ವಿಶ್ವವಾಣಿ

ಎಲ್ಲರೂ ಅವರದ್ದೇ ಆದ  ಈ ಭೂಮಿಗೆ ಬಂದಿರುತ್ತಾರೆ!

ಒಂದು ಸಾರಿ ಮೂವರು ಸಹೋದ್ಯೋಗಿಗಳು, ಸೇಲ್‌ಸ್ ರೆಪ್, ಕ್ಲರ್ಕ್ ಹಾಗೂ ಮ್ಯಾನೇಜರ್ ಮಧ್ಯಾಹ್ನದ ಊಟಕ್ಕಾಗಿ ಹೊರಗೆ ಹೊರಟಿದ್ದರು. ಅವರಿಗೆ ಒಂದು ಪುರಾತನ ದೀಪ ಸಿಕ್ಕಿತು. ಕೂಡಲೇ ಕೈಗೆ ತೆಗೆದುಕೊಂಡು ಉಜ್ಜಿದರೆ, ‘ಜೀನಿ’ ಹೊರಬಂತು. ಮೂರೂ ಜನರ ಒಂದೊಂದು ಆಸೆ ಪೂರೈಸುತ್ತೇನೆ’ ಎಂದು ಭೂತ ಹೇಳಿದ್ದೇ ತಡ, ‘ನನಗೆ ಮೊದಲು, ನನಗೆ ಮೊದಲು’ ಎಂದ ಅಡ್ಮಿನ್ ಗುಮಾಸ್ತೆ. ಸರಿ ಏನು ನಿನ್ನ  ಹೇಳಿಕೋ ಎಂದು ಭೂತ ಅಪ್ಪಣೆ ಕೊಟ್ಟ ತಕ್ಷಣ ‘ನಾನು, ಲವಲೇಶ ಚಿಂತೆಯೂ ಇಲ್ಲದೆ ಬಹಾಮಾ ದ್ವೀಪಗಳಲ್ಲಿ ಹಾಯಾಗಿ ಸ್ಪೀಡ್‌ಬೋಟ್ ಚಾಲನೆ ಮಾಡುತ್ತಾ ಇರಬೇಕು’ ಎಂದಳು. ಅವಳಿನ್ನೂ ಹೇಳಿ ಮುಗಿಸಿಯೇ ಇಲ್ಲ, ಶ್ಶೂ! ಕ್ಲರ್ಕ್ ಮಾಯವಾಗಿದ್ದಳು. ಆಮೇಲೆ ಬಂದ, ಸೇಲ್‌ಸ್ ರೆಪ್. ಆಸೆಬುರುಕ ಕೇಳಿದ, ನಾನೂ ಹವಾಯ್ ದ್ವೀಪಗಳಿಗೆ ಹೋಗಬೇಕು. ಬೀಚ್‌ನಲ್ಲಿ ನನ್ನ ವೈಯಕ್ತಿಕ ಮಸಾಜುಗಾರನಿಂದ ಮೈನೀವಿಸಿಕೊಂಡು ಆರೈಕೆಗೊಳ್ಳುತ್ತಾ, ಪೀಪಾಯಿಗಟ್ಟಲೆ ಮದ್ಯ ಸೇವಿಸುತ್ತಾ ಹಾಯಾಗಿ ಪವಡಿಸಿರಬೇಕು. ಮಗ್ಗುಲಲ್ಲಿನನ್ನ ಪ್ರಿಯತಮೆ’. ಕ್ಷಣಾರ್ಧದಲ್ಲಿ  ಭೂತದ ಕೃಪೆಗೆ ಪಾತ್ರನಾಗಿ ಸ್ಥಳದಿಂದ ಅಂತರ್ಧಾನನಾದ. ‘ ಈಗ ನಿನ್ನ ಚಾನ್‌ಸ್. ಹೇಳಯ್ಯ, ನಿನಗೇನು ಬೇಕು?’ ಭೂತ ಕೇಳುತ್ತಿದ್ದುದನ್ನೇ ಕಾಯ್ದುಕೊಂಡಿದ್ದ ಮ್ಯಾನೇಜರ್ ‘ಅವರಿಬ್ಬರೂ ಊಟದ ಬಳಿಕ ಆಫೀಸಲ್ಲಿರಬೇಕು. ಹಾಗೆ ಮಾಡು’ ಎಂದ. ಯಾವಾಗಲೂ, ಎಲ್ಲದರಲ್ಲೂ ಬಾಸ್‌ಗೆ ಮೊದಲ ಆದ್ಯತೆ ಕೊಡಬೇಕು.

