About Us Advertise with us Be a Reporter E-Paper

Breaking Newsರಾಜ್ಯ
Trending

21 ಜಿಲ್ಲೆಗಳಲ್ಲಿ ಅಧಿಕ ಮಳೆ

ಬೆಂಗಳೂರು: ಪ್ರಸಕ್ತ ಮುಂಗಾರು ಉತ್ತಮವಾಗಿ ಆಗಿದ್ದು, ರಾಜ್ಯದ 30 ಜಿಲ್ಲೆಗಳ ಪೈಕಿ 21 ಜಿಲ್ಲೆಗಳಲ್ಲಿ ಅಧಿಕ ವರ್ಷಧಾರೆಯಾಗಿದೆ ಎಂದು ಕಂದಾಯ ಇಲಾಖೆ ಮಾಹಿತಿಯಿಂದ ತಿಳಿದುಬಂದಿದೆ.

ಜೂನ್‌ 1-ಜುಲೈ 15ರ ಅವಧಿಯಲ್ಲಿ ಮಾನ್ಸೂನ್‌ನ ಪ್ರಭಾವದ ಕುರಿತು ಮಾಡಲಾದ ಅಧ್ಯಯನದಲ್ಲಿ, ಕರಾವಳಿ ಹಾಗು ಮಲೆನಾಡಿನ ಏಳು ಜಿಲ್ಲೆಗಳಲ್ಲಿ ಅತ್ಯಧಿಕ ಮಳೆಯಾಗಿದೆ ಎಂದು ತಿಳಿದುಬಂದಿದೆ.

“ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಹಾಗು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಯಥೇಚ್ಛವಾಗಿ ಮಳೆಯಾಗಿದ್ದು ಆಯಾ ಪ್ರದೇಶಗಳ ಜಲಾಶಯಗಳು ಭರ್ತಿಯಾಗಲು ಕಾರಣವಾಗಿವೆ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಮೈಸೂರು ಹಾಗು ಚಿತ್ರದುರ್ಗದಲ್ಲೂ ಅತ್ಯುತ್ತಮ ಮಳೆಯಾಗಿದೆ. ಹಾಸನ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ78 ರಷ್ಟು ಹೆಚ್ಚಿನ ಮಳೆಯಾಗಿದೆ” ಎಂದು ಆದಾಯ ಇಲಾಖೆಯಡಿ ಬರುವ ವಿಪತ್ತು ನಿರ್ವಹಣಾ ತಂಡದ ಉಪ ಕಾರ್ಯದರ್ಶಿ ಟಿ ನಾರಾಯಣಪ್ಪ ತಿಳಿಸಿದ್ದಾರೆ.

“ಮಳೆಯ ವಿತರಣೆ ಎಲ್ಲೆಡೆ ಸಮರ್ಪಕವಾಗಿ ಆಗಿಲ್ಲ. ಉತ್ತರ ಕರ್ನಾಟದಲ್ಲಿ ಸರಾಸರಿ 9% ನಷ್ಟು ಮಳೆ ಕೊರತೆಯಾಗಿದೆ. ರಾಯಚೂರು ಹಾಗು ಗದಗ ಜಿಲ್ಲೆಗಳಲ್ಲಿ ಬಹಳ ಕಡಿಮೆ ಮಳೆಯಾಗಿದೆ. ಮುಂದಿನ ವಾರಗಳಲ್ಲಿ ಈ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ ಎಂಬ ಭರವಸೆ ಇದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಂಗಳೂರು ನಗರ ಪ್ರದೇಶದಲ್ಲೂ 6% ನಷ್ಟು ಕಡಿಮೆ ಮಳೆಯಾಗಿದೆ. ಆದರೆ ಬೆಂಗಳೂರಿನ ಮಳೆಯಲ್ಲಿ ಹೆಚ್ಚಿನಂಶ ಆಗಸ್ಟ್‌ ಹಾಗು ಸೆಪ್ಟೆಂಬರ್‌ನಲ್ಲೇ ಆಗಲಿದೆ.

Related Articles

Leave a Reply

Your email address will not be published. Required fields are marked *

Language
Close