About Us Advertise with us Be a Reporter E-Paper

ವಿ +

ಫೇಸ್‌ಬುಕ್ ಗೋಡೆಯಲ್ಲೀಗ ‘ಬೀಗಬೇಡ’

• ಸೋಮಲಿಂಗಪ್ಪ ಬೆಣ್ಣಿ ಗುಳದಳ್ಳಿ

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಒಂದಾದ ಮೇಲೆ ಒಂದರಂತೆ ವೈಚಾರಿಕ ಕ್ರಾಂತಿಗಳೇ  ಇತ್ತೀಚೆಗೆ ತಾನೇ ‘ಫಿಟ್ನೆಸ್ ಛಾಲೆಂಜ್’ ರಾಷ್ಟ್ರ ಮಟ್ಟದಲ್ಲಿಯೇ ಒಂದು ಹೊಸ ಸಂಚಲನವನ್ನೇ ಮೂಡಿಸಿತ್ತು. ಅವರವರ ಕಾರ್ಯದಕ್ಷತೆಯನ್ನು ಹೆಚ್ಚಿಸಲು ತಾವು ಕೈಗೊಳ್ಳುವ ಫಿಟ್ನೆಸ್ ವಿಧಾನವನ್ನು ಹರಿಯಬಿಟ್ಟು ಆ ಸವಾಲನ್ನು ಮತ್ತೊಬ್ಬರಿಗೆ ವರ್ಗಾಯಿಸುವ ಮೂಲಕ ಸರಣಿ ಮುಂದುವರಿ ಯುತ್ತಿತ್ತು. ಈ ಸವಾಲುಗಳನ್ನು ಸ್ವೀಕರಿಸುವವರೂ, ಅಷ್ಟೇ ಗಂಭೀರವಾಗಿ ಪರಿಗಣಿಸಿ, ಸಕಾರಾತ್ಮಕವಾಗಿ ಸ್ಪಂದಿಸಿದ್ದೂ ಇತಿಹಾಸ. ಅದಾದ ಬಳಿಕ ಓದುವಿಕೆಯ ತುಡಿತಕ್ಕೆ ಮತ್ತಷ್ಟು ಚುರುಕು ಮುಟ್ಟಿಸುವಂತೆ ‘ಏಳು ದಿನ, ಏಳು ಪುಸ್ತಕ’ ಎಂಬ ವಿನೂತನ ಚಳುವಳಿಯೇ  ಇದೀಗ ತಣ್ಣಗಾಗಿದೆ. ಸತತ ಏಳು ದಿನಗಳವರೆಗೆ, ಪುಸ್ತಕದ ಶೀರ್ಷಿಕೆ ಮತ್ತು ಆ ಪುಸ್ತಕದ ಓದಿನ ಅನುಭವವನ್ನು ಚಿತ್ರ ಸಮೇತ  ಹಂಚಿಕೊಂಡು ಕೊನೆಯ ದಿನ ಆ ಸವಾಲನ್ನು ಮತ್ತೊಬ್ಬರಿಗೆ ವರ್ಗಾಯಿಸುವ ಮೂಲಕ ಆ ಸರಣಿಯನ್ನು ಹಾಗೇ ಮುಂದುವರಿಸಲಾಗುತ್ತಿತ್ತು. ಅದೆಷ್ಟೋ ಸಾಹಿತ್ಯಾಸಕ್ತರು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಈ ವಿನೂತನ ಕ್ರಾಂತಿಗೆ ಹೊಸ ಭಾಷ್ಯೆಯನ್ನೇ ಬರೆದರು.

ಏನಿದು ಬೀಗಬೇಡ?

ಮತ್ತೇ ಈಗ ಫೇಸ್‌ಬುಕ್‌ನಲ್ಲಿ ಬೀಗಬೇಡ ಪರ್ವ ಶುರು ವಾಗಿದೆ. ಯಾರೋ ಪುಣ್ಯಾತ್ಮರು ಪ್ರಾರಂಭಿಸಿದ  ಬೀಗಬೇಡ ಪರ್ವ ಸಾಮಾಜಿಕ ಜಾಲತಾಣ ಲೋಕದಲ್ಲಿ ಹೊಸ ಚಳುವಳಿ ಯನ್ನೇ ಸೃಷ್ಟಿಸಿದೆ. ಅದೆಷ್ಟೋ ಜನ ಕಲ್ಪನೆ ಹಾಗೂ ವಾಸ್ತವಗಳ ನಡುವೆ ವ್ಯತ್ಯಾಸವನ್ನೇ ತಿಳಿಯದಂತೆ ವರ್ತಿಸುತ್ತಿರುತ್ತಾರೆ. ಹಣ ಬಲ, ಅಧಿಕಾರ ಬಲ, ತೋಳ್ಬಲಗಳ ಮದದಿಂದ ಬೀಗು ತ್ತಿರುತ್ತಾರೆ. ಅಂತಹ ವಿಚಾರಗಳ ಮೇಲೆ ಬೆಳಕು ಚೆಲ್ಲುವಂತಹ ನಾಲ್ಕೈದು ಸಾಲಿನ ಬರಹಗಳು ಅಷ್ಟೇ ಅರ್ಥದಿಂದ ಹಾಗೂ ಅಷ್ಟೇ ವಿಡಂಬನಾತ್ಮವಾಗಿ ಹಾಗೂ ಅಷ್ಟೇ ಹಾಸ್ಯಮಯವಾಗಿ ಎಲ್ಲರಿಗೂ ಇಷ್ಟವಾಗುತ್ತವೆ. ಇಂತಹ ಸ್ವಾರಸ್ಯಪೂರ್ಣವಾದ ಸಾಲುಗಳಲ್ಲಿ ಬೀಗಬೇಡ ಪದ  ಸಾಲುಗಳಿಗೆ ಮೆರಗು ನೀಡು ತ್ತದೆ. ಒಂದು ವಿಚಾರಕ್ಕೆ ಪ್ರತಿಯಾಗಿ ಮತ್ತೊಂದು ವಿಚಾರ ಅದೇ ಬೀಗಬೇಡ ಪದದ ಸ್ವಾರಸ್ಯವನ್ನೇ ಇಟ್ಟುಕೊಂಡು ರಚನೆ ಯಾಗುತ್ತದೆ. ಹಲವು ವಿಚಾರವಂತರು, ಯುವಕರು ಅತ್ಯಂತ ಕ್ರೀಯಾಶಿಲತೆಯಿಂದ ಇದರಲ್ಲಿ ಪಾಲ್ಗೊಳ್ಳುತ್ತಾರೆ. ಪ್ರಸ್ತುತ ವಿದ್ಯಮಾನಗಳೇ ಈ ಸಾಲುಗಳಿಗೆ ವಿಷಯವಸ್ತುವಾಗುವುದು ಇದರ ವಿಶೇಷತೆ. ಇದೊಂದು ಅನೌಪಚಾರಿಕ ಪ್ರಕ್ರಿಯೆ. ಓದುಗರಿಗೆ ಮಜಾ ತಂದು ಕೊಡುತ್ತವೆ.