***

ಒಂದು ಕಾಗೆ ದಿನ ಇಡೀ ಮರದ ಮೇಲೆ ಸುಮ್ಮನೆ ಕುಳಿತುಕೊಂಡು ಕಾಲ ಕಳೆಯುತ್ತಿತ್ತು. ಅಲ್ಲೇ ಕೆಳಗಡೆ ಓಡಾಡುತ್ತಿದ್ದ ಮೊಲಕ್ಕೆ ಏನಪ್ಪಾ ಹೀಗೆ ಇಡೀ ದಿನ ಏನೂ  ಸುಮ್ಮನೆ ಕೂತಿರುತ್ತೇ ಅಂತ ಆಶ್ಚರ್ಯವಾಯಿತು. ತಾನೂ ಹಾಗೆ ಇರಬೇಕು ಎಂಬ ಆಸೆ ಹುಟ್ಟಿತು. ‘ಏನಪ್ಪಾ ಕಾಗೆ ರಾಜ, ನಿನ್ನ ಹಾಗೆ ನನಗೂ ಸುಮ್ಮನೇ, ಏನೂ ಮಾಡದೆ, ದಿನ ಇಡೀ ಕುಳಿತಿರುವ ಆಸೆಯಾಗಿದೆ. ಕುಳಿತುಕೊಳ್ಳಲಾ?’ ಎಂದು ಕೇಳಿತು. ‘ಅಯ್ಯೋ, ಅದನ್ನೇನು ಕೇಳುತ್ತೀ? ಧಾರಾಳವಾಗಿ ಕೂತುಕೊ’ ಅಂತು, ಕಾಗೆ, ಮುಗುಮ್ಮಾಗಿ. ಕೆಳಗೆ ಮೊಲ, ಮೇಲೆ ಕಾಗೆ ಹೀಗೇ ಕೂತು ಕೂತು ಕಾಲ ಕಳೆಯುತ್ತಿದ್ದವು. ಸ್ವಲ್ಪಹೊತ್ತಿನ ನಂತರ ಒಂದು ನರಿ ಮೊಲದ ಮೇಲೆ  ಅದನ್ನು ತಿಂದು ಮುಗಿಸಿತು.

ದಿನವಿಡೀ ಏನೂ ಮಾಡದೆ ಸುಮ್ಮನೆ ಕೂತು ಕಾಲ ಕಳೆಯಬೇಕೆಂದರೆ, ಅತ್ಯಂತ ಎತ್ತರದ ಜಾಗದಲ್ಲಿರಬೇಕು. ಹುದ್ದೆಯಲ್ಲೂ, ಸ್ಥಳದಲ್ಲೂ !

