About Us Advertise with us Be a Reporter E-Paper

ಗೆಜೆಟಿಯರ್

ಯುಟ್ಯೂಬ್‌ನಿಂದ ಅತಿರಂಜಿತ ಸುದ್ದಿ ನಿಯಂತ್ರಣ

ಮಾಧ್ಯಮಗಳಲ್ಲಿ ಅತಿರಂಜಿತ ಮತ್ತು ಸುಳ್ಳು ಸುದ್ದಿಗೆ ಸಂಬಂಧಿಸಿದಂತೆ ಹೇಳುವುದಾದರೆ, ಒಮ್ಮೊಮ್ಮೆ ನಿಮಗೂ ಅನಿಸಿರಬಹುದು, ಯು ಟ್ಯೂಬ್‌ನ ಅದ್ಯಾವುದೋ ವಿಡಿಯೋ ಅಥವಾ ಯಾವುದೇ ಐತಿಹಾಸಿಕ ವಿವರ ಒಳಗೊಂಡ ವಿಎಇಯೋ ವರದಿಯು ನಿಜಕ್ಕೂ ಸತ್ಯವನ್ನು ಬಿಂಬಿಸುತ್ತಿವೆ ಅಥವಾ ಸಣ್ಣದಾಗಿ ಅನುಮಾನದ ಎಳೆಗಳನ್ನು ಹುಟ್ಟಿಸುತ್ತಿದೆಯೇ ಎಂದು! ಇತ್ತೀಚೆಗೆ ಯೂಟ್ಯೂಬ್‌ನಲ್ಲಿ ಪುಂಖಾನುಪುಂಕವಾಗಿ ಬರುತ್ತಿರುವ ಆರೋಗ್ಯದ ಸಂಬಂಧಿಸಿದ ವಿಡಿಯೋಗಳು, ಶಕ್ತಿ ವರ್ಧನೆಯ ವಿಡಿಯೋಗಳು, ಪ್ರೀತಿಗೆ ಸಂಬಂಧಿಸಿದ ವಿಡಿಯೋಗಳು, ಇತಿಹಾಸದ ಫೋಟೊಗಳ ವಿಡಿಯೊಗಳುಸತ್ಯದ ಜತೆ ಹಸಿ ಹಸಿ ಸೀರಿಸಿ ಬಿತ್ತರಿಸುತ್ತಿವೆಯೇನೋ ಎಂಬ ಅನುಮಾನವೂ ನಿಮ್ಮಲ್ಲಿ ಬಂದಿರಬಹದು – ಅಲ್ಲವೇ?

ಅಂತಹ ಅನುಮಾನ ಮತ್ತು ಕಾಳಜಿಯನ್ನು ಗಮನಿಸಿ, ಯೂಟ್ಯೂಬ್ ಈಗ ಒಂದು ಘೋಷಣೆ ಮಾಡಿದೆ. ಒಳಸಂಚಿನ ಅಥವಾ ತಪ್ಪು ವೈಜ್ಞಾನಿಕ ಮತ್ತು ವೈದ್ಯಕೀಯ ಮಾಹಿತಿ ನೀಡುವ ವಿಡಿಯೋಗಳನ್ನು ಅದು ಇನ್ನು ಮುಂದೆ ತನ್ನ ಬಳಕೆದಾರರಿಗೆ ರೆಕಮಂಡ್ ಮಾಡುವುದಿಲ್ಲ. ‘ಭೂಮಿ ಚಪ್ಪಟೆಯಾಗಿದೆ’ ‘ಚಂದ್ರನ ಮೇಲೆ ಮನುಷ್ಯ ನಡೆದೇ ಇಲ್ಲ’ ‘ಇದೊಂದು ಎಲೆಯನ್ನು ತಿನ್ನುತ್ತಾ ಹೋದರೆ ಎಲ್ಲಾ ಕ್ಯಾನ್ಸರ್ ವಾಸಿಯಾಗುತ್ತದೆ’ ‘ಈ ಶಿಲ್ಪಕಲಾಕೃತಿ 50 ಸಾವಿರ ವರ್ಷ ಹಿಂದಿನದು’ ಮೊದಲಾದ ಅತಿರಂಜಿತ ವಿಡಿಯೋಗಳನ್ನು ಇನ್ನು ಮುಂದೆ ಯುಟ್ಯೂಬ್ ರೆಕಮಂಡ್ ಮಾಡುವುದಿಲ್ಲ.

ಇಷ್ಟು ದಿನ ಒಬ್ಬ ಬಳಕೆದಾರ ಒಂದು ವಿಡಿಯೋವನ್ನು ನೋಡಿದರೆ, ಅದನ್ನು ಹೋಲುವ ಇತರ ವಿಡಿಯೋಗಳನ್ನು ಯೂಟ್ಯೂಬ್ ಅವರಿಗೆ ರೆಕಮಂಡ್ ಮಾಡುತ್ತಿತ್ತು ಅಥವಾ ಬಲಭಾಗದ ಪಟ್ಟಿಯಲ್ಲಿ ನ್ಯೂಸ್ ಫೀಡ್ ರೀತಿ ಕಾಣಿಸಿಕೊಳ್ಳುವಂತೆ ಮಾಡುತ್ತಿತ್ತು. ಗಾಳಿ ಸುದ್ದಿಯಂತಹ ಸುದ್ದಿಗಳಕುರಿತು ಇನ್ನು ಮುಂದೆ ಯೂಟ್ಯೂಬ್ ಶಿಫರಸ್ ಮಾಡುವುದಿಲ್ಲ. ಇದರಿಂದಾಗಿ ಸುಳ್ಳು ಸುದ್ದಿಯು ಬೇಗನೆ ಹರಡುವ ಕಡಿಮೆಯಾಗುತ್ತದೆ ಮತ್ತು ವೈಜ್ಞಾನಿಕ ಚಿಂತನೆಗೆ ಸ್ವಲ್ಪ ಮಟ್ಟಿಗೆ ಅವಕಾಶ ನೀಡಲಾಗುತ್ತದೆ, ಬಳಕೆದಾರರು ತಮ್ಮ ವಿವೇಚನೆಯನ್ನು ಉಪಯೋಗಿಸಿ ತಮಗೆ ಇಷ್ಟ ಬೆಳೆಸುವ ವಿಡಿಯೋ ಗಳನ್ನು ನೋಡಲು ಅನುವು ಮಾಡಿಕೊಡುತ್ತದೆ ಎಂದಿದೆ ಯುಟ್ಯೂಬ್.

ಯೂಟ್ಯೂಬ್ ರೆಕಮೆಂಡ್ ಮಾಡದೇ ಇದ್ದರೂ ಅಂತಹ ವಿಡಿಯೋಗಳು ಟ್ಯೂಬ್ ನಲ್ಲಿ ಇದ್ದೇ ಇರುತ್ತವೆ ಮತ್ತು ಬಳಕೆದಾರರು ಅದನ್ನು ತಮ್ಮ ವಿವೇಚನೆಯಂತೆ ಆಯ್ದುಕೊಂಡು ನೋಡಬಹುದು. ಅಂತಹ ವಿಡಿಯೊಗಳನ್ನು ಅಪ್‌ಲೋಡ್ ಮಾಡಲು ಸಹ ಅವಕಾಸ ಇದೆ, ಏಕೆಂದರೆ ಅದನ್ನು ಒಂದು ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುತ್ತದೆ ಈ ಆನ್ಲೈನ್ ಮಾಧ್ಯಮ.

Tags

Related Articles

Leave a Reply

Your email address will not be published. Required fields are marked *

Language
Close