ಉದಾಹರಣೆಗೆ, ‘ಬೇಡ ಹೀಗೆ ಬೀಗಬೇಡ, ನಿನ್ನನ್ನೂ ಶಿಕಾರಿ ಮಾಡಲು ನಿನ್ನ ಹಿಂದೆಯೇ ಇದ್ದಾನೆ ಮತ್ತೊಬ್ಬ ಬೇಡ.’  ಶ್ರೇಷ್ಠ ಎಂದು ಬೀಗುವವರಿಗೆ ಈ ಸಾಲು ಅನ್ವಯವಾಗುತ್ತದೆ. ‘ಮನೆಗೆ ಬೀಗ ಹಾಕಿದ್ದೇನೆಂದು ಬೀಗಬೇಡ, ಪ್ಯಾಂಟಿನ ಬೀಗ (ಜಿಪ್) ಹಾಕದಿರುವವರನ್ನೂ ನೋಡಿದ್ದೇನೆ,’ ನನ್ನ ಸಂಪತ್ತು ಸುಭದ್ರವಾಗಿದೆ ಎಂದು ಬೀಗುವವರಿಗೆ ಈ ಸಾಲು ಚಾಟಿ ನೀಡುತ್ತದೆ. ‘ವಯಸ್ಸು 25 ಆಯ್ತು ಇನ್ನೂ ಮದುವೆಯಾಗಿಲ್ಲ ಎಂದು ಬೀಗಬೇಡ. ವಯಸ್ಸು 49 ಆದರೂ ನಾನಿನ್ನೂ ಯುವಕ ಅಂತ ದೇಶ ಸುತ್ತುತ್ತಿರುವುದನ್ನು ನಾವು ಕಂಡಿದ್ದೇವೆ.’ ‘ನನ್ನ ಬಳಿ ಸಾಕಷ್ಟು ಹಣವಿದೆ ಎಂದು ಮೆರೆದಾಡಬೇಡ, ನೋಟ್ ಬ್ಯಾನ್  ಬಾಯಿ ಬಾಯಿ ಬಡ್ಕೊಂಡವರನ್ನು ನೋಡಿದ್ದೇನೆ’ ಈ ಸಾಲು ಧನದಾಹಿಗಳಿಗೆ ಬಡವರತ್ತ ಕಣ್ತೆರೆದು ನೋಡು ಎಂದು ಹೇಳುವಂತಿದೆ. ಹೀಗೆ ಹತ್ತು ಹಲವು ಕ್ರಿಯಾಶಿಲ ಬರಹಗಳ ಕ್ರಾಂತಿಯೇ ಸಧ್ಯ ಫೇಸ್‌ಬುಕ್ ಗೋಡೆಗಳಲ್ಲಿ ಸದ್ದು ಮಾಡುತ್ತಿದೆ. ಒಟ್ಟಾರೆ ಹಲವು ಜನಪ್ರಿಯ, ವೈಚಾರಿಕ ಕ್ರಾಂತಿಯ ಮೂಲಕ ಸಾಹಿತ್ಯದ ವಿಭಿನ್ನ ರೂಪಾಂತರವನ್ನು ಪ್ರಸ್ತುತ ಪಡಿಸುತ್ತಿರುವ ಫೇಸ್‌ಬುಕ್ ಎಂಬ ಮಾಯಾಜಾಲವು ಇಂದಿನ ಯುವಕರ ದಾರಿ ತಪ್ಪಿಸುತ್ತಿದೆ ಎಂಬ ಆರೋಪಕ್ಕೆ ಅಪವಾದ ವಾಗುತ್ತಿದೆ. ಇದೊಂದು ಒಳ್ಳೆಯ ಬೆಳವಣಿಗೆ. ಇಂತಹ  ಸಾಹಿತ್ಯ ಮತ್ತು ವೈಚಾರಿಕ ಕ್ಷೇತ್ರದಲ್ಲಿ ಹೊಸ ಬದಲಾವಣೆ ಸಾಧ್ಯ.

Tags

Related Articles

Leave a Reply

Your email address will not be published. Required fields are marked *

Language
Close