***

ಒಂದು ಕೋಳಿ, ಒಂದು ಎತ್ತು ಸಂಭಾಷಣೆ ನಡೆಸುತ್ತಿದ್ದವು. ಮೈತುಂಬ ಬಣ್ಣ ಬಣ್ಣದ ಪುಕ್ಕಗಳಿದ್ದ ಟರ್ಕಿ ಕೋಳಿ ಏನೇನೋ ವಟಗುಟ್ಟುತ್ತಿತ್ತು. ಎತ್ತು ತಲೆ ತಗ್ಗಿಸಿ ಮೇಯುತ್ತಾ ಸುಮ್ಮನೆ ಕೇಳಿಸಿಕೊಳ್ಳುತ್ತಿತ್ತು. ಅಲ್ಲಿಯೇ ಇದ್ದ ಮರದತ್ತ ಕತ್ತೆತ್ತಿ ನೋಡಿ ‘ನನಗೆ ತುಟ್ಟ ತುದಿಗೆ ಹೋಗಿ ಕೂರುವ ಆಸೆ; ಆದರೆ  ಅದಕ್ಕೆ ಬೇಕಾದ ಶಕ್ತಿ ಇಲ್ಲವೇ’ ಎಂದು ಪೇಚಾಡಿಕೊಂಡಿತು, ಕೋಳಿ. ‘ಸೆಗಣಿಯಲ್ಲಿ ಬೇಕಾದಷ್ಟು ಪೋಷಕಾಂಶಗಳಿರುತ್ತವೆ. ಯಾಕೆ ನೀನು ಅದನ್ನು ಸೇವಿಸಿ ಬಲ ಪಡೆದುಕೊಳ್ಳಬಾರದು?’ ಎತ್ತು ತನಗೆ ತೋಚಿದ ಸಲಹೆ ನೀಡಿ ಕೋಳಿಯನ್ನು ಪ್ರೋತ್ಸಾಹಿಸಿತು. ಒಂದು ಚೂರು ಕೆದಕಿ, ಸೆಗಣಿ ಸೇವಿಸಿದ ಕೋಳಿಗೆ ಶಕ್ತಿ ಕೂಡಿಕೊಂಡಿತು. ಮೆಲ್ಲಗೆ ಹೋಗಿ ಅತ್ಯಂತ ಕೆಳಗಡೆ ಇದ್ದ ರೆಂಬೆಯನ್ನು ಏರಿ ಕೂತಿತು. ಅಷ್ಟು ಸಾಧಿಸಿದ್ದಕ್ಕೆ ಬಹಳ ಖುಷಿ ಎನಿಸಿತು. ಮಾರನೇ ದಿನ ಬಂದು ಇನ್ನಷ್ಟು ಶಕ್ತಿ  ಸ್ವಲ್ಪ ಎತ್ತರದ ರೆಂಬೆಯೇರಲು ಅದಕ್ಕೆ ಸಾಧ್ಯವಾಯಿತು. ಹೀಗೇ ದಿನಗಳೆದು ಐದನೆಯ ದಿನ ಆಸೆಪಟ್ಟಂತೆ ಮರದ ತುದಿಗೆ ಏರಿ ಕೂತಿತು. ಅಲ್ಲಿಗೆ ಬಂದ ಒಬ್ಬ ರೈತ ಕತ್ತೆತ್ತಿ ನೋಡಿದರೆ, ಕೋಳಿ ಮರದ ಮೇಲೆ ಕೂತಿದೆ. ಇದ್ಯಾಕೆ ಇಲ್ಲಿ ಕೂತಿದೆ ಅಂದುಕೊಂಡವನೇ ಗನ್ ತೆಗೆದುಕೊಂಡು ‘ಢಮಾರ್’ ಎನಿಸಿದ.

 ವರ್ಚಸ್ಸು, ಚಮಕ್ ವಗೈರೆ ಎಂಬ ಕನಿಷ್ಠ ಅರ್ಹತೆಗಳು ತುದಿ ತನಕ ನಿಮ್ಮನ್ನು ಕರೆದೊಯ್ಯಬಹುದು; ಆದರೆ ಅಲ್ಲಿಯೇ ಉಳಿಯಲು ಖಂಡಿತ ನೆರವಾಗುವುದಿಲ್ಲ.

***

ಒಂದು  ಕಂಪನಿಯಲ್ಲಿ ಎಲ್ಲರೂ ಉತ್ಸಾಹೀ ತರುಣರಿದ್ದರು. ಎಲ್ಲರೂ ವೃತ್ತಿಯಲ್ಲಿ ಮೇಲೆ ಬರಬೇಕೆಂದು ಮನಸಿಟ್ಟು ಕೆಲಸ ಮಾಡುತ್ತಿದ್ದರು. ಸಾಮಾನ್ಯವಾಗಿ ಸಾಪ್‌ಟ್ವೇರ್ ಕಂಪನಿಗಳಲ್ಲಿ ಉದ್ಯೋಗಿಗಳನ್ನು ಉತ್ತೇಜಿಸುವ ಕೆಲಸವನ್ನು ಕಂಪನಿ ಆಗಾಗ ಮಾಡುತ್ತಿರುತ್ತದೆ. ಅದರಂತೆಯೇ ಆ ದಿನವೂ ಎಲ್ಲ ಉದ್ಯೋಗಿಗಳನ್ನೂ ಕಾನ್ಫರೆನ್‌ಸ್ ಹಾಲಿಗೆ ಬರುವಂತೆ ಹೇಳಲಾಯಿತು. ಉದ್ಯೋಗಿಗಳು ಅಲ್ಲಿಗೆ ಬಂದರೆ ಅವರಿಗೆಲ್ಲ ಆಶ್ಚರ‌್ಯ ಕಾದಿತ್ತು. ಇಡೀ ಹಾಲನ್ನು ಬಣ್ಣದ ಕಾಗದ ಹಾಗೂ ಬಲೂನುಗಳಿಂದ ತುಂಬಿಸಲಾಗಿತ್ತು. ಅಕ್ಷರಶಃ ಮಕ್ಕಳ ರೂಮಿನಂತೇ ಭಾಸವಾಗುತ್ತಿತ್ತು. ಹಾಲಿನ ಮಧ್ಯ ಭಾಗದಲ್ಲಿ  ಕರೆದು ಬಲೂನು ಊದಲು ಹೇಳಲಾಯಿತು. ಯಾರೂ ಒಡೆಯಬಾರದು. ಊದಿದ ಮೇಲೆ ಅದರ ಮೇಲೆ ತಮ್ಮ ಹೆಸರುಗಳನ್ನು ಬರೆಯಬೇಕೆಂದು ಹೇಳಲಾಯಿತು.

