About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

“ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಿದ್ರೆ, ಪ್ರಶಸ್ತಿಯ ಗೌರವ ಹೆಚ್ಚಾಗುತ್ತೆ”

ಮಾಜಿ ಸಿಎಂ ಜಗದೀಶ್ ಶೆಟ್ಟರ್

ತುಮಕೂರು: ಶಿವಕುಮಾರ ಶ್ರೀಗಳು ಒಂದು ಅದ್ಭುತ ಶಕ್ತಿ, ಅವರ ಮುಖದ ಕಳೆ ಕೂಡ ಅದ್ಭುತ, ಶ್ರೀಗಳು ಪವಾಡ ಪುರುಷರು, ಅವರ ದರ್ಶನ‌ ಪಡೆಯಲು‌ ಬಂದಿದ್ದೇನೆ. ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಿದರೆ, ಆ ಭಾರತ ರತ್ನ ಪ್ರಶಸ್ತಿಗೇ ಗೌರವ ಹೆಚ್ಚಾಗುತ್ತೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.

ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಜಗದೀಶ್ ಶೆಟ್ಟರ್, ಸಿದ್ದಗಂಗಾ ಶ್ರೀ ಆರೋಗ್ಯವಾಗಿ ಇನ್ನೂ ಹೆಚ್ಚು ಕಾಲ ಬಾಳಬೇಕು. ಧರ್ಮ ಜಾಗೃತಿ, ಸಾಮಾಜ ಸೇವೆ ಅತ್ಯವಶ್ಯಕವಾಗಿದೆ. ಸಿದ್ದಗಂಗಾ ಶ್ರೀಗಳ ಆರೋಗ್ಯ ಸುಧಾರಣೆಗಾಗಿ ನಾವೆಲ್ಲರು ಪ್ರಾರ್ಥಿಸಬೇಕು. ವೈದ್ಯರಿಗೂ‌ ಇದು ದೊಡ್ಡ ಸವಾಲು. ಆದ್ರೂ ನಾವು ಶಕ್ತಿ ಮೀರಿ ಪ್ರಯತ್ನ ಮಾಡುತಿದ್ದೇವೆ ಅಂತ ವೈದ್ಯರೂ ಹೇಳಿದ್ದಾರೆ.

ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ಸಿಗಬೇಕು, ಕೇಂದ್ರ ಸರ್ಕಾರವನ್ನ ಈ ಹಿಂದಿನಿಂದಲೂ ಶ್ರೀಗಳಿಗೆ ಭಾರತ ರತ್ನ ನೀಡಲು ಒತ್ತಾಯ ಮಾಡುತ್ತಿದ್ದೇವೆ. ಈಗಲೂ ಕೇಂದ್ರ ಸರ್ಕಾರದ ಮುಂದೆ ಬಿಜೆಪಿ‌ ನಿಯೋಗ ಹೋಗ್ತೀವಿ ಎಂದು ಅವರು ಹೇಳಿದರು.

Tags

Related Articles

Leave a Reply

Your email address will not be published. Required fields are marked *

Language
Close