About Us Advertise with us Be a Reporter E-Paper

Breaking Newsರಾಜ್ಯ

ನಕಲಿ ಎಟಿಎಂ ಕಾರ್ಡ್ ಬಳಸಿ ಹಣ ಕದಿಯುತ್ತಿದ್ದ ಉಗಾಂಡ ಚೋರರು ಅರೆಸ್ಟ್

ಬೆಂಗಳೂರು: ಉದ್ಯಾನನಗರಿಯಲ್ಲಿ ನಕಲಿ ಎಟಿಎಂ ಕಾರ್ಡ್ ಬಳಸಿ ಹಣ ಕದಿಯುತ್ತಿದ್ದ ಉಗಾಂಡ ಮೂಲದ ಕುಖ್ಯಾತ ಎಟಿಎಂ ಕಳ್ಳರಿಬ್ಬರನ್ನು ಕೊತ್ತನೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಾಬಾಲ್ಯಾಂಡ್ ಅಮೊನೋ, ಉಗಿಂಡೊ ಅಂಬ್ರೋಸ್ ಬಂಧಿತ ಆರೋಪಿಗಳು. ಬಂಧಿತ ಕಳ್ಳರಿಬ್ಬರು  ಎಟಿಎಂ ಕಾರ್ಡ್ ಡಾಟಾ ಕಳ್ಳತನ ಮಾಡಿ ನಕಲಿ ಎಟಿಎಂ ಕಾರ್ಡ್ ಗಳನ್ನು ಬಳಸಿ ಹಣ ಕದಿಯುತ್ತಿದ್ದರು. ಎಟಿಎಂ ಮೆಷಿನ್‍ಗಳಿಗೆ ಸ್ಕಿಮ್ಮಿಂಗ್ ಮೆಷಿನ್ ಬಳಸಿ ಎಟಿಎಂನಿಂದ ದುಡ್ಡು ಕಳ್ಳತನ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಆರೋಪಿಗಳಿಬ್ಬರು ದೇಶದ ವಿವಿಧ ನಗರಗಳಲ್ಲಿ ನಕಲಿ ಎಟಿಎಂ ಬಳಸಿ ಹಣ ಡ್ರಾ ಮಾಡುತ್ತಿದ್ದರು. ಬಂಧಿತರಿಂದ 2 ಲ್ಯಾಪ್‍ಟಾಪ್, 4 ಎಟಿಎಂ ಕಾರ್ಡ್ ಸ್ಕಿಮ್ಮಿಂಗ್ ಮೆಷಿನ್, 2 ಮೈಕ್ರೋ ಚಿಪ್ ಕ್ಯಾಮಕಾ ಪ್ಲೇಟ್, ಇಂಟರ್ನೆಟ್ ಡೋಂಗಲ್, 4 ಎಟಿಎಂ ಕಾರ್ಡ್, 60 ಪ್ಲೇನ್ ಎಟಿಎಂ ಕಾರ್ಡ್ ಗಳು, ಬಿಳಿಬಣ್ಣದ 100 ಕಾರ್ಡ್ ಗಳು ಹಾಗೂ 50 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ಬಂಧನದಿಂದ 20ಕ್ಕೂ ಹೆಚ್ಚು ಪ್ರಕರಣ ಬೆಳಕಿಗೆ ಬಂದಿದೆ.

Tags

Related Articles

Leave a Reply

Your email address will not be published. Required fields are marked *

Language
Close