About Us Advertise with us Be a Reporter E-Paper

ಸಿನಿಮಾಸ್

ಒಂದಲ್ಲಾ.., ಎರಡಲ್ಲಾ… ಎಷ್ಟೊಂದು ಸಂಗತಿಗಳು..!

‘ರಾಮ ರಾಮ ರೇ..’ ಚಿತ್ರದ ಮೂಲಕ ಚಂದನವನದಲ್ಲಿ ಭರವಸೆ ಮೂಡಿಸಿದ್ದ ಯುವ ನಿರ್ದೇಶಕ ಡಿ. ಸತ್ಯ ಪ್ರಕಾಶ್, ಮತ್ತೊಂದು ವಿಭಿನ್ನ ಚಿತ್ರ ಪ್ರಯೋಗವನ್ನು ತೆರೆಗೆ ತರುವ ಉತ್ಸಾಹ ದಲ್ಲಿದ್ದಾರೆ. ಬಹುತೇಕ ‘ರಾಮಾ ರಾಮಾ ರೇ..’ ಚಿತ್ರತಂಡ ತಂತ್ರಜ್ಞರು ಸೇರಿ  ಹೊಸಚಿತ್ರ ‘ಒಂದಲ್ಲಾ.. ಎರಡಲ್ಲಾ…’ ಸದ್ಯಕ್ಕೆ ಸೆನ್ಸಾರ್ ಅಂಗಳದಲ್ಲಿದ್ದು, ಆಗಸ್‌ಟ್ ವೇಳೆಗೆ ತೆರೆಗೆ ಬರುವ ಸಾಧ್ಯತೆ ಇದೆ.

ಮತ್ತೊಂದೆಡೆ ಭರ್ಜರಿಯಾಗಿ ಚಿತ್ರದ ಪ್ರಮೋಷನ್‌ಸ್ ಗೆ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚೆಗೆ ಚಿತ್ರದ ಹಾಡುಗಳನ್ನು ಅದ್ದೂರಿಯಾಗಿ ಹೊರತಂದಿದೆ. ಚಾಮರಾಜಪೇಟೆಯಲ್ಲಿರುವ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ (ಕೆಸಿಕೆಎಸ್)ದ ಕಟ್ಟಡದಲ್ಲಿ ನಡೆದ ಸಮಾರಂಭದಲ್ಲಿ ನಿರ್ಮಾಪಕ ಕೆ.ಮಂಜು, ಯೋಗಿ ದ್ವಾರಕೀಶ್, ಶಾಸಕ ರಾಜುಗೌಡ, ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳಾದ ಕರಿಸುಬ್ಬು, ವೀರೇಶ್ ಮತ್ತಿತರರು ಉಪಸ್ಥಿತರಿದ್ದು ಆಡಿಯೋವನ್ನು  ಗೊಳಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.

ಇದೇ ವೇಳೆ ಮಾತನಾಡಿದ ನಿರ್ದೇಶಕ ಡಿ. ಸತ್ಯ ಪ್ರಕಾಶ್, ‘ಒಂದಲ್ಲಾ ಎರಡಲ್ಲಾ ಸಿನಿಮಾದಲ್ಲಿ ಪಾತ್ರಗಳು, ಸನ್ನಿವೇಶಗಳು, ವಿಚಿತ್ರ ದೃಶ್ಯಗಳು ಇರಲಿದೆ. ಹಿಂದಿನ ಚಿತ್ರದ ತಂತ್ರಜ್ಞರೇ ಈ ಸಿನಿಮಾದಲ್ಲೂ ಇದ್ದು, ಕಲಾವಿದರು ಮಾತ್ರ ಬದಲಾಗಿದ್ದಾರೆ. ಬಹುತೇಕ ಹೊಸಬರು ಮತ್ತು ರಂಗ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಎಲ್ಲರ ಮನಸ್ಸಿನಲ್ಲಿ ಚಿಕ್ಕ ಹುಡುಗನಿರುತ್ತಾನೆ. ಯಾವಾಗಲೂ ಮಗು ಮನಸ್ಸು ಎಲ್ಲರನ್ನು ಟಚ್ ಮಾಡುತ್ತದೆ. ನಮ್ಮ ನೆಮ್ಮದಿಯ ಬದುಕಿಗೆ ಅತ್ಯವಶ್ಯಕವಾಗಿರುವ  ಮತ್ತು ಪರರ ನೋವಿಗೆ ಸ್ಪಂದಿಸುವ ಗುಣ, ವಯಸ್ಸು, ಅಂತಸ್ತು, ಹಾಗೂ ವೃತ್ತಿಯನ್ನು ಮೀರಿ ಜಗತ್ತಿನ ಎಲ್ಲರಲ್ಲೂ ಇರಬಹುದೇ ಎಂದು ಇಣಿಕಿ ನೋಡುವ ಪ್ರಯತ್ನವನ್ನು ಮಾಡಲಾಗಿದೆ’ ಎಂಬ ಸಂಗತಿಯನ್ನು ತೆರೆದಿಟ್ಟರು.