ಎಲ್ಲ ತರುಣ ಉತ್ಸಾಹಿ ಯುವಕ-ಯುವತಿಯರು ಬಹಳ ಕಾಳಜಿಯಿಂದ ಬಲೂನುಗಳನ್ನು ಊದಿ, ಅದರ ಮೇಲೆ ಹೆಸರು ಬರೆಯಲು ಪ್ರಾರಂಭಿಸಿದರು. ಆದರೆ ಎಲ್ಲರಿಗೂ ಹೆಸರು ಬರೆಯಲು ಸಾಧ್ಯವಾಗಲಿಲ್ಲ. ಪೆನ್ನಿನಿಂದ ಬರೆಯಲು ಪ್ರಾರಂಭಿಸುತ್ತಿದ್ದಂತೆ ಬಲೂನು ಒಡೆದು ಹೋಗುತ್ತಿತ್ತು. ಆಗ ಅಂಥವರಿಗೆ ಎರಡನೇ ಅವಕಾಶ ನೀಡಲಾಯಿತು. ಮೊದಲು ಬಲೂನನ್ನು ಒಡೆಯದೇ ಹೆಸರು ಬರೆದವರಿಗೆ ಆ  ಇನ್ನೊಂದು ರೂಮಿನಲ್ಲಿ ಹಾಕುವಂತೆ ಹೇಳಲಾಯಿತು. ಎರಡನೇ ಅವಕಾಶ ಪಡೆದವರೂ ಬಲೂನನ್ನು ಅಲ್ಲಿಯೇ ಹಾಕಿ ಬಂದರು.

ಈಗ ಮುಂದಿನ ಹಂತವಾಗಿ, ನಿಮ್ಮ ನಿಮ್ಮ ಹೆಸರಿರುವ ಬಲೂನುಗಳನ್ನು ಹುಡುಕಿ ಎಂದು ಹೇಳಲಾಯಿತು. ಆದರೆ ಯಾವ ಬಲೂನುಗಳೂ ಒಡೆಯಬಾರದು ಎಂದು ನಿಯಮವಿತ್ತು. ಪ್ರತಿಯೊಬ್ಬರು ಬಹಳ ಕೇರ್‌ಫುಲ್ ಆಗಿ ಹುಡುಕತೊಡಗಿದರು. ಏಷ್ಟೇ ಪ್ರಯತ್ನ ಪಟ್ಟರೂ ತಮ್ಮ ತಮ್ಮ ಹೆಸರಿನ ಬಲೂನು ಸಿಗುತ್ತಿರಲಿಲ್ಲ. ಗಡಿಬಿಡಿ ಮಾಡಿ ಹುಡುಕುವ ಹಾಗೂ ಇರಲಿಲ್ಲ. ಇತರರ ಹೆಸರಿದ್ದ ಬಲೂನು ಒಡೆದು  ಎಂಬ ಭಯ. ಕೊನೆಗೆ ಒಬ್ಬರಿಗೂ ಅವರ ಹೆಸರಿದ್ದ ಬಲೂನು ಸಿಗಲಿಲ್ಲ. ಈಗ ಅದೇ ಬಲೂನುಗಳನ್ನು ಇನ್ನೊಂದು ಕೋಣೆಗೆ ಹಾಕಿ, ನೀವು ಮತ್ತೊಬ್ಬರ ಬಲೂನು ಹುಡುಕಿ ಕೊಡಿ ಎಂದರು. ಐದು ನಿಮಿಷದೊಳಗೆ ಎಲ್ಲರಿಗೂ ಅವರವರ ಬಲೂನು ಸಿಕ್ಕಿತು!

ನಾವು ಸಮಸ್ಯೆಗಳನ್ನು ನಿಭಾಯಿಸುವುದು ಹೀಗೇ. ಇನ್ನೊಬ್ಬರೊಡನೆ ಹಂಚಿಕೊಂಡು, ಇನ್ನೊಬ್ಬರದನ್ನೂ ಕೇಳಿದಾಗ ಯಾವುದೂ ಸಮಸ್ಯೆ ಎನಿಸುವುದಿಲ್ಲ. ನಾವು ನಮ್ಮದೇ ಕೋಟೆಯೊಳಗೆ ಬಂಧಿಯಾಗುತ್ತಾ, ಮತ್ತೊಂದು ಮಾರ್ಗದ ಬಗ್ಗೆ ಯೋಚಿಸುವುದನ್ನೇ ನಿಲ್ಲಿಸಿದಾಗ ಸಮಸ್ಯೆ ಇನ್ನಷ್ಟು ಕಗ್ಗಂಟಾಗುತ್ತದೆ.

***

ಒಂದು ಕಾಡಿನಲ್ಲಿ ಸುಂದರವಾದ ಗುಲಾಬಿ ಹೂ ಅರಳಿತು. ಎಲ್ಲರೂ ಅದರ ಸೌಂದರ್ಯ ನೋಡಿ ಹೊಗಳುವವರೇ. ಅಲ್ಲೇ ಇದ್ದ ಮರವೊಂದು,‘ಆಹಾ ಎಷ್ಟು ಚಂದ ಇರುವೆ ನೀನು, ನಾನೂ ನಿನ್ನಂತೆಯೇ ಚಂದದ ಗುಲಾಬಿಯಾಗಿದ್ದರೆ..’ಎಂದಿತು. ಗುಲಾಬಿ ಹೂವಿಗೆ ಹೆಮ್ಮೆಯೋ ಹೆಮ್ಮೆ. ಸುತ್ತಲಿದ್ದ ಇತರ ಹೂಗಳೂ ಅದನ್ನು ಹೊಗಳಿದವು. ಇಡೀ ಕಾಡಿನಲ್ಲಿ ನನ್ನಷ್ಟು ಚಂದದ ಹೂವೇ ಇಲ್ಲ ಎಂದು ಬೀಗತೊಡಗಿತು ಗುಲಾಬಿ. ಅಲ್ಲದೇ ಪಕ್ಕದಲ್ಲಿದ್ದ ಪಾಪಾಸು ಕಳ್ಳಿಯನ್ನು ನೋಡಿ ಅಸಹ್ಯ ಪಟ್ಟಿತು. ಥೂ !ದೇವರು  ಕಂಡು ಇದನ್ನ ಸೃಷ್ಟಿ ಮಾಡಿದಾನಪ್ಪ, ಮೈತುಂಬಾ ಮುಳ್ಳು ಎಂದಿತು. ಆಗ ಅಲ್ಲೆ ಇದ್ದ ಇನ್ನೊಂದು ಹೂವು ಹೇಳಿತು, ಅಷ್ಟೆಲ್ಲ ಜಂಬ ಪಡಬೇಡ.ನಿನ್ನ ಮೈಗೂ ಮುಳ್ಳುಗಳಿವೆ ಎಂದಿತು. ಆದರೂ ಪಾಪಾಸುಕಳ್ಳಿಗೂ ನನಗೂ ಬಹಳ ವ್ಯತ್ಯಾಸವಿದೆ ಎಂದು ಇನ್ನಷ್ಟು ಕೊಂಕು ನುಡಿಯಿತು ಗುಲಾಬಿ.

ಗುಲಾಬಿ ಹೂ ಇಷ್ಟೆಲ್ಲ ಗೇಲಿ ಮಾಡುತ್ತಿದ್ದರೂ, ಪಾಪಾಸುಕಳ್ಳಿ ಮಾತ್ರ ಸ್ವಲ್ಪವೂ ಬೇಸರ ಪಟ್ಟುಕೊಳ್ಳಲಿಲ್ಲ. ‘ದೇವರು ಎಲ್ಲರನ್ನೂ ಅವರದ್ದೇ ಆದ ಉದ್ದೇಶಕ್ಕೆ ಸೃಷ್ಟಿಸಿರುತ್ತಾನೆ’ ಎಂದಷ್ಟೇ ಹೇಳಿ ಸುಮ್ಮನಾಯಿತು.

ಸಮಯ  ಕಾಡಿನಲ್ಲಿ ವಾತಾವರಣ ಬದಲಾಯಿತು. ಉರಿ ಬೇಸಿಗೆ ಬಂದು, ಕೆರೆ, ಹೊಳೆ,ತೊರೆಗಳೆಲ್ಲ ಬತ್ತಿ ಹೋದವು. ಮರಗಿಡಗಳು ಸೊರಗಿ ಬಾಡಿದವು. ಗುಲಾಬಿಯೂ ಒಂದು ಕಡೆಯಿಂದ ಒಣಗುತ್ತ ಬಂತು. ಆಗ ಗುಲಾಬಿಯು ವಿಚಿತ್ರವೊಂದನ್ನು ಕಂಡಿತು. ಹಕ್ಕಿಗಳೆಲ್ಲ ಪಾಪಾಸುಕಳ್ಳಿಯ ಮೇಲೆ ಕುಳಿತು, ತಮ್ಮ ಕೊಕ್ಕನ್ನು ಅದರೊಳಗೆ ತೂರಿಸಿ ರಸ ಹೀರಿ ಚೀಂವ್ ಚೀಂವ್ ಎಂದು ಸಂಭ್ರಮಿಸುತ್ತ ಹಾರಿ ಹೋಗುತ್ತಿದ್ದವು. ಇದನ್ನು ನೋಡಿ ಗುಲಾಬಿಗೆ ಗೊಂದಲವೋ ಗೊಂದಲ. ಆಗ ಮರವೊಂದು ಅದಕ್ಕೆ ವಿವರಿಸಿತು. ಹಕ್ಕಿಗಳು ಪಾಪಾಸುಕಳ್ಳಿಯ  ಶೇಖರಣೆಗೊಂಡಿರುವ ನೀರನ್ನು ಕುಡಿದು ಹೋಗುತ್ತಿವೆ ಎಂದು. ಇದರಿಂದ ಕಳ್ಳಿಗೆ ನೋವಾಗದೇ ಎಂದು ಕೇಳಿತು ಗುಲಾಬಿ. ಆಗುತ್ತದೆ. ಆದರೆ ಹಕ್ಕಿಗಳು ಬಾಯಾರಿ ಸಾಯುವುದು ಪಾಪಾಸುಕಳ್ಳಿಗೆ ಇಷ್ಟವಿಲ್ಲ ಎಂದಿತು ಮರ. ಮೊದಲೇ ಬಾಡಿದ್ದ ಗುಲಾಬಿ ಈಗ ಸಂಪೂರ್ಣ ತಲೆ ತಗ್ಗಿಸಿ ನಿಂತಿತು.

ಜಗತ್ತಿನಲ್ಲಿ ಯಾರನ್ನೂ ಹೊರ ನೋಟದಿಂದ ಹೀಗೇ ಎಂದು ಅಳೆಯಬಾರದು. ಎಲ್ಲರೂ ಅವರದ್ದೇ ಆದ ಉದ್ದೇಶಕ್ಕೆ ಈ ಭೂಮಿಗೆ ಬಂದಿರುತ್ತಾರೆ. ಬಂದ ಉದ್ದೇಶವನ್ನು ಪೂರ್ಣಗೊಳಿಸುತ್ತಿರುತ್ತಾರೆ.

??

‘ತೀವ್ರವಾಗಿ ಬದುಕಬೇಕು; ಪ್ರತಿ  ಚಟುವಟಿಕೆಯಿಂದಿರಬೇಕು. ಯಾವುದೇ ಕೆಲಸಕ್ಕೆ ಮುಂದಾದಾಗ ನಮ್ಮ ಗರಿಷ್ಠ ಪ್ರಯತ್ನ ಮಾಡಬೇಕು. ದಿನದ ಆರಂಭವನ್ನು ಬೇಗ ಮಾಡಬೇಕು, ದೈಹಿಕ ಕಸರತ್ತಿಗೆ ಒಂದಷ್ಟು ಸಮಯ ನೀಡಬೇಕು ಇತ್ಯಾದಿ…ಇತ್ಯಾದಿ’ ಜೀವನ ಕಲೆಯ ಉಪದೇಶಗಳಿಂದ ಹೈರಾಣಾಗಿದ್ದರೆ ಇಲ್ಲೊಂದು ಭಿನ್ನ ಯೋಚನೆ ಇದೆ ಓದಿ. ಮೇಲೆ ಹೇಳಿದ ವ್ಯಕ್ತಿತ್ವ ವಿಕಸನದ ಎಲ್ಲ ‘ತಾಕೀತು’ಗಳೂ ಚೆನ್ನಾಗಿಯೇ ಕೇಳಿಸುತ್ತವೆ. ಆದರೆ ಅವಕ್ಕೂ ಒಂದು ಕಡೆ ಗೆರೆ ಎಳೆದುಕೊಳ್ಳಬೇಕಾಗುತ್ತದೆ. ಹೀಗೆಲ್ಲಾ ಮಾಡಿಯೂ ಜೀವನವನ್ನು ಸವಿಯದೇ ಹೋಗುವ ಸಾಧ್ಯತೆಯಿದೆ! ಉದಾಹರಣೆಗೆ ಎಲ್ಲ  ದೈಹಿಕ ಕಸರತ್ತಿನಲ್ಲಿ ಮಗ್ನವಾಗಿರುವ ಜಿಮ್‌ಗೆ ಹೋದಾಗ ಕೆಲವರಿಗೆ ಆ ದೃಶ್ಯ ತಮಾಷೆಯಾಗಿ ತೋರಬಹುದು. ಜಿಮ್‌ಗೆ ಪ್ರತಿ ದಿನ ನಿಷ್ಠೆಯಿಂದ ಹೋಗಿ, ನಾಲ್ಕಾರು ಗಂಟೆ ದೇಹ ದಂಡಿಸಿ ಒಲಿಂಪಿಯನ್ ಆದವರಿಗೆ ಯಾರೊಂದಿಗಾದರೂ ಸ್ವಾರಸ್ಯಕರ ಸಂಭಾಷಣೆ ಆರಂಭಿಸುವುದು ಕಡು ಕಷ್ಟವಾಗಬಹುದು! ಜೀವನವನ್ನು ಹಾಗೆ ಕಳೆದುಹೋದ ಶ್ರೇಷ್ಠ ಕ್ರೀಡಾಪಟು, ವಿದಾಯ ಹೇಳುವ ವೇಳೆ ನಾಲ್ಕಾರು ಸ್ವರ್ಣ ಪದಕಗಳು ಅವರ ಕೀರ್ತಿ ಹೇಳಿದರೂ, ಅವರ ನಿಜ ವ್ಯಕ್ತಿತ್ವ ಯಾವುದಾದರೂ ನೈಜ ಹಿರಿಮೆ ಹೊಂದಿತ್ತೇ ಎನ್ನುವುದು  ಇಲ್ಲ.

ಯಾವುದೇ ಸಾಧಕರು ಅತಿ ಕಡಿಮೆ ನಿದ್ದೆ ಮಾಡುತ್ತಾರೆ; ನಸುಕಿನಲ್ಲಿಯೇ ಎದ್ದು ತಮ್ಮ ಕನಸಿನ ಬೆನ್ನಟ್ಟುತ್ತಾರೆ ಎಂಬುದೆಲ್ಲಾ ಸ್ಫೂರ್ತಿದಾಯಕ ಯೋಚನೆಗಳಾಗಿ ಸ್ಥಾಪಿತವಾಗಿರುವಾಗ ‘ಲೋಕವಿರೋಧಿ’ ಅಡ್ಡ ಮಾತಾಗಿಯೇ ಈ ಭಿನ್ನ ಯೋಚನೆ ಕೇಳಿಸಿದರೂ ಇದೊಂದು ಗಮನಿಸಬೇಕಾದ ವಿಚಾರ. ‘ಬದುಕಿನ ಯಾವುದೇ ಗಳಿಗೆಯಲ್ಲಿ, ಯಾವುದೇ ವಿಕಸನದಾಯಕ ಅಭ್ಯಾಸದೊಡನೆ ನನ್ನ ನಿಜವಾದ ಸಂತಸವನ್ನು ಬಿಕರಿಮಾಡಿಕೊಳ್ಳುವುದಿಲ್ಲ!’

ಹೀಗಿರುವುದೇ ಸಹಜ, ನಿಜದ ಮನುಷ್ಯ ಪ್ರವೃತ್ತಿ. ವೇಳೆ ಕಳೆಯಬಾರದು ಎಂದಲ್ಲ, ವೇಳೆ ಕಳೆಯಲು ವೇಳೆ ಮಾಡಿಕೊಳ್ಳುವುದು!