ ಎಥೆನಾಲ್ ನ್ನು ಪರಿಸರ ಸ್ನೇಹಿ ಇಂಧನವನ್ನಾಗಿ ವಾಹನಗಳಿಗೆ ಬಳಸಲಾಗುತ್ತದೆ. ಪೆಟ್ರೋಲ್ , ಹಾಗೂ ಡೀಸೆಲ್ ಬೆಲೆ ಏರಿಕೆಯಿಂದಾಗಿ ಬಸ್ ಪ್ರಯಾಣ ದರ ಕೂಡಾ ದುಬಾರಿಯಾಗುತ್ತಿದ್ದು, ಜನಸಾಮಾನ್ಯರಿಗೆ ಮತ್ತಷ್ಟು ಹೊರೆಯಾಗಿದೆ ಎಂದಿದ್ದಾರೆ.