About Us Advertise with us Be a Reporter E-Paper

Breaking Newsರಾಜ್ಯ

ರಾಯರ ದರ್ಶನ ಪಡೆದ ಮಾಜಿಪ್ರಧಾನಿ ದೇವೇಗೌಡ ದಂಪತಿ

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ರಾಯರ 347ನೇ ಆರಾಧನೆ ಮಹೋತ್ಸವದ ನಿಮಿತ್ತ ಉತ್ತರಾರಾಧನಾ ಮಹೋತ್ಸವ ನೆರವೇರಿತು.

ರಾಯರ ಉತ್ತರಾರಾಧನಾ ಮಹೋತ್ಸವ ನಿಮಿತ್ತ ಬುಧವಾರ ಮಾಜಿ ಪ್ರಧಾನಿ ದೇವೇಗೌಡರು ರಾಘವೇಂದ್ರಸ್ವಾಮಿ ದರ್ಶನ ಪಡೆದರು. ಪತ್ನಿ ಚನ್ನಮ್ಮ, ಪುತ್ರಿಯೊಂದಿಗೆ ಭೇಟಿ ನೀಡಿದ ದೇವೇಗೌಡರು ವೃಂದಾವನಕ್ಕೆ ಆರತಿ ಮಾಡಿದರು. ಇನ್ನು ಮೂಲ ವೃಂದಾವನ ದರ್ಶನ ಪಡೆಯಲು ಭಕ್ತಸಾಗರವೇ ಹರಿದು ಬರುತ್ತಿದೆ.

ಶನಿವಾರ ಸಂಜೆ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಗಳು ಗೋ ಪೂಜೆ, ಹಾಗೂ ವೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಆರಾಧನೆ ಉತ್ಸವಕ್ಕೆ ಚಾಲನೆ ನೀಡಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close