ಇಲ್ಲಿಯವರೆಗೆ ಟೈಟಲ್ ಮತ್ತು ಟ್ರೇಲರ್ ಮೂಲಕ ಗಮನ ಸೆಳೆಯುತ್ತಿದ್ದ ‘ಒಂದಲ್ಲಾ ಎರಡಲ್ಲಾ’ ಚಿತ್ರ, ಈಗ ಹಾಡುಗಳ ಮೂಲಕ ಸಿನಿಪ್ರಿಯರನ್ನು ಸೆಳೆಯುತ್ತಿದೆ. ಬಿಡುಗಡೆಯಾಗಿರುವ ‘ಒಂದಲ್ಲಾ.. ಎರಡಲ್ಲಾ…’ ಚಿತ್ರದ ಹಾಡುಗಳು ಒಂದಕ್ಕಿಂತ ಒಂದು ಹೊಸತನದಿಂದ ಕೂಡಿವೆ. ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು,  ಹಾಡು ಚಿತ್ರದ ಇಡೀ ಆಶಯವನ್ನು ಹೇಳಲಿದ್ದು, ಆ ಹಾಡು ಟೈಟಲ್ ಕಾರ್ಡ್ ನಲ್ಲಿ ಬರಲಿದೆ. ಟೈಟಲ್ ಸಾಂಗ್ ಅನ್ನು ಅದಿತಿ ಮತ್ತು ಸುನಿದಿ ಎಂಬ ಇಬ್ಬರು ಮಕ್ಕಳು ಹಾಡಿದ್ದಾರೆ. ಉಳಿದ ಮೂರು ಹಾಡುಗಳು ಕಥೆ ಹೇಳುವ ಶೈಲಿಯಲ್ಲಿದ್ದು, ಸಂದರ್ಭಕ್ಕೆ ತಕ್ಕಂತೆ ಬಂದು ಹೋಗಲಿವೆ. ಈ ಮೂರು ಹಾಡುಗಳಿಗೆ ವಾಸುಕಿ ವೈಭವ್ ಧ್ವನಿಯಾಗಿದ್ದಾರೆ. ಚಿತ್ರದ ಹಾಡುಗಳಿಗೆ ವಾಸುಕಿ ವೈಭವ್ ಹಾಗೂ ನಬೀನ್ ಪಾಲ್ ಜಂಟಿಯಾಗಿ ಸಂಗೀತ ಸಂಯೋಜಿಸಿದ್ದಾರೆ. ನಾಲ್ಕೂ ಗೀತೆಗಳಿಗೂ  ಡಿ. ಸತ್ಯಪ್ರಕಾಶ್ ಅವರೇ ಸಾಹಿತ್ಯವನ್ನು ಬರೆದಿದ್ದಾರೆ.

‘ಒಂದಲ್ಲಾ  ಎರಡಲ್ಲಾ’ ಚಿತ್ರವನ್ನು ಹೆಬ್ಬುಲಿ ಚಿತ್ರದ ಖ್ಯಾತಿಯ ಉಮಾಪತಿ ನಿರ್ಮಿಸುತ್ತಿದ್ದು, ಚಿತ್ರಕ್ಕೆ ಡಿ. ಸತ್ಯಪ್ರಕಾಶ್ ಅವರೇ ಕಥೆ, ಚಿತ್ರಕಥೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ದೃಶ್ಯಗಳನ್ನು ಲವಿತ್ ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದು, ಬಿ.ಎಸ್. ಕೆಂಪರಾಜು ಸಂಕಲನ ಕಾರ್ಯ ಮಾಡಿದ್ದಾರೆ. ರೋಹಿತ್, ಆನಂದ್ ತುಮಕೂರ್, ಸಾಯಿಕೃಷ್ಣ  ಕುಡ್ಲಾ, ಎಂ.ಕೆ. ಮಠ, ರಂಗನಾಥ್, ಪ್ರಭುದೇವ್, ನಾಗಭೂಷಣ್ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಮಂಗಳೂರಿನಲ್ಲಿ  ಚಿತ್ರೀಕರಣ ನಡೆಸಲಾಗಿದೆ. ‘ರಾಮಾ ರಾಮಾ ರೇ..’ ಚಿತ್ರದಂತೆ, ‘ಒಂದಲ್ಲಾ.. ಎರಡಲ್ಲಾ…’ ಚಿತ್ರ ಕೂಡ ಚಂದನವನದಲ್ಲಿ ಸದ್ದು ಮಾಡಲಿದೆಯಾ ಎಂಬುದು ಇನ್ನೊಂದು ತಿಂಗಳಲ್ಲಿ ಗೊತ್ತಾಗಲಿದೆ.

Tags

Related Articles

Leave a Reply

Your email address will not be published. Required fields are marked *

Language